ಧಾರವಾಡ: ಸಾರ್ವಜನಿಕ ಗಣೇಶನ ಮುಂದೆ ಇಟ್ಟಿದ್ದ ಹುಂಡಿಯನ್ನೇ ಕದ್ದು ಪರಾರಿ ಆಗಿದ್ದ ಖದೀಮನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಗನದೀಪ ಗೌತಮ್ ರಾಠೋಡ (21) ಬಂಧಿತ ಆರೋಪಿ. ಈತ ಹುಬ್ಬಳ್ಳಿಯ ಉತ್ತರ ಸಂಚಾರ ಪೊಲೀಸ್ ಠಾಣೆ ಪೇದೆ ಗೌತಮ್ ರಾಠೋಡ್ ಅವರ ಪುತ್ರ ಎಂದು ತಿಳಿದುಬಂದಿದೆ.
Advertisement
ಆ.27 ರಂದು ನಗರದ ದಾಜೀಬಾನ್ ಪೇಟೆಯ ಗವಳಿಗಲ್ಲಿಯಲ್ಲಿ ಗಣೇಶನ ಮುಂದೆ ಇಡಲಾಗಿದ್ದ ಹುಂಡಿಯನ್ನು ಗಗನದೀಪ ಕದ್ದು ಪರಾರಿ ಆಗಿದ್ದ. ಈ ಕೃತ್ಯ ಸಾರ್ವಜನಿಕ ಗಣೇಶ ಪೆಂಡಾಲ್‍ನಲ್ಲಿ ಹಾಕಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
Advertisement
ಸಾರ್ವಜನಿಕ ಗಣಪತಿಯ ಪೆಂಡಾಲ್‍ಗೆ ಹಾಕಿದ್ದ ಐದು ಫೋಕಸ್ ಲೈಟ್ ಹಾಗೂ ಇತರ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ತಡವಾಗಿ ಉಪನಗರ ಪೊಲೀಸ್ ಠಾಣೆಯಲ್ಲಿ ಗಣೇಶ ಮಂಡಳಿಯವರು ದೂರು ದಾಖಲಿಸಿದ್ದರು. ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಪೊಲೀಸ್ ಪೇದೆಯ ಮಗನೇ ಈ ರೀತಿ ಮಾಡೋದಾ ಅಂತಾ ಜನ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
Advertisement
https://www.youtube.com/watch?v=NBopJ5eVXrA
Advertisement