ಹುಬ್ಬಳ್ಳಿ: ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ನೀಡಲು ನಿರ್ಧಾರವಾಗಿದೆ. ಸುಮಲತಾ ಪಕ್ಷೇತರರಾಗಿ ನಿಲ್ಲುವುದು ಅವರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಂಡ್ಯ ಲೋಕಸಭೆಯ ಗೊಂದಲದ ಬಗ್ಗೆ ಸ್ಪಷನೆ ನೀಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಮೂರು – ನಾಲ್ಕು ದಿನದಲ್ಲಿ ಅಂತಿಮ ನಿರ್ಧಾರವಾಗಲಿದೆ ಎಂದರು.
Advertisement
ಲೋಕಸಭಾ ಚುನಾವಣಾ ತಯಾರಿ ನಡೆದಿದೆ. ಮಂಡ್ಯದಿಂದ ಸುಮಲತಾಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಈಗಾಗಲೇ ಹಾಲಿ ಜೆಡಿಎಸ್ ಸಂಸದರಿದ್ದಾರೆ. ಹಾಲಿ ಜೆಡಿಎಸ್ ಇರುವಾಗ ಟಿಕೆಟ್ ಕೇಳಲು ಬರುವುದಿಲ್ಲ. ನಮ್ಮ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮೈತ್ರಿ ಹೆಚ್ಚು ಸ್ಥಾನ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಉಮೇಶ್ ಜಾಧವ್ ರಾಜೀನಾಮೆ ಅಂಗಿಕಾರ ಆಗುವುದು ಕಷ್ಟ. ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ. ಈಗ ಆಪರೇಷನ್ ಕಮಲಕ್ಕೆ ಬಲಿಯಾಗಲಿದ್ದಾರೆ. ಗೋಕಾಕ್ ಶಾಸಕ, ಜಾಧವ್, ನಾಗೇಂದ್ರ, ಮಹೇಶ್ಕ ಕುಮಟಳ್ಳಿ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿದೆ ಅಂದ್ರು.
Advertisement
ಪಕ್ಷಾಂತರ ಕಾಯ್ದೆ ವಿರುದ್ಧ ಕ್ರಮ ಜರುಗಿಸಿ ಎಂದು ನಾನೇ ದೂರು ನೀಡಿದ್ದೇನೆ. ಪಕ್ಷಾಂತರ ನಿಷೇಧ ಕಾಯ್ದೆ ಇವರಿಗೂ ಅನ್ವಯಿಸುತ್ತೆ. ಅಲ್ಲದೆ ಸ್ಪೀಕರ್ ರಾಜೀನಾಮೆ ಅಂಗಿಕಾರ ಮಾಡುವುದಿಲ್ಲ ಎಂದು ನಾ ಅಂದುಕೊಂಡಿರುವೆ. ಇವರೆಲ್ಲ ಪಕ್ಷಾಂತರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜಾಧವ್ ವಿಷಯದಲ್ಲಿ 25-30 ಕೋಟಿ ವ್ಯವಹಾರ ನಡೆದಿದೆ. ಹಾಗಂತ ನಾ ಹೇಳುತಿಲ್ಲ ಬದಲಾಗಿ ರಾಜ್ಯದ ಜನ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv