DharwadDistrictsKarnatakaLatestMain Post

ಹುಬ್ಬಳ್ಳಿ ಗಲಭೆ ಪ್ರಕರಣ – 11 ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಧಾರವಾಡ: ಕಳೆದ ಏಪ್ರಿಲ್ 16 ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 12 ಎಫ್‍ಐಆರ್‌ಗಳಲ್ಲಿ 11 ಎಫ್‍ಐಆರ್ ರದ್ದು ಗೊಳಿಸಬೇಕು ಎಂದು ಆರೋಪಿಗಳ ಪರ ಧಾರವಾಡ ಹೈಕೋರ್ಟ್‍ಗೆ ಹಾಕಿದ್ದ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

ಏಪ್ರಿಲ್ 16 ರಂದು ಅಭಿಷೇಕ್ ಎಂಬ ಯುವಕ ವಿವಾದಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಗಲಭೆ ನಡೆದು, ಗುಂಪೊಂದು ಹಳೆ ಹುಬ್ಬಳ್ಳಿ ಠಾಣೆ ಎದುರು ಪೊಲೀಸರ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಹಿನ್ನೆಲೆ ಪೊಲೀಸರು 12 ಎಫ್‍ಐಆರ್ ದಾಖಲಿಸಿ 156 ಜನರನ್ನು ಬಂಧಿಸಿದ್ದರು. ಈ ವಿಚಾರವಾಗಿ ಆರೋಪಿಗಳ ಪರ ವಕೀಲರು 11 ಎಫ್‍ಐಆರ್ ರದ್ದು ಮಾಡಬೇಕು ಎಂದು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಯಾರ‍್ರೀ ಆ ಡಿಸಿ?: ಪಿಎಸ್‌ಐಗೆ ಹೊರಟ್ಟಿ ಪ್ರಶ್ನೆ

ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ, ಸದ್ಯ ಪ್ರಕರಣದ ತನಿಖೆ ನಡೆಯುತಿದ್ದು, ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಆಗಬೇಕಿದೆ, ಈ ಹಿನ್ನೆಲೆ ಎಫ್‍ಐಆರ್ ರದ್ದು ಮಾಡಲು ಆಗಲ್ಲ ಎಂದು ಆರೋಪಿಗಳ ಪರ ಹಾಕಿದ್ದ ಅರ್ಜಿ ವಜಾ ಮಾಡಿ ಆದೇಶಿಸಿದೆ. ಸದ್ಯ ಆರೋಪಿ ಪರ ವಕೀಲರು ಮತ್ತೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಬೇರೊಬ್ಬರ ಪತ್ನಿ ಜೊತೆಗೆ ಲವ್ವಿ-ಡವ್ವಿ – ಕೊಲೆಯಾದ ಆಟೋ ಚಾಲಕ

Leave a Reply

Your email address will not be published.

Back to top button