ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಈಗಾಗಲೇ ದೇಶದ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ಆರಂಭವಾಗಿದೆ. ಈಗ ದೆಹಲಿಯ ಚಿಪನ್ಸ್ ಎವಿಯೇಷನ್ ಹಾಗೂ ಹುಬ್ಬಳ್ಳಿಯ ಬಾಹುಬಲಿ ಟೆಲಿಂ ಟೂರಿಸಂ ವತಿಯಿಂದ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್ ಸೇವೆ ಆರಂಭವಾಗುತ್ತಿದೆ.
ಜನವರಿ ಅಂತ್ಯಕ್ಕೆ ಸೇವೆ ಆರಂಭಗೊಳ್ಳಲಿದ್ದು, ಜಾತ್ರೆಗಳಲ್ಲಿ ಹೆಲಿಕಾಪ್ಟರ್ ಮೂಲಕ ಹೂ ಮಳೆಗೆರೆಯಲು, ವೈದ್ಯಕೀಯ ನೆರವಿಗೆ, ಮದುವೆ ಸಮಾರಂಭಗಳಿಗೆ, ಚುನಾವಣಾ ಪ್ರಚಾರಕ್ಕೇ ವಿವಿಧ ಉದ್ದೇಶಗಳಿಗೆ ಹೆಲಿಕಾಪ್ಟರ್ ಸೇವೆ ಬಾಡಿಗೆಗೆ ದೊರೆಯಲಿದೆ. ಒಂದು ಗಂಟೆಗೆ 1.10 ಲಕ್ಷ ಬಾಡಿಗೆ ನಿಗದಿ ಮಾಡಲಾಗಿದ್ದು, ಜೊತೆಗೆ ಶೇ.18 ಜಿಎಸ್‍ಟಿ ಸಹ ಭರಿಸಬೇಕಾಗಿದೆ.
Advertisement
Advertisement
ಹುಬ್ಬಳ್ಳಿಯ ಅದರಗುಂಚಿಯ ಬಳಿಯ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಸೇವೆ ದೊರೆಯಲಿದ್ದು, ಮಾಹಿತಿ ಹಾಗೂ ಬಾಡಿಗೆಗೆ 97406 68512 ಸಂಪರ್ಕಿಸಬಹುದಾಗಿದೆ ಎಂದು ಹೆಲಿ ಟೂರಿಸಂ ಮಾಲೀಕ ಬಾಹುಬಲಿ ಧರೆಪ್ಪನವರ ತಿಳಿಸಿದ್ದಾರೆ.