– ಕಿಮ್ಸ್ ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿ: ವಿಚಿತ್ರ ಕಾಯಿಲೆಯಿಂದ ಯುವಕನೊಬ್ಬ ಜೀವಂತವಾಗಿ ಕೊಳೆಯುತ್ತಿರುವ ಘಟನೆ ಹಳೆ ಹುಬ್ಬಳ್ಳಿಯ ಆನಂದ ನಗರದ ಬೆಳಕಿಗೆ ಬಂದಿದೆ.
ರೋಗಕ್ಕೆ ತುತ್ತಾದ ಯುವಕನನ್ನು ಇರ್ಫಾನ್ ಮನಿಯಾರ (22) ಎಂದು ಗುರುತಿಸಲಾಗಿದೆ. ಈತ ವಿಚಿತ್ರವಾದ ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಕಳೆದ ಎರಡು ತಿಂಗಳ ಹಿಂದೆ ಕುತ್ತಿಗೆಯ ಭಾಗಕ್ಕೆ ಮೊಡವೆಗಳು ಕಾಣಿಸಿಕೊಂಡಿದ್ದವು. ಆದರೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಎಷ್ಟೇ ಚಿಕಿತ್ಸೆ ಪಡೆದರೂ ಗುಣಮುಖವಾಗದ ಕಾರಣ ಮನೆಯಲ್ಲೇ ಉಳಿದುಕೊಂಡಿದ್ದ.
ಕಳೆದ ಕೆಲ ದಿನಗಳಿಂದ ರೋಗ ಜಾಸ್ತಿಯಾಗಿ ದೇಹದ ಭಾಗಗಳಲ್ಲಿ ಕೊಳೆಯುವ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೆ ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿವೆ. ಹೀಗಾಗಿ ಕೈಚೆಲ್ಲಿ ಕುಳಿತ ಕುಟುಂಬ ಆಸ್ಪತ್ರೆಗೆ ತೋರಿಸಿರಲಿಲ್ಲ. ಆದರೆ ಈಗ ಸಹಾಯಕ್ಕೆ ಬಂದ ಅಂಗನವಾಡಿ ಶಿಕ್ಷಕಿ ಹಾಗೂ ಕಾಂಗ್ರೆಸ್ ಮುಖಂಡ ಇಮ್ರಾನ್ ಎಲಿಗಾರ, ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕುಟುಂಬದ ಆಧಾರವಾಗಿದ್ದ ಒಬ್ಬನೇ ಮಗನಿಗೆ ವಿಚಿತ್ರವಾದ ಚರ್ಮರೋಗ ಕಾಣಿಸಿಕೊಂಡಿದ್ದು, ಇಡೀ ಕುಟುಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.