ಹುಬ್ಬಳ್ಳಿ: ಚಿಕನ್ ತಿನ್ನುವುದರಿಂದ ಕೊರೊನಾ ಬರುತ್ತದೆ ಎಂಬ ಸುಳ್ಳು ಸುದ್ದಿಯಿಂದ ಕೋಳಿ ತಿನ್ನುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಚಿಕನ್ ಬೆಲೆಯು ಕೂಡ ಪಾತಾಳಕ್ಕೆ ಇಳಿದಿದೆ.
ಇತ್ತೀಚೆಗೆ ಕೋಳಿ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆಲ ಕೋಳಿ ಸಾಕಾಣಿಕೆದಾರರು ಕೋಳಿಗಳನ್ನು ಜೀವಂತ ಸಮಾಧಿ ಮಾಡುತ್ತಿದ್ದಾರೆ. ಆದರೆ ಇನ್ನು ಕೆಲವರು ತಮ್ಮ ವಾಹನದಲ್ಲಿಯೇ ಕೋಳಿಗಳನ್ನು ಹಳ್ಳಿಗಳಿಗೆ ತಗೆದುಕೊಂಡು ಬಂದು ಸಾರ್ವಜನಿಕರಿಗೆ ಹಂಚುತ್ತಿದ್ದಾರೆ.
Advertisement
Advertisement
ಇಂದು ಹಳೇ ಹುಬ್ಬಳ್ಳಿಯ ಆನಂದ ನಗರದಲ್ಲಿ ಕೋಳಿ ಸಾಕಾಣಿಕೆದಾರರೊಬ್ಬರು ತಮ್ಮ ವಾಹನದಲ್ಲಿಯೇ ಕೋಳಿಗಳನ್ನು ತಗೆದುಕೊಂಡು ಬಂದು ಜನರಿಗೆ ಹಂಚಿದ್ದಾರೆ. ಈ ವೇಳೆ ಕೊರೊನಾ ಭೀತಿಯ ನಡುವೆಯೂ ಕೋಳಿಗಳನ್ನು ಜನರು ಮುಗಿಬಿದ್ದು ತಗೆದುಕೊಂಡು ಹೋಗಿದ್ದಾರೆ.