– ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹುಬ್ಬಳ್ಳಿ: ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಒಡೆತನದ ಹುಬ್ಬಳ್ಳಿಯ ಕೆಎಲ್‍ಇ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಕೇಸ್ ದಾಖಲಾಗಿದೆ. ಹಾಗಿದ್ದರೂ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಕೋರ್ಟಿಗೂ ಹಾಜರುಪಡಿಸದೆ ಹುಬ್ಬಳ್ಳಿ ಪೊಲೀಸರು ಒಂದೇ ದಿನದಲ್ಲಿ ರಿಲೀಸ್ ಮಾಡಿದ್ದಾರೆ.
ಕೆಎಲ್‍ಇ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕಾಶ್ಮೀರದ ಅಮಿರ್, ತಾಲೀಬ್, ಬಾಸಿತ್‍ನನ್ನು ಸಿಆರ್‍ಪಿಸಿ ಸೆಕ್ಷನ್ 169ರ ಅಡಿಯಲ್ಲಿ ಶ್ಯೂರಿಟಿ ಬಾಂಡ್ ಮೇಲೆ ಗೋಕುಲ ಠಾಣಾ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಸೂಚಿಸಿ ದೇಶದ್ರೋಹಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ವಿದ್ಯಾರ್ಥಿಗಳು ಬೇಲ್ ಮೇಲೆ ಬಿಡುಗಡೆಯಾಗಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದರು.
ಪ್ರಧಾನಿ ಮೋದಿ ಅವರನ್ನು ನಾಟಕವೊಂದರಲ್ಲಿ ಟೀಕಿಸಿದ್ರು ಅಂತ ಬೀದರ್‍ನ ಶಾಹೀನ್ ಶಾಲೆಯ ಶಿಕ್ಷಕಿ, ಮತ್ತು ಬಾಲಕಿಯ ತಾಯಿಯ ಮೇಲೆ ಇದೇ ರೀತಿ ದೇಶದ್ರೋಹದ ಕೇಸ್ ಹಾಕಿ ಕಂಬಿ ಎಣಿಸುವಂತೆ ಮಾಡಲಾಗಿತ್ತು. ಅವರಿಗೆ 16 ದಿನಗಳ ಕಾಲ ಬೇಲೇ ಸಿಕ್ಕಿರಲಿಲ್ಲ. ಸಿದ್ದರಾಮಯ್ಯ ಆದಿಯಾಗಿ ವಿಪಕ್ಷ ಮತ್ತು ಮುಸ್ಲಿಂ ನಾಯಕರು ಟೀಕೆ ಬಳಿಕ ಬೇಲ್ ಸಿಕ್ಕಿತ್ತು. ಆದರೆ ಕೆಎಲ್‍ಇ ಕಾಲೇಜ್‍ನ ಈ ದೇಶದ್ರೋಹಿ ವಿದ್ಯಾರ್ಥಿಗಳಿಗೆ ಮಾತ್ರ ಒಂದೇ ದಿನದಲ್ಲಿ ಬೇಲ್ ಪಡೆದುಕೊಂಡಿದ್ದಾರೆ. ಇದರ ಹಿಂದೆ ಕೆಎಲ್‍ಇಯ ಕೋರೆ ಮತ್ತು ಕಾಲೇಜು ಮಂಡಳಿಯ ಒತ್ತಡ ಇದೆ ಅಂತ ಚರ್ಚೆ ಆಗ್ತಿದೆ. ಈ ಸಂಬಂಧ, ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈ ಅಂದಿದ್ದ ದೇಶದ್ರೋಹಿ ಗ್ಯಾಂಗ್ ರಿಲೀಸ್
ವಿಪಕ್ಷ ನಾಯಕರು ಮಾತ್ರವಲ್ಲ, ಹಿಂದೂಪರ ಸಂಘಟನೆಗಳೇ ದೇಶದ್ರೋಹಿ ವಿದ್ಯಾರ್ಥಿಗಳ ಬಿಡುಗಡೆಗೆ ಆಕ್ರೋಶ ವ್ಯಕ್ತಪಡಿಸಿವೆ. ಹುಬ್ಬಳ್ಳಿ ಗೋಕುಲ್ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ಆರಂಭ ಮಾಡಿದರು. ಪಾಕಿಸ್ತಾನ ಹಾಗೂ ಪೊಲೀಸ್ ಆಯುಕ್ತರ ಆರ್ ದಿಲೀಪ್ ವಿರುದ್ಧ ಘೋಷಣೆ ಕೂಗಿದರು. ಏರ್‍ಪೋರ್ಟ್ ರಸ್ತೆಯಲ್ಲಿ ಟೈರ್‍ಗೆ ಬೆಂಕಿ ಹಚ್ಚಿದರು. ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಪಾಕ್ ಪರ ಘೋಷಣೆ – ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಐದು ಪ್ರಕರಣ ದಾಖಲು
ಪೊಲೀಸ್ ಆಯುಕ್ತ ಸ್ಥಳಕ್ಕೆ ಬರುವವರೆಗೆ ಧರಣಿ ಕೈಬಿಡಲ್ಲ ಎಂದು ಪಟ್ಟು ಹಿಡಿದರು. ಪೊಲೀಸರ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೀತು. ಸ್ಥಳಕ್ಕೆ ಆಗಮಿಸಿದ ಆಯುಕ್ತ ಆರ್ ದಿಲೀಪ್, ಸುಪ್ರೀಂ ಕೋರ್ಟ್ ಗೈಡಲೈನ್ ಪ್ರಕಾರ ಕೆಲಸ ಮಾಡ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಅಂತ ಕೇವಲ 30 ಸೆಕೆಂಡ್‍ನಲ್ಲೇ ಜಾಗ ಖಾಲಿ ಮಾಡಿದ್ರು. ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳು ಅಮಾನತು
ಆದರೆ ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಮಾತ್ರಕ್ಕೇ ಶಾಹೀನ್ ಶಾಲೆ ಪ್ರಕರಣದಲ್ಲಿ 16 ದಿನ ಜೈಲಿಗೆ ಹಾಕಿಸಿದ್ದ ರಾಜ್ಯ ಸರ್ಕಾರ, ಕೆಎಲ್‍ಇ ಪ್ರಕರಣದಲ್ಲಿ ಯಾಕೆ ಈ ರೀತಿ ನಡೆದುಕೊಂಡಿದೆ ಅನ್ನೋದು ವ್ಯಾಪಕ ಚರ್ಚೆಗೀಡಾಗಿದೆ.