ಬೆಂಗಳೂರು: ಹುಬ್ಬಳ್ಳಿ (Hubballi) ಇನ್ಸ್‌ಪೆಕ್ಟರ್‌ನನ್ನು (Inspector) ಯಾವುದೇ ಕಾರಣಕ್ಕೂ ಅಮಾನತು ಮಾಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಬಿಜೆಪಿಗೆ (BJP) ತಿರುಗೇಟು ನೀಡಿದ್ದಾರೆ.
ಜನವರಿ 9ರ ಒಳಗೆ ಶ್ರೀಕಾಂತ್ ಪೂಜಾರಿ ಬಿಡುಗಡೆ ಮಾಡಬೇಕು, ಹುಬ್ಬಳ್ಳಿ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಬೇಕು ಎಂಬ ಬಿಜೆಪಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲ್ಲ. ಇನ್ಸ್‌ಪೆಕ್ಟರ್‌ನನ್ನು ಯಾಕೆ ಅಮಾನತು ಮಾಡಬೇಕು? ಅವನೇನು ತಪ್ಪು ಮಾಡಿದ್ದಾನೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕ ಹರಿಪ್ರಸಾದ್‌ಗೆ ನೋಟಿಸ್ ಕೊಡೋದಿಲ್ಲ: ಜಿ.ಪರಮೇಶ್ವರ್
Advertisement
Advertisement
ಬಿಜೆಪಿ ಅವರು ಪ್ರತಿಭಟನೆ ಮಾಡಲಿ. ಕಾನೂನು ಈ ದೇಶದಲ್ಲಿ ಇರಬಾರದು ಎಂದು ಬಿಜೆಪಿಗೆ ಇದ್ದರೆ ಪ್ರತಿಭಟನೆ ಮಾಡಲಿ. ರಾಜ್ಯದಲ್ಲಿ ಕಾನೂನು ಕಾಪಾಡೋದು ನಮ್ಮ ಕರ್ತವ್ಯ. ಕಾನೂನಿನ ಪ್ರಕಾರ ಹುಬ್ಬಳ್ಳಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಅವರ ಬಂಧನ ಟೈಂನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿದೆ ಅನ್ನೋದು ಬಿಟ್ಟರೆ ಪೊಲೀಸರು ಕಾನೂನು ವಿರುದ್ಧ ಏನು ಕೆಲಸ ಮಾಡಿಲ್ಲ. ಬಿಜೆಪಿ ಅವರು ಅನಾವಶ್ಯಕವಾಗಿ ಇದನ್ನು ದೊಡ್ಡ ರಾಜಕೀಯ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ರಾಜಕೀಯವನ್ನು ನಾವು ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಅವರು ಪ್ರತಿಭಟನೆ ಮಾಡಲಿ. ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು. ಇದನ್ನೂ ಓದಿ: ಭಯ ಹುಟ್ಟಿಸುವವರು ಭಯೋತ್ಪಾದಕರು: ಹರಿಪ್ರಸಾದ್ ಹೇಳಿಕೆಗೆ ಪೇಜಾವರ ಶ್ರೀ ಕೆಂಡ
Advertisement
ನಾನು ಕರಸೇವಕ, ನನ್ನನ್ನು ಬಂಧನ ಮಾಡಿ ಎಂಬ ಬಿಜೆಪಿ ಅಭಿಯಾನ ವಿಚಾರದ ಕುರಿತು ಮಾತನಾಡಿದ ಅವರು, ಜೆಪಿ ಅವರು ಅಭಿಯಾನ ಮಾಡಲಿ. ಅವರು ಮಾಡೋದು ಮಾಡಲಿ. ನಾವು ಮಾಡೋದು ಮಾಡುತ್ತೇವೆ. ಹುಬ್ಬಳ್ಳಿ ಇನ್ಸ್‌ಪೆಕ್ಟರ್‌ನನ್ನು ಯಾವ ಕಾರಣಕ್ಕೆ ಅಮಾನತು ಮಾಡಬೇಕು? ಅವನೇನು ತಪ್ಪು ಮಾಡಿದ್ದಾನೆ? ಅವನ ಕೆಲಸ ಅವನು ಮಾಡಿದ್ದಾನೆ. ಅವನ ಕೆಲಸ ಬಿಜೆಪಿ ಅವರಿಗೆ ಇಷ್ಟ ಆಗಿಲ್ಲ ಎಂದ ಕೂಡಲೇ ಅಮಾನತು ಮಾಡಿ ಅನ್ನೋದು ಸರಿಯಲ್ಲ. ಹಾಗಾದ್ರೆ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡೋಣವಾ ಎಂದು ಕೇಳಿದರು. ಇದನ್ನೂ ಓದಿ: ರಾಮಮಂದಿರಕ್ಕೆ ಬಾಂಬ್ ಬೆದರಿಕೆ – ಇಬ್ಬರ ಬಂಧನ
Advertisement
ಹುಬ್ಬಳ್ಳಿ ಇನ್ಸ್‌ಪೆಕ್ಟರ್ ಕಡ್ಡಾಯ ರಜೆ ಮೇಲೆ ಹೋಗಿಲ್ಲ. ಅವರು ಮೊದಲೇ ಎರಡು ದಿನ ರಜೆ ಹಾಕಿಕೊಂಡಿದ್ದರಂತೆ. ರಜೆ ಮುಗಿದ ಮೇಲೆ ಬರುತ್ತಾರೆ. ಬಂದು ಅವರ ಪಾಡಿಗೆ ಅವರು ಡ್ಯೂಟಿ ಮಾಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು. ಸದಾಶಿವನಗರ ಪೊಲೀಸ್ ಠಾಣೆ ಮುಂದೆ ಸಚಿವ ಸುನೀಲ್ ಕುಮಾರ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಈ ವಿಷಯ ಹೆಚ್ಚು ಬೆಳೆಸೋಕೆ ಹೋದರೆ ಅವರಿಗೆ ಒಳ್ಳೆಯದಲ್ಲ. ಜನರು ಇದನ್ನ ಗಮನಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ನಾನೂ ಕರಸೇವಕ, ನನ್ನನ್ನೂ ಬಂಧಿಸಿ – ಅಭಿಯಾನ ಆರಂಭಿಸಿದ್ದ ಸುನಿಲ್ ಕುಮಾರ್ ವಶಕ್ಕೆ