ಹುಬ್ಬಳ್ಳಿ: ಈ ಶತಮಾನ ಭಾರತದ ಶತಮಾನ (India Century) ಎಂದು ಇಡೀ ವಿಶ್ವವೇ ಹೇಳುತ್ತಿದೆ. ಈ ಕಾರಣಕ್ಕೆ ರನ್‌ವೇ ಸಿದ್ದವಾಗಿದೆ. ಹೊಸ ಹೊಸ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಯುವ ಜನತೆಗೆ ಕರೆ ನೀಡಿದ್ದಾರೆ.
ರೈಲ್ವೇ ಮೈದಾನದಲ್ಲಿ (Hubballi Railway Ground) ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವ (Yuvajanotsava) ಕಾರ್ಯಕ್ರಮದಲ್ಲಿ ಆರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ ಮೋದಿ ಮುರುಘಾ ಮಠ, ಸಿದ್ದರೂಢ ಮಠ, ಸಿದ್ದೇಶ್ವರ ಸ್ವಾಮೀಜಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿಯಾಚಿನ್‌ನಲ್ಲಿ ಹೋರಾಡಿ ಹುತಾತ್ಮರಾದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರನ್ನು ಸ್ಮರಿಸಿಕೊಂಡರು.
Advertisement
Advertisement
ಹೊಸ ಸಂಕಲ್ಪದತ್ತ ಭಾರತ ಮುನ್ನಡೆಯುತ್ತಿದೆ. ಯುವ ಶಕ್ತಿಯಿಂದ ರಾಷ್ಟ್ರ ನಿರ್ಮಾಣ ಆಗುತ್ತದೆ ಎಂದು ವಿವೇಕಾನಂದರು ಹೇಳಿದ್ದಾರೆ. ಇಡೀ ವಿಶ್ವವೇ ಭಾರತವನ್ನು ಈಗ ನೋಡುತ್ತಿದೆ. ನಮ್ಮದು ಯುವ ದೇಶವಾಗಿದ್ದು ಮುಂದಿನ 25 ವರ್ಷದಲ್ಲಿ ಭಾರತವನ್ನು ಕಟ್ಟಬೇಕು. ವಿಶ್ವದ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ನಿಮ್ಮ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ವಿವಿಧ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್ ಆಗಬೇಕು ಎಂದರು. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಯುವಕ
Advertisement
Advertisement
ಡಿಫೆನ್ಸ್‌ನಿಂದ ಡಿಜಿಟಲ್ ಇಂಡಿಯಾದವರೆಗೆ, ಆಟಿಕೆಯಿಂದ ಹಿಡಿದು ಪ್ರವಾಸದೋದ್ಯಮದವರೆಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಅವಕಾಶ, ಅಶಾವಾದ ಎರಡೂ ಜೊತೆಯಾಗಿ ಬರುತ್ತಿದೆ. ಈ ಅವಕಾಶಗಳನ್ನು ಬಳಸಿ ಭಾರತವನ್ನು ವಿಶ್ವದ ಟಾಪ್ 3 ಆರ್ಥಿಕತೆಯನ್ನು ಹೊಂದಿದ ದೇಶವನ್ನಾಗಿ ರೂಪಿಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ ಎಂದು ಹೇಳಿದರು.
ವಿಶ್ವ ಈಗ ಬದಲಾಗುತ್ತಿದ್ದು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ವಿಆರ್ ಟೆಕ್ನಾಲಜಿ, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿಯಂತಹ ಹೊಸ ಹೊಸ ವಿಷಯಗಳು ಬರುತ್ತಿವೆ. ಈಗ ಇರುವ ಉದ್ಯೋಗಗಳು ಮುಂದೆ ಇರುವುದಿಲ್ಲ. ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ನಾವು ಬದಲಾಗಬೇಕು. ಹೊಸ ಕೌಶಲ್ಯಗಳನ್ನು ನಾವು ಕಲಿತುಕೊಳ್ಳಬೇಕು. ಹೇಗೆ ಬದಲಾಗಬೇಕು ಎಂದರೆ ಮುಂದುವರಿದ ದೇಶಗಳಿಗಿಂತ 10 ಹೆಜ್ಜೆ ಮುಂದೆ ನಾವಿರಬೇಕು. ಈ ಕಾರಣಕ್ಕೆ ಪ್ರಾಯೋಗಿಕ ಮತ್ತು ಭವಿಷ್ಯದ ದೃಷ್ಟಿಯನ್ನು ನೋಡಿಕೊಂಡು ಹೊಸ ಶಿಕ್ಷಣ ನೀತಿಯನ್ನು (NEP) ನಾವು ತಂದಿದ್ದೇವೆ ಎಂದು ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಆಶಾವಾದಿಯಾಗಿ, ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ದೇಶವನ್ನು ಮುನ್ನಡೆಸಲು ಯುವಶಕ್ತಿ ನಿರ್ಣಾಯಕ. ಯುವ ಶಕ್ತಿ ನಮ್ಮ ಚಾಲನಾ ಶಕ್ತಿ. ಡಿಜಿಟಲ್ ಪೇಮೆಂಟ್, ಸ್ವಚ್ಚ ಭಾರತ, ಜನ ಧನ್ ಬಂದಾಗ ಲೇವಡಿ ಮಾಡಿದರು. ಕೋವಿಡ್ ಬಂದಾಗ ನಮ್ಮ ಲಸಿಕೆಯನ್ನು ವ್ಯಂಗ್ಯವಾಡಿದರು. ಆದರೆ ಡಿಜಿಟಲ್ ಪೇಮೆಂಟ್‌ನಲ್ಲಿ ನಾವು ನಮ್ಮ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದ್ದೇವೆ. ನಿಶ್ಚಿತ ಭಾರತ, ಸಶಕ್ತ ಭಾರತ ಲಕ್ಷ್ಯವನ್ನು ಇಟ್ಟುಕೊಂಡು ನಾವು ಮುನ್ನಡೆಯುತ್ತಿದ್ದೇವೆ. ತಮ್ಮ ಕನಸನ್ನು ಯುವ ಜನತೆ ನನಸು ಮಾಡುತ್ತಾರೆ ಎಂಂದು ವಿಶ್ವಾಸ ವ್ಯಕ್ತಪಡಿಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k