ಬೆಂಗಳೂರು: ನಟ ಉಪೇಂದ್ರ ಅಭಿನಯದ ‘ಐ ಲವ್ ಯೂ’ ಸಿನಿಮಾದ ಬಗ್ಗೆ ಕಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ನಟ ಹುಚ್ಚ ವೆಂಕಟ್ ಹೇಳಿಕೆಗೆ ಉಪ್ಪಿ ಅಭಿಮಾನಿಗಳು ಗರಂ ಆಗಿದ್ದಾರೆ. ಸದ್ಯ ಈ ಸಂಬಂಧ ಹುಚ್ಚ ವೆಂಕಟ್ ಬಹಿರಂಗವಾಗಿ ಉಪೇಂದ್ರ ಹಾಗೂ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.
‘ಐ ಲವ್ ಯೂ’ ಸಿನಿಮಾ ನೋಡಿದ ಬಳಿಕ ಮಾತನಾಡಿದ ಅವರು, ನಿರ್ದೇಶಕರಾದ ಆರ್, ಚಂದ್ರು ಅವರಿಗೆ ಹಾಗೂ ಉಪೇಂದ್ರ ಅವರಿಗೆ ನಾನು ಕ್ಷಮೆ ಕೇಳುತ್ತೇನೆ. ಸಿನಿಮಾ ಟ್ರೇಲರ್ ನೋಡಿ ನಾನು ಈ ಬಗ್ಗೆ ಬೇಸರ ವ್ಯಕ್ತಪಡಿಸಲಾಗಿತ್ತು. ಆದರೆ ಈಗ ಸಿನಿಮಾ ನೋಡಿದ್ದು, ಇಡೀ ಕುಟುಂಬ ಕುಳಿತು ನೋಡಿ ಕುಳಿತು ನೋಡಬಹುದಾದ ಸಿನಿಮಾ ಇದಾಗಿದೆ ಎಂದರು.
Advertisement
Advertisement
ಇದಕ್ಕೂ ಮುನ್ನ ‘ಐ ಲವ್ ಯೂ’ ಸಿನಿಮಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಹುಚ್ಚ ವೆಂಕಟ್, ಸಿನಿಮಾದಲ್ಲಿ ಮೂಡಿ ಬರುತ್ತಿದ್ದ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಉಪೇಂದ್ರ ಅಭಿಮಾನಿಗಳು ಗರಂ ಆಗಿದ್ದರು. ಸಿನಿಮಾ ನೋಡದೆ ಈ ರೀತಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಆದ್ದರಿಂದಲೇ ಅವರಿಗೆ ಸಿನಿಮಾ ನೋಡುವಂತೆ ಮಾಡಲು ಮುಂದಾಗಿ ಅವರ ಮನೆಗೆ ತೆರಳಿ ಸಿನಿಮಾ ಥಿಯೇಟರ್ ಗೆ ಕರೆ ತಂದಿದ್ದರು. ಇದನ್ನು ಓದಿ: ಉಪ್ಪಿ-ರಚ್ಚು ಮಧ್ಯೆ I Love You ವಾರ್- ಬುದ್ಧಿವಂತನ ಮೊದಲ ಪ್ರತಿಕ್ರಿಯೆ
Advertisement
ಹುಚ್ಚ ವೆಂಕಟ್ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಉಪೇಂದ್ರ ಅಭಿಮಾನಿಗಳು, ಅವರ ಹುಚ್ಚಾಟಕ್ಕೆ ಈ ರೀತಿ ಹೇಳಿಕೆಗಳನ್ನು ನೀಡುತ್ತಾರೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳಲು ಈ ರೀತಿ ಹೇಳಿಕೆಗಳನ್ನ ನೀಡುತ್ತಾರೆ. ಆದ್ದರಿಂದಲೇ ಅವರಿಗೆ ಸಿನಿಮಾ ನೋಡಲು ಕರೆತಂದಿದ್ದೇವೆ. ಸಿನಿಮಾ ಉತ್ತಮವಾಗಿ ಇದ್ದರು ಸಿನಿಮಾ ನೋಡದೆ ಹೇಳಿಕೆ ನೀಡುವುದು ಉತ್ತಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.