ಹುಬ್ಬಳ್ಳಿ: ದೆಹಲಿಗೆ ವ್ಯಾಪಾರಕ್ಕಾಗಿ ಹೋಗಿ ಬಂದಿದ್ದ ಹುಬ್ಬಳ್ಳಿಯ ಮುಲ್ಲಾ ಓಣಿಯ ನಿವಾಸಿ ರೋಗಿ ನಂಬರ್-194ರ ಸಂಪರ್ಕದಿಂದ ಇದೀಗ ಹುಬ್ಬಳ್ಳಿಯಲ್ಲಿ ಮತ್ತೆ ಎರಡು ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಒಬ್ಬನಿಂದ ಒಂದೇ ಕುಟುಂಬದ ಏಳು ಜನರಿಗೆ ಸೋಂಕು ತಗುಲಿದೆ.
ತಮ್ಮನಿಂದಾಗಿ ಸಹೋದರ, ಸಹೋದರಿಯರ ಮಕ್ಕಳಿಗೂ ಸೋಂಕು ತಗುಲಿದೆ. ಕೊರೊನಾ ವೈರಸ್ ಮುಲ್ಲಾ ಓಣಿಯ ಕುಟುಂಬಕ್ಕೆ ಸಂಕಷ್ಟವನ್ನು ತಂದೊಡ್ಡಿದ್ದು, ಈಗ ಒಂದೇ ಕುಟುಂಬದಲ್ಲಿಯೇ 7 ಜನರಿಗೆ ಸೋಂಕು ತಗುಲುವ ಮೂಲಕ ಕೊರೊನಾ ವೈರಸ್ ರೌದ್ರನರ್ತನ ಮೆರೆದಿದೆ.
Advertisement
Advertisement
ದೆಹಲಿಗೆ ವ್ಯಾಪಾರಕ್ಕಾಗಿ ಹೋಗಿದ್ದ ಹುಬ್ಬಳ್ಳಿಯ ಮುಲ್ಲಾ ಓಣಿಯ ವ್ಯಕ್ತಿಯಲ್ಲಿ ಏಪ್ರಿಲ್ 09ರಂದು ಸೋಂಕು ಇರುವುದು ದೃಢಪಟ್ಟಿತ್ತು. ಅಂದಿನಿಂದ ಸೋಂಕಿತನ ಕುಟುಂಬದ ಸದಸ್ಯರನ್ನ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ ಏಪ್ರೀಲ್ 14ರಂದು ಅದೇ ಕುಟುಂಬದ ಅಣ್ಣ ಹಾಗೂ ಅಣ್ಣನ ಮೂವರು ಮಕ್ಕಳಲ್ಲೂ ಸೊಂಕು ಕಾಣಿಸಿಕೊಂಡಿತ್ತು.
Advertisement
ರೋಗಿ-233 ಗಂಡು ಮಗು(5 ವರ್ಷ), ರೋಗಿ-234 – ಗಂಡು ಮಗು(3.6 ವರ್ಷ), ರೋಗಿ-235 – ಹೆಣ್ಣು ಮಗು(7 ವರ್ಷ) ಹಾಗೂ ರೋಗಿ-236 – ಪುರುಷ(37 ವರ್ಷ) ಎಂದು ಗುರುತಿಸಲಾಗಿತ್ತು. ಇದಾದ ನಂತರ ಖಬರಸ್ತಾನ ಕಾವಲುಗಾರ ರೋಗಿ-363ರಲ್ಲಿ ಸೋಂಕು ದೃಢಪಟ್ಟಿತ್ತು. ಈಗ ಹುಬ್ಬಳ್ಳಿಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ರೋಗಿ-236ರ ಸಂರ್ಪಕದಿಂದ ಇಬ್ಬರಿಗೆ ಕೋವಿಡ್ ನಂಜು ತಗುಲಿದೆ. ರೋಗಿ-430(30 ವರ್ಷ)ದ ಓರ್ವ ಯುವತಿ ಹಾಗೂ ರೋಗಿ- 431 (13 ವರ್ಷ)ದ ಬಾಲಕಿಗೆ ಕೊರೊನಾ ದೃಢಪಟ್ಟಿದೆ.
Advertisement
ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತಿಬ್ಬರಿಗೆ ಸೋಂಕು ತಗುಲಿರುವುದರಿಂದ ಸೋಂಕಿತರ ಸಂಖ್ಯೆ 9ಕ್ಕೆ ಏರಿದ್ದು, ಈ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರಿಗೆ ಜಿಲ್ಲಾಡಳಿತ ಇದೀಗ ಹುಡುಕಾಟ ನಡೆಸುತ್ತಿದೆ. ಆ ಹಿನ್ನೆಲೆಯಲ್ಲಿ ಸೋಂಕಿತರಿಬ್ಬರ ಫೋನ್ ಕಾಲ್ ಹಿಸ್ಟರಿ ನೀಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಒಂದೇ ಕುಟುಂಬದ ಏಳು ಜನರಿಗೆ ಸೋಂಕು ಹರಿಡಿದ್ದಲ್ಲದೇ ಮುಲ್ಲಾ ಓಣಿ ಹಾಗೂ ಕರಾಡಿ ಓಣಿಗೆ ಮಾತ್ರ ಸಿಮೀತವಾಗಿದ್ದ ಸೊಂಕು ಇದೀಗ ಹುಬ್ಬಳ್ಳಿ ಕೇಶ್ವಾಪುರದ ಆಜಾದ ನಗರಕ್ಕೂ ಆವರಿಸಿರುವುದರಿಂದ ಹುಬ್ಬಳ್ಳಿಯಲ್ಲಿ ಆತಂಕ ಮತ್ತಷ್ಟು ಮನೆ ಮಾಡಿದೆ. ಹೀಗಾಗಿ ಧಾರವಾಡ ಜಿಲ್ಲಾಡಳಿತ ಜನರು ಮನೆಯಲ್ಲೆ ಇದ್ದು ಸೊಂಕು ಹರಡುವುದನ್ನ ತಡೆಗಟ್ಟಲು ನೆರವಾಗಬೇಕೆಂದು ಮನವಿ ಮಾಡಿದೆ.