ಧಾರವಾಡ: ನಿಮಗೆ ಯಾವುದೇ ಕಷ್ಟ ಇದ್ದರೂ ಒಂದು ಗ್ಲಾಸ್ ನೀರು ಸಾಕು. ದೆವ್ವ, ಭೂತ ಹಿಡಿದಿದ್ರೆ ಈ ಒಂದು ಗ್ಲಾಸ್ ನೀರು ಕುಡಿದ್ರೆ ಸಾಕು. ದೆವ್ವ ಭೂತ ಪಿಶಾಚಿ ಏನೂ ಇರಲ್ಲ. ಇಂಥದೊಂದು ಕಟ್ಟುಕಥೆ ಹೇಳಿಕೊಂಡು ಮುಗ್ಧ ಜನರಿಂದ ಹಣ ವಸೂಲಿ ಮಾಡ್ತಿದ್ದಾರೆ ಓರ್ವ ಖತರ್ನಾಕ್ ಲೇಡಿ.
ಭಯಾನಕ ಕಟ್ಟು ಕಥೆ ಕಟ್ಟಿ ಹುಬ್ಬಳ್ಳಿಯಲ್ಲಿ ಫರೀದಾ ಎಂಬ ಮಹಿಳೆ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದಾಳೆ. ಫರೀದಾ ಮೂಲತಃ ಹುಬ್ಬಳ್ಳಿಯ ನಿವಾಸಿ. ನಗರದ ಹೊರವಲಯದ ಅದರಗುಂಚಿಯ ಬಯಲು ಪ್ರದೇಶದಲ್ಲಿನ ಒಂದು ಮನೆ ಮಾಡಿಕೊಂಡಿದ್ದಾಳೆ. ಹೈವೆ ಬಳಿಯೇ ಕುಂದಗೋಳ ಕ್ರಾಸ್‍ನ ಬಳಿ ಇರುವ ಈಕೆಯ ಜಾಗಕ್ಕೆ ಪ್ರತಿನಿತ್ಯ ನೂರಾರು ಜನರು ಬಂದು ಹೋಗುತ್ತಾರೆ.
ದೆವ್ವ, ಪೀಡೆ, ಭೂತ, ಪಿಶಾಚಿ ಹೀಗೆ ಯಾವುದೇ ದುಷ್ಟ ಶಕ್ತಿ ಇದ್ರೂ ದೂರ ಮಾಡ್ತೀವಿ ಅಂತಾ ಈಕೆ ನಂಬಿಕೆ ಹುಟ್ಟಿಸಿದ್ದಾಳೆ. ಕೇವಲ ಒಂದು ಗ್ಲಾಸ್ ನೀರು ಕುಡಿಸುವುದರ ದುಷ್ಟ ಶಕ್ತಿ ಸಂಹಾರ ಮಾಡುತ್ತೇನೆ ಎಂದು ಮಂಕುಬೂದಿ ಎರಚಿ ಚೆನ್ನಾಗಿ ದುಡ್ಡು ಮಾಡ್ತಿದ್ದಾಳೆ.
ಕೇವಲ ಎರಡು ತಿಂಗಳಲ್ಲಿ ನಾಲ್ಕು ಅಥವಾ ಐದು ಬಾರಿ ತನ್ನ ಬಳಿಗೆ ಬರುವಂತೆ ಹೇಳಿ ಅವರಿಗೆ ನೀರು ಕುಡಿಸುತ್ತಾಳೆ. ಈ ನೀರು ಕುಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಜನರಿಗೆ ವಾಂತಿ ಆಗುತ್ತದೆ. ಅದಕ್ಕೆ ಪೂರ್ವ ಸಿದ್ಧತೆಯಾಗಿ ಬಂದವರಿಗೆಲ್ಲಾ ಒಂದೊಂದು ಬಕೆಟ್‍ಗಳನ್ನು ರೆಡಿ ಮಾಡಿ ಇಟ್ಟಿರುತ್ತಾಳೆ. ವಾಮಿಟ್ ಮಾಡಿದ್ರೆ ದೆವ್ವ ದೇಹ ಬಿಟ್ಟು ಹೋಗುತ್ತದೆ ಎಂದು ಫರೀದಾ ಹೇಳುತ್ತಾಳೆ.
ಹಸಿರು ಮಿಶ್ರಿತ ತಂಬಾಕು ನೀರು: ಫರೀದಾ ಬಳಿ ಬರೋ ಜನ 20 ರೂಪಾಯಿ ಕೊಟ್ಟು ಕೂಪನ್ ತೆಗೆದುಕೊಂಡು ನಿಲ್ಲಬೇಕು. ಆಮೇಲೆ 100 ರೂಪಾಯಿ ಕೊಟ್ಟು ಚೆಕ್ ಮಾಡಿಸಬೇಕು. ತನ್ನ ಬಳಿ ಬರೋ ಜನರ ಕಣ್ಣುಗಳನ್ನು ಚೆಕ್ ಮಾಡಿ, ನಂತರ ತಲೆ ಮೇಲೆ ಕೈ ಇಟ್ಟು ನೀರು ಕುಡಿಸುತ್ತಾಳೆ. ಈ ನೀರಿನಲ್ಲಿ ಹಸಿರು ತಂಬಾಕು ಮಿಕ್ಸ್ ಮಾಡಿರೋದ್ರಿಂದ ಸಹಜವಾಗಿ ಜನರಿಗೆ ವಾಮಿಟ್ ಆಗುತ್ತದೆ.
ಪ್ರತಿನಿತ್ಯ ಫರೀದಾ 10 ರಿಂದ 20 ಸಾವಿರ ರೂ.ವರೆಗೂ ಅಂದರೇ ಒಂದು ತಿಂಗಳಿಗೆ 6 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾಳೆ. ಇಷ್ಟೆಲ್ಲಾ ದಂಧೆ ನಡೆಸುತ್ತಿರುವ ಫರೀದಾ ನಿರಂತರವಾಗಿ ಅಮಾಯಕ ಜನರಿಗೆ ಮೋಸ ಮಾಡುತ್ತಿದ್ದಾಳೆ.