ಹುಬ್ಬಳ್ಳಿ: ರೈಲಿನ ಇಂಜಿನ್ ಇಂಧನ ಸೋರಿಕೆಯಿಂದ ಹುಬ್ಬಳ್ಳಿ-ಬೆಂಗಳೂರ ಪ್ಯಾಸೆಂಜರ್ ರೈಲು ಯಲವಿಗಿ ರೈಲು ನಿಲ್ದಾಣದಲ್ಲಿಯೇ ನಿಂತುಕೊಂಡಿದ್ದು, ಸೋರುತ್ತಿರುವ ಡೀಸೆಲ್ ತುಂಬಿಕೊಳ್ಳುವಲ್ಲಿ ಸಾರ್ವಜನಿಕರು ಮುಗಿಬಿದ್ದಿದ್ದಾರೆ.
ಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ 56516 ರೈಲಿನ ಇಂಜಿನ್‍ನಲ್ಲಿ ಇಂಧನ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲನ್ನು ಯಲವಿಗಿಯಲ್ಲಿಯೇ ನಿಲುಗಡೆಗೊಳಿಸಲಾಯಿತು. ಆದರೆ ಇಂಧನ ಸೋರಿಕೆಯನ್ನು ಗಮನಿಸಿದ ಸಾರ್ವಜನಿಕರು ಬಕೆಟ್, ಬಾಟಲಿ ಕೊಡಗಳನ್ನು ತೆಗೆದುಕೊಂಡು ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದಿದ್ದರು. ಇಂಧನ ಸೋರಿಕೆಯಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು. ಇದನ್ನೂ ಓದಿ: ‘ಫ್ರೀ ಪೆಟ್ರೋಲ್ ಬೇಕಾದ್ರೆ ಬಿಕಿನಿ ಧರಿಸಿ ಬನ್ನಿ’ – ಎದ್ನೋ ಬಿದ್ನೋ ಓಡಿ ಬಂದ ಪುರುಷರು
Advertisement
Advertisement
ಆದರೆ ಜನರು ಮಾತ್ರ ಡಿಸೇಲ್ ತುಂಬಿಕೊಳ್ಳಲು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ನಿಂತು ಡೀಸೆಲ್ ತುಂಬಿಕೊಂಡು ಹೋಗಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಪುಕಸಟ್ಟೆ ಸಿಗುತ್ತೆ ಎಂದರೆ ಜನರು ಹೇಗೆ ನೂಕುನುಗ್ಗಲಿನಲ್ಲೂ ಹೋಗಿ ಆ ವಸ್ತುವನ್ನು ತೆಗೆದುಕೊಂಡು ಬರುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.