ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಮದುವೆ (Marriage) ಯಾಗಲು ಹೆಣ್ಣು ಸಿಗುತ್ತಿಲ್ಲವೆಂದು ಗಮಡು ಮಕ್ಕಳ ಆರೋಪ ಇದೆ. ಅಂತೆಯೇ ಇದೀಗ ಹುಬ್ಬಳ್ಳಿಯಲ್ಲಿ ಇದೇ ಕಾರಣಕ್ಕೆ ಯುವಕನೊಬ್ಬ ಸುಡುಗಾಡಿನಲ್ಲೇ ಬೆಂಕಿ ಹಚ್ಚಿಕೊಂಡ ಪ್ರಸಂಗವೊಂದು ನಡೆದಿದೆ.
Advertisement
ಹುಬ್ಬಳ್ಳಿ ತಾಲೂಕಿನ ಅಮ್ಮಿನಬಾವಿಯಲ್ಲಿ ಈ ಘಟನೆ ನಡೆದಿದೆ. ಯುವಕನನ್ನು ಸಂತೋಷ ಕೊರಡಿ (30) ಎಂದು ಗುರುತಿಸಲಾಗಿದೆ. ತನಗೆ ವಯಸ್ಸಾದರೂ ಮದುವೆಗೆ ಕನ್ಯೆ (Girl) ಸಿಗಲಿಲ್ಲವೆಂದು ಯುವಕ ನೊಂದಿದ್ದನು. ಅಲ್ಲದೆ ಮದುವೆ ಮಾಡಿಲ್ಲ ಎಂದು ಮನನೊಂದು ಮಾನಸಿಕ ಅಸ್ವಸ್ಥನಾಗಿದ್ದನು. ಇದನ್ನೂ ಓದಿ: BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್
Advertisement
Advertisement
ಇದೇ ಬೇಜಾರಿಂದ ಸ್ಮಶಾನದಲ್ಲಿ ಪೆಟ್ರೋಲ್ (Petrol) ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಕಿಯು ದೇಹದ ಹಲವು ಭಾಗವನ್ನು ಸುಟ್ಟು ಹಾಕಿದೆ. ದೇಹದ 50% ಭಾಗವು ಸುಟ್ಟು ಕರಕಲು ಆಗಿದ್ದು ಪ್ರಾಣಾಪಾಯಮದಿಂದ ಪಾರಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಯುವಕನಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.