ಹುಬ್ಬಳ್ಳಿ: ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆಯಾಗಿ ಮೂರು ದಿನ ಕಳೆಯುತ್ತಿದೆ. ಪ್ರಕರಣ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಂತಕರಿಂದ ಪೊಲೀಸರು ಮೊದಲ ದಿನವೇ ಆರೋಪಿಗಳಿಂದ ಮಹತ್ವದ ಸತ್ಯವನ್ನು ಬಾಯಿಬಿಡಿಸಿದೆ. ಮತ್ತೊಂದು ಕಡೆ ಅವರ ಕುಟುಂಬಸ್ಥರು ಮೂರನೇ ದಿನದ ಕಾರ್ಯ ನೆರವೇರಿಸಿದ್ದಾರೆ. ಆರೋಪಿಗಳನ್ನು ಕಸ್ಟಡಿಗೆ ಪಡೆದಿರೋ ಪೊಲೀಸರು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ. ಹಂತಕರು ತಪ್ಪೊಪ್ಪಿಕೊಂಡಿದ್ದು ಹತ್ಯೆ ಹಿಂದಿನ ದ್ವೇಷವನ್ನ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
42 ಬಾರಿ ಚುಚ್ಚಿ ಕೊಲ್ಲುವಷ್ಟು ದ್ವೇಷ ಯಾಕೆ: ಚಂದ್ರಶೇಖರ ಗುರೂಜಿ ಹತ್ಯೆಗೆ ದ್ವೇಷವೇ ಕಾರಣ ಅಂತ ಹಂತಕರು ವಿಚಾರಣೆಯಲ್ಲಿ ಹೇಳಿದ್ದಾರೆ. ಗುರೂಜಿ ಬಳಿ 10-12 ವರ್ಷ ಕೆಲಸ ಮಾಡಿದ್ದ ಹಂತಕರು 2016ರಲ್ಲೇ ಕೆಲಸ ಬಿಟ್ಟಿದ್ರು. ಗುರೂಜಿ ಸಂಸ್ಥೆಯಿಂದ ಹೊರಬಂದ ಬಳಿಕ ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಬೇರೆ ಕೆಲಸ ಮಾಡ್ಕೊಂಡಿದ್ರಂತೆ. ಆದರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು ಅಂತ ಹಂತಕರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ನಮ್ಮ ವ್ಯಾಪಾರ-ಉದ್ಯೋಗಕ್ಕೆ ಅಡ್ಡಿಪಡಿಸುತ್ತಿದ್ದ ಗುರೂಜಿ ಬೆದರಿಕೆ ಹಾಕ್ತಿದ್ರು. ಹೀಗಾಗಿ ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆಂದು ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರಲ್ಲ, 20ಕ್ಕೂ ಹೆಚ್ಚು ಮಂದಿಯಿಂದ ಸ್ಕೆಚ್ – ಗುರೂಜಿಗೆ ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆಗೆ ಇಳಿದಿದ್ದ ಹಂತಕರು
ಸಂಧಾನ ನೆಪ.. ದಾಖಲೆ ಜೊತೆ ತಂದಿದ್ರು ಚಾಕು: ಚಂದ್ರಶೇಖರ್ ಗುರೂಜಿ ಹತ್ಯೆಗೆ ಜುಲೈ 3 ರಂದೇ ಪ್ಲಾನ್ ನಡೆದಿದೆ. ಮೂರು ದಿನದ ಹಿಂದೆ ಮನೆಬಿಟ್ಟಿದ್ದ ಹಂತಕರು ಹೊಸೂರು ವೃತ್ತದ ಬಳಿರುವ ಕೆನರಾ ಹೊಟೆಲ್‍ನಲ್ಲಿ ರೂಮ್ ಪಡೆದು ವಾಸವಿದ್ರು. ಹೋಟೆಲ್‍ನಲ್ಲಿ ಕೂತು ಹತ್ಯೆಗೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ರು. ಗುರೂಜಿ ಮತ್ತು ತಮ್ಮ ನಡುವೆ ಇರುವ ವ್ಯಾಜ್ಯದ ಸಂಧಾನ ನೆಪಹೇಳಿ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಕೇಳಿಕೊಂಡಿದ್ರು. ಹಂತಕರ ಮುಖ ಅರಿಯದ ಗುರೂಜಿ ಭೇಟಿಗೆ ಒಪ್ಪಿದ್ದರು. ಹೋಟೆಲ್‍ಗೆ ಬರುವಾಗ ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಬಂದಿದ್ದ ಹಂತಕರು, ದಾಖಲೆಪತ್ರಗಳ ಮಧ್ಯೆ ಚಾಕು ಹಿಡಿದು ತಂದಿದ್ರು. ಗುರೂಜಿ ಬರ್ತಿದ್ದಂತೆ ಹತ್ಯೆಗೈದು ದಾಖಲೆ ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ರು. ಹೋಟೆಲ್ ಮುಂಭಾಗದ ಕಸದ ರಾಶಿಯಲ್ಲಿ ಚಾಕು ಎಸೆದು ಎಸ್ಕೇಪ್ ಆಗಿದ್ರು. ಇದನ್ನೂ ಓದಿ: ಗುರೂಜಿಯನ್ನು ನಾವು ದೇವರಂತೆ ಕಾಣುತ್ತಿದ್ದೆವು: ವನಜಾಕ್ಷಿ
ಹತ್ಯೆ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಹೋಟೆಲ್ ಭದ್ರತಾಲೋಪದ ಬಗ್ಗೆ ಹೋಟೆಲ್ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಗುರೂಜಿ ಸಾವಿನಿಂದ ಇನ್ನೂ ಹೊರಬಾರದ ಕುಟುಂಬಸ್ಥರು ಸಮಾಧಿಗೆ ಮೂರು ದಿನದ ಹಾಲು-ತುಪ್ಪ ಕಾರ್ಯ ನೆರವೇರಿಸಿದರು. ಮಗಳು ಸ್ವಾತಿ, ಗುರೂಜಿ ಪತ್ನಿ ಅಂಕಿತಾ ಹಾಗೂ ಅಣ್ಣನ ಮಗ ಸಂಜಯ್ ಸಮಾಧಿಗೆ ಪೂಜೆ ಸಲ್ಲಿಸಿದರು.
Live Tv
[brid partner=56869869 player=32851 video=960834 autoplay=true]