ಹುಬ್ಬಳ್ಳಿ: ಭಾರತ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ (British Deputy Commissioner) ಆಗಿ ಹುಬ್ಬಳ್ಳಿ (Hubballi) ಮೂಲದ 23 ವರ್ಷದ ಸಂಜನಾ ಹಿರೇಮಠ್ (Sanjana Hiremath) ಅವರು ಬೆಂಗಳೂರಿನಲ್ಲಿ ಒಂದು ದಿನ ಕಾರ್ಯ ನಿರ್ವಹಿಸುವ ಮೂಲಕ ರಾಜತಾಂತ್ರಿಕರಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಪಡೆದು ಕಿರಿಯ ವಯಸ್ಸಿನಲ್ಲೇ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
Advertisement
ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಪ್ರತಿವರ್ಷ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಣೆ ಮಾಡುತ್ತದೆ. ಇದರ ಭಾಗವಾಗಿ 2017 ರಿಂದ 18 ರಿಂದ 23 ವರ್ಷದೊಳಗಿನ ಹೆಣ್ಣು ಮಕ್ಕಳ ಸಬಲೀಕರಣ ದೃಷ್ಟಿಯಿಂದ ಅವರಿಗೆ ರಾಜತಾಂತ್ರಿಕ ಅನುಭವದ ಜೊತೆಗೆ, ನಾಯಕತ್ವ ಗುಣ ಬೆಳಸುವ ನಿಟ್ಟಿನಲ್ಲಿ, ಒಂದು ದಿನದ ಹೈಕಮಿಷನರ್ ಎಂಬ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ನಮ್ಮ ದೇಶದ ಎಲ್ಲಾ ರಾಜ್ಯದ ಹೆಣ್ಣು ಮಕ್ಕಳು ಭಾಗವಹಿಸಬಹುದು.
Advertisement
Advertisement
ಅಂದರಂತೆ ಸಂಜನಾ ಹಿರೇಮಠ ಸೇರಿ ಈ ವರ್ಷ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಾಧ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಸ್ತುತ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸಂಜನಾ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಯುವತಿಯರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮತ್ತು ನಾಯಕತ್ವದ ಪಾತ್ರದ ಪ್ರಾಮುಖ್ಯತೆಯನ್ನು ವಿವರಿಸಿದರು.
Advertisement
ಸಂಜನಾಳ ಪ್ರತಿಭೆ ಮತ್ತು ಚಿಂತನೆಗಳನ್ನು ಕಂಡ ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಅವರು, ಸಂಜನಾಳನ್ನು ಆಯ್ಕೆ ಮಾಡಿ ಅವರ ಅವರ ಸ್ಥಾನದಲ್ಲಿ ಒಂದು ದಿನ ಕಾರ್ಯನಿರ್ವಹಿಸುವ ಅವಕಾಶ ನೀಡಿದ್ದಾರೆ. ಅಂದರಂತೆ ಸಂಜನಾ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್? ಒಂದು ದಿನ ಕಾರ್ಯ ನಿರ್ವಹಿಸಿದ್ದಾರೆ.
ಒಂದು ದಿನದ ದಿನಚರಿ: ಪ್ರಸ್ತುತ ಬ್ರಿಟಿಷ್ ಹೈಕಮಿಷನರ್ ಚಂದ್ರು ಅಯ್ಯರ್ ಅವರ ಬೆಂಗಳೂರು ನಿವಾಸದಲ್ಲಿ ಉಪಾಹಾರ ಸೇವನೆಯೊಂದಿಗೆ ಅವರ ದಿನ ಪ್ರಾರಂಭವಾಯಿತು. ನಂತರ ಆಯೋಗದ ಕಚೇರಿಗೆ ಭೇಟಿ ಮಹಿಳೆಯರು ವಾಣಿಜ್ಯ ಸುಸ್ಥಿರ ಅಭಿವೃದ್ಧಿ, ಗುರಿಗಳು, ಅವುಗಳನ್ನು ಮುನ್ನಡೆಸುವ ಕುರಿತು ಅಧಿಕಾರಗಳೊಂದಿಗೆ ಚರ್ಚೆ ನಡೆಸಲಾಯಿತು.
ಮಧ್ಯಾಹ್ನದ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್ ಗೀಚಿ ಅವರೊಂದಿಗೆ ಬಸವೇಶ್ವರ ಖಾನಾವಳಿಯ ಜೋಳದ ರೊಟ್ಟಿ ಮತ್ತು ಹೋಳಿಗೆ ಊಟ. ಈ ಸಮಯದಲ್ಲಿ ಉತ್ತರ ಕರ್ನಾಟಕದ ವಿಶಿಷ್ಟ ಪಾಕಪದ್ಧತಿಯ ಬಗ್ಗೆ ಸಂಜನಾಳ ವಿದೇಶಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ವಿಶೇಷವಾಗಿತ್ತು. ಬಳಿಕ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಸಭೆಯೊಂದಿಗೆ ಒಂದು ದಿನ ಬ್ರಿಟಿಷ್ ಡೆಪ್ಯುಟಿ ಕಮೀಷನರ್ ಆಗಿ ಸಂಜನಾ ಅವರ ಅಧಿಕಾರ ಮುಕ್ತಾಯಗೊಂಡಿದೆ. ಈ ಬಗ್ಗೆ ಸಂಜನಾ ಅವರು ಟ್ವಿಟರ್ ನಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
Web Stories