ಹುಬ್ಬಳ್ಳಿ: ವಿವಾದಾತ್ಮಕ ಪೋಸ್ಟ್‌ಗೆ ಸಂಬಂಧಿಸಿದಂತೆ ಪ್ರಕ್ಷುಬ್ದಗೊಂಡಿದ್ದ ಹುಬ್ಬಳ್ಳಿ ಇದೀಗ ಸಹಜ ಸ್ಥಿತಿಗೆ ಮರಳಿದೆ. ಗಲಭೆಗೆ ಕಾರಣಿಭೂತನಾದ ವಾಸೀಂ ಪಠಾಣ್ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಈ ವೇಳೆ ಗಲಭೆಯ ರಾತ್ರಿ ದಾಖಲೆಯ ಫೋನ್ ಕರೆಗಳ ವಿನಿಮಯ ಆಗಿರುವ ಮಹತ್ವದ ವಿಚಾರ ಹೊರಬಿದ್ದಿದೆ.
Advertisement
ಗಲಭೆ ನಡೆದ ದಿನ ರಾತ್ರಿ 9 ರಿಂದ 12 ಗಂಟೆಯ ವರೆಗೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯ ಐದು ಟವರ್‌ಗಳಿಂದ 18,000ಕ್ಕೂ ಅಧಿಕ ಕರೆಗಳು ವಿನಿಮಯಗೊಂಡಿರುವುದು ಪೊಲೀಸರಲ್ಲಿ ಅಚ್ಚರಿ ಮೂಡಿಸಿದೆ. ಬೇರೆ ದಿನಗಳಲ್ಲಿ ಕೇವಲ 6-8 ಸಾವಿರ ಕರೆಗಳು ವಿನಿಮಯ ಆಗ್ತಿದ್ವು ಆದ್ರೆ, ಗಲಭೆ ದಿನ ಮಾತ್ರ ಕರೆಗಳಲ್ಲಿ ದಾಖಲೆಯಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಗೆ ಮುಂಬೈ ನಂಟು!
Advertisement
Advertisement
ಇದೀಗ ಈ ಕರೆಗಳನ್ನು ಆಧಾರವಾಗಿಟ್ಟುಕೊಂಡು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬಂಧಿತ 146 ಜನರ ಪೈಕಿ 14ಕ್ಕೂ ಹೆಚ್ಚು ಜನ ಕ್ರಿಮಿನಲ್ ಇತಿಹಾಸವನ್ನು ಹೊಂದಿದ್ದಾರೆ. ಹೀಗಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಅವರ ಫೈಲ್ ಮತ್ತೆ ರೀ ಓಪನ್ ಆಗಿವೆ. ಈ ನಡುವೆ ವಿವಾದಾತ್ಮಕ ಪೋಸ್ಟ್ ಮಾಡುವ ಮೂಲಕ ಗಲಭೆಗೆ ನಾಂದಿ ಹಾಡಿದ್ದ, ಅಭಿಷೇಕ್ ಹಿರೇಮಠ ಹಾಗೂ ಗಲಭೆಯಲ್ಲಿ ಭಾಗಿಯಾಗಿದ್ದ, ಮೊಹಮ್ಮದ್ ಸಾಧಿಕ್ ಕಂಚಗಾರ ಪೊಲೀಸ್ ಭದ್ರತೆಯಲ್ಲಿ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಪರೀಕ್ಷೆ ಬರೆದಿದ್ದಾರೆ. ಇದನ್ನೂ ಓದಿ: ನೀನು ದನ ಕಾಯೋನು, EO ಕೆಲಸದಲ್ಲಿ ಇದ್ದೀಯ – ಅಧಿಕಾರಿ ವಿರುದ್ಧ ಎಚ್.ಡಿ.ರೇವಣ್ಣ ಗರಂ
Advertisement