– 90 ಸಾವಿರ ಉದ್ಯೋಗ ಸೃಷ್ಟಿ
ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಒಟ್ಟು 51 ಕಂಪನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸಮಾವೇಶದ ಬಳಿಕ ಡೆನಿಸ್ಸನ್ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಮಾವೇಶದ ಕುರಿತು ಮಾಹಿತಿ ನೀಡಿದರು. ಇನ್ವೆಸ್ಟ್ ಕರ್ನಾಟಕ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡಿದೆ. 1500 ಕ್ಕೂ ಹೆಚ್ಚು ಉದ್ಯಮಿಗಳು ಆಗಮಿದ್ದರು. 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಯು ಈ ಸಮಾವೇಶದ ಯಶಸ್ಸಿಗೆ ಸಾಕ್ಷಿಯಾದವು ಎಂದರು.
Advertisement
Advertisement
ಒಟ್ಟು ಸಮಾವೇಶದಲ್ಲಿ 51 ಕಂಪನಿಗಳೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದು, 72 ಸಾವಿರ ಕೋಟಿ ಹೂಡಿಕೆ ಹರಿದು ಬರಲಿದೆ. ಇದರಿಂದ 90 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ವಿವರಿಸಿದರು.
Advertisement
ಇನ್ವೆಸ್ಟ್ ಮಾಡಿದ ಕಂಪನಿಗಳು:
ರಾಜೇಶ್ ಎಕ್ಸ್ ಪೋಟ್ರ್ಸ್ ಲಿಮಿಟೆಡ್ 50 ಸಾವಿರ ಕೋಟಿ, ಸೊನಾಲಿ ಪವರ್ ಪ್ರೈವೆಟ್ ಲಿಮಿಟೆಡ್ ಕಂಪನಿಯು 4800 ಕೋಟಿ ರೂ., ನ್ಯಾಟ್‍ಕ್ಯಾಪ್ ಪವರ್ ಪ್ರೈವೆಟ್ ಲಿಮಿಟೆಡ್ 3000 ಕೋಟಿ, ಜೆಟ್‍ವಿಂಗ್ಸ್ ಏರೋಸ್ಪೇಸ್ ಆಂಡ್ ಏವಿಯೇಷನ್ 2060 ಕೋಟಿ, ಅಯನಾ ರಿನಿವೆಬಲ್ ಪವರ್ ಪ್ರೈವೆಟ್ ಲಿಮಿಟೆಡ್ 3000 ಕೋಟಿ, ಲುಗ್ಸೋರ್ ಎನರ್ಜಿ ಪ್ರೈವೆಟ್ ಲಿಮಿಟೆಡೆ 1200 ಕೋಟಿ ಸೇರಿದಂತೆ ಭಾಗೀರಥ ಕೆಮಿಕಲ್ಸ್, ಎಚ್‍ಪಿಸಿ, ಐಒಸಿ, ಪವರ್ ರಿನ್ಯೂ, ಗುಜರಾತ್ ಅಂಬುಜಾ, ಕೆಎಲ್‍ಇ ಸೊಸೈಟಿ, ದೋಡ್ಲಾ ಡೈರಿ, ಎಸಿಸಿ ಲಿಮಿಟೆಡ್, ಡೆಪೆಡ್ರೊ ಶುಗರ್, ವುಕ್ಸಿ ಮೆಂಗ್ಯಾಂಗ್ ಮೆಷಿನರಿ ಕಂಪನಿಗಳು ಒಳಗೊಂಡಿವೆ.