ಬೆಂಗಳೂರು: ಹುಬ್ಬಳ್ಳಿಯಲ್ಲಿ ಗಲಭೆಕೋರರ ಕುಟುಂಬಕ್ಕೆ ರೇಷನ್ ಕಿಟ್ ಹಂಚಿಕೆ ಬ್ರೇಕ್ ಬಿದ್ದಿದ್ದು, ಶಾಸಕ ಜಮೀರ್ ಅಹ್ಮದ್ ಖಾನ್ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ,
ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಜಮೀರ್ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ರೇಷನ್ ಕಿಟ್ ಹಂಚದಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ರೇಷನ್ ಕಿಟ್ ವಿತರಣೆ ಮಾಡದಂತೆ ಬೆಂಬಲಿಗರಿಗೆ ಸೂಚನೆ ನಿಡಿದ್ದಾರೆ. ಇದರಿಂದಾಗಿ ಬೆಂಬಲಿಗರು ರೇಷನ್ ಕಿಟ್ ಹಂಚಿಕೆ ಕಾರ್ಯಕ್ರಮ ರದ್ದು ಪಡಿಸಿದ್ದಾರೆ.
Advertisement
Advertisement
ಘಟನೆಯೇನು?:
ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ಹೊಡೆದು ಅರೆಸ್ಟ್ ಆದವರ ಪರ ಜಮೀರ್ ನಿಂತಿದ್ದು, ಗಲಭೆಕೋರರಿಗೆ ಜಮೀರ್ 5 ಸಾವಿರ ನಗದು ಹಾಗೂ ರಂಜಾನ್ ಫುಡ್‍ಕಿಟ್ ನೀಡಿ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್
Advertisement
Advertisement
ಇಂದು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಯಲ್ಲಿ ಹಣ ಹಾಗೂ ಫುಡ್‍ಕಿಟ್ ಹಂಚಿಕೆ ಮಾಡಲಾಗುತ್ತಿದ್ದು, ಕಸಬಾ ಪೇಟೆ ಪೊಲೀಸ್ ಠಾಣೆ ಬಳಿಯ ಮಸ್ತಾನ್ ಷಾ ಶಾದಿ ಮಹಲ್‍ನಲ್ಲಿ ಬೆಂಬಲಿಗರ ಮೂಲಕ ಜಮೀರ್ ಅಹ್ಮದ್ ಸಹಾಯ ಮಾಡಲಿದ್ದರು. ರಂಜನ್ ಹಿನ್ನೆಲೆ ಮೆಕ್ಕಾದಲ್ಲಿರುವ ಜಮೀರ್ ಅಹ್ಮದ್, ಅಲ್ಲಿಂದಲೇ ಗಲಭೆಕೋರರಿಗೆ ಸಹಾಯಹಸ್ತ ಚಾಚಿದ್ದರು. ಹುಬ್ಬಳ್ಳಿಯ ತಮ್ಮ ಬೆಂಬಲಿಗರ ಮೂಲಕ ರೇಶನ್ ಕಿಟ್ ಹಂಚಿಕೆ ಮಾಡಲಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನೂ ಓದಿ: ಜಮೀರ್ ನಡೆಯಿಂದ ಕಾಂಗ್ರೆಸ್ ತಲೆತಗ್ಗಿಸುವ ಕೆಲಸ: ಆರಗ ಜ್ಞಾನೇಂದ್ರ