ಹುಬ್ಬಳ್ಳಿ: ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್‌ನಿಂದ (Flyover) ಕಬ್ಬಿಣದ ರಾಡ್ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್‍ಐ ನಾಭಿರಾಜ್ ದಯಣ್ಣವರ (ASI Nabhiraj Dayannavar) ಅವರು ಸಾವನ್ನಪ್ಪಿದ್ದಾರೆ.
ನಗರದ (Hubballi) ಕೋರ್ಟ್ ವೃತ್ತದಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಂಗಳವಾರ ಸಂಜೆ ರಾಡ್ ಬಿದ್ದಿದೆ. ಈ ವೇಳೆ ಎಎಸ್‍ಐ ಗಾಯಗೊಂಡಿದ್ದರು. ಅವರನ್ನು ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಾಲ್ಕು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಎಎಸ್‍ಐ ನಿವೃತ್ತಿಗೆ ಕೇವಲ ಹತ್ತು ತಿಂಗಳು ಮಾತ್ರ ಬಾಕಿ ಇತ್ತು ಎಂದು ತಿಳಿದು ಬಂದಿದೆ.
ಫ್ಲೈಓವರ್ ಅನ್ನು 320 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.