ಹುಬ್ಬಳ್ಳಿ: ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಫ್ಯಾಕ್ಟರಿ ಸ್ಫೋಟಕ್ಕೆ ಸಂಬಂಧಿಸಿದಂತೆ ಇನ್ನೂ ಸಹ ಮಾಲೀಕ ಪತ್ತೆಯಾಗಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಅನಧಿಕೃತವಾಗಿ ಫ್ಯಾಕ್ಟರಿ ಆರಂಭಿಸಿ 3 ಜೀವಗಳನ್ನು ಬಲಿಪಡೆದು, ಇದೀಗ ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್‌ಗಾಗಿ ತೀವ್ರ ಹುಡುಕಾಟ ನಡೆದಿದೆ. ಈ ಕಾರ್ಯಾಚರಣೆಗೆ 3 ಪೊಲೀಸ್ ತಂಡಗಳು ರಚನೆಯಾಗಿವೆ. ಇದನ್ನೂ ಓದಿ: ಗೋಮಾಂಸ ಪ್ರಕರಣವನ್ನು ಪ್ರಸ್ತಾಪಿಸಿ ಸಿದ್ದುವನ್ನು ಸಿಂಹ ಎಂದು ಕೊಂಡಾಡಿದ ಜಮೀರ್
Advertisement
ಮೃತ ವಿಜಯಲಕ್ಷ್ಮಿ ಪತಿ ವೀರಭದ್ರ ದೂರಿನ ಆಧಾರದ ಮೇಲೆ ಐಪಿಸಿ 286, 337, 338, 304, ಎಕ್ಸ್‌ಪ್ಲೋಸಿವ್ ಆ್ಯಕ್ಟ್ 1908 ಅಡಿ ಕೇಸ್ ದಾಖಲಿಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಫ್ಯಾಕ್ಟರಿ ಮ್ಯಾನೇಜರ್ ಮಂಜುನಾಥ್‌ನನ್ನು ಈಗಾಗಲೇ ಬಂಧನ ಮಾಡಿದ್ದಾರೆ. ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್‌ಗಾಗಿ ತೀವ್ರ ಹುಡುಕಾಟ ನಡೆದಿದ್ದು, ಈ ಕಾರ್ಯಾಚರಣೆಗೆ 3 ಪೊಲೀಸ್ ತಂಡಗಳು ರಚನೆಯಾಗಿವೆ. ಇದನ್ನೂ ಓದಿ: ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ
Advertisement
ಘಟನೆ ನಡೆದು 4 ದಿನಗಳಾದರೂ ಪ್ರಕರಣದ ಪ್ರಮುಖ ಆರೋಪಿ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್ ಇನ್ನೂ ಬಂಧನವಾಗಿಲ್ಲ. ಹೀಗಾಗಿ ಮೃತರ ಕುಟುಂಬಸ್ಥರು, ಗಾಯಾಳುಗಳ ಕುಟುಂಬಸ್ಥರು ಸೇರಿ ಫ್ಯಾಕ್ಟರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.