ಹುಬ್ಬಳ್ಳಿ: ಹಿಂದೂ ಮಹಾಸಾಗರ (Indian Ocean) ಹಾಗೂ ಬಂಗಾಳಕೊಲ್ಲಿಯಲ್ಲಿ (Bay of Bengal) 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿ (Hubballi) ಗ್ರಾಮೀಣ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣ ಅವರು ಶ್ರೀಲಂಕಾದ ರಾಮಸೇತುಯಿಂದ ಭಾರತದ ಧನುಷ್ ಕೋಡಿವರೆಗೆ ಸ್ವಿಮ್ಮಿಂಗ್ ರಿಲೇ ಮಾಡಿದ್ದಾರೆ.
ಭೀಕರ ಸಮುದ್ರದಲೆಗಳನ್ನು ಲೆಕ್ಕಿಸಿದೇ ಕೇವಲ 8 ಗಂಟೆ 30 ನಿಮಿಷದಲ್ಲಿ 28 ಕಿ.ಮೀ ಈಜಿದ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣ ಮತ್ತು ಅವರ 8 ಜನರ ತಂಡ ಈ ಸಾಧನೆ ಮಾಡಿದೆ. ಉತ್ತರಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು, ಪಶ್ಚಿಮ ಬಂಗಾಳ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳು, ಹುಬ್ಬಳ್ಳಿ ಕಿಮ್ಸ್‌ನ ಎಂಬಿಬಿಎಸ್ ವಿದ್ಯಾರ್ಥಿನಿ ಅಮನ ಶಾನ್‌ಭಾಗ್ ಈ ಸಾಧನೆ ಮಾಡಿದ್ದಾರೆ. ಫಿಟ್ ಇಂಡಿಯಾ ಮತ್ತು ಭಾರತ ಸ್ವಿಮ್ಮಿಂಗ್ ಫೆಡರೇಷನ್ ನೇತೃತ್ವದಲ್ಲಿ ಸ್ವಿಮ್ಮಿಂಗ್ ರಿಲೇ ನಡೆದಿತ್ತು. ಇದನ್ನೂ ಓದಿ: ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು
ಇನ್ನೂ ಜೂನ್ ತಿಂಗಳಲ್ಲಿ ಈ ತಂಡವು ಅತ್ಯಂತ ಅಪಾಯಕಾರಿಯಾಗಿರುವ ಇಂಗ್ಲಿಷ್ ಕಾಲುವೆಯಲ್ಲಿ ಈಜಲು ಸಿದ್ಧವಾಗಿದೆ. ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯದಲ್ಲಿರುವ 36 ಕಿ.ಮೀ ಇಂಗ್ಲಿಷ್ ಕಾಲುವೆಯಲ್ಲಿ ಈಜಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ. ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿರುವ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣ ಅವರ ಸಾಧನೆಯು ಎಲ್ಲರ ಮೆಚ್ಚುಗೆಗಳಿಸಿದೆ.