ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ (Hubballi Dharwad) ಸ್ಮಾರ್ಟ್ ಸಿಟಿ (Smart City) ವತಿಯಿಂದ ಮೇ 10 ರಂದು ತಪ್ಪದೇ ಮತ ಚಲಾಯಿಸುವವರಿಗೆ 100 ರೂ. ಉಚಿತ ಬೈಸಿಕಲ್ ರಿಚಾರ್ಜ್ (Smart Bicycle Recharge)ಪಡೆಯುವ ಸುವರ್ಣಾವಕಾಶ ನೀಡಿದೆ. ಮತ ಚಲಾಯಿಸುವ ಮೂಲಕ ಸವಾರಿ ಸವಾರರ ಖಾತೆಗೆ 100 ರೂ. ಗಳ ಉಚಿತ ರಿಚಾರ್ಜ್ ಕೊಡುಗೆ ಪಡೆಯಬಹುದು ಎಂದು ಹೇಳಿದೆ.
ಅಸ್ತಿತ್ವದಲ್ಲಿರುವ ಸೈಕಲ್ ಬಳಕೆದಾರರು ಮೇ 10 ರಂದು ಮತ ಚಲಾಯಿಸಿದ ನಂತರ ನಿಮ್ಮ ತೋರುಬೆರಳನ್ನು ಶಾಯಿಯಿಂದ ತೋರಿಸುವ ಸೆಲ್ಫಿ ತೆಗೆದು, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 6363803942 ಸಂಖ್ಯೆಗೆ ವಾಟ್ಸಪ್ ಮಾಡಬೇಕು. ಹೊಸ ಬಳಕೆದಾರರು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮೇ 10 ರೊಳಗೆ ಸವಾರಿ ಸ್ಮಾರ್ಟ್ ಕಾರ್ಡ್ ಪಡೆದು, ಅಸ್ತಿತ್ವದಲ್ಲಿರುವ ಸವಾರಿ ಬಳಕೆದಾರರ ಕಾರ್ಯವಿಧಾನ ಅನುಸರಿಸಬೇಕು. ಇದನ್ನೂ ಓದಿ: ಹಾಸನ ನಗರಕ್ಕೆ ಬಿಜೆಪಿಯವರ ಕೊಡುಗೆ 60 ಬ್ರಾಂಡಿ ಶಾಪ್: ಹೆಚ್.ಡಿ ರೇವಣ್ಣ
ಈ ಕೊಡುಗೆ ಮೇ 10ರ ಮಧ್ಯರಾತ್ರಿಯವರೆಗೆ ಮಾತ್ರ ಚಾಲ್ತಿಯಲ್ಲಿರಲಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 6363902155 ಸಂಪರ್ಕಿಸುವಂತೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಕರ್ನಾಟಕವನ್ನ ನಂ.1 ರಾಜ್ಯ ಮಾಡ್ತೀವಿ, ನಾನು ನಿಮ್ಮ ಸೇವಕ – ಜನರ ಮುಂದೆ ಮೋದಿ ಭಾವುಕ