ಹುಬ್ಬಳ್ಳಿ: ಒಂದು ಮನೆ ಎರಡು ಬಾಗಿಲು ಅನ್ನೋ ಹಂಗಾಗಿದೆ ರಾಜ್ಯ ಕಾಂಗ್ರೆಸ್ ಪರಿಸ್ಥಿತಿ. ಒಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಧ್ಯೆ ಇರುವ ಮುನಿಸು ಭಿನ್ನಾಭಿಪ್ರಾಯ ಪದೇ ಪದೇ ಬಹಿರಂಗವಾಗ್ತಾನೇ ಇದೆ. ಇನ್ನೊಂದೆಡೆ ಹೊಸ ಹೊಸ ಟಾಸ್ಕ್ ವಹಿಸಿ ಸಿದ್ದರಾಮಯ್ಯ ಶಿಷ್ಯರ ತಾಳ್ಮೆ ಪರೀಕ್ಷೆಗೆ ಡಿಕೆಶಿ ಮುಂದಾಗಿದ್ದಾರೆ.
Advertisement
ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರ ಪತನಕ್ಕೆ ಮುನ್ನುಡಿ ಬರೆದ ಹಾಲಿ ಸಚಿವ ಆನಂದ್ ಸಿಂಗ್‍ರನ್ನ ಮುಂದಿನ ಚುನಾವಣೆಯಲ್ಲಿ ಸೋಲಿಸಲು ಡಿಕೆಶಿ ಪಣ ತೊಟ್ಟಿದ್ದಾರೆ. ಆನಂದ್ ಸಿಂಗ್‍ರನ್ನ ಮುಂದಿನ ಚುನಾವಣೆಯಲ್ಲಿ ಸೋಲಿಸಲು ಸ್ವತಃ ಸಂತೋಷ್ ಲಾಡ್‍ಗೆ ಜವಾಬ್ದಾರಿ ವಹಿಸಲಾಗಿದೆ. ಇನ್ನೊಂದೆಡೆ ತಮ್ಮ ಶಿಷ್ಯ ನಾಗರಾಜ ಛಬ್ಬಿಗೆ ಕಲಘಟಗಿಯಿಂದ ಟಿಕೆಟ್ ಕೊಡಿಸಲು ಡಿಕೆಶಿ ಲಾಡ್‍ಗೆ ನೂತನ ವಿಜಯನಗರ ಜಿಲ್ಲೆಯಿಂದಲೇ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ವಿಜಯನಗರ ಇಲ್ಲವೇ ಹರಪನಹಳ್ಳಿ ಕ್ಷೇತ್ರದಿಂದ ಲಾಡ್ ಸ್ಪರ್ದೆ ಮಾಡೋ ಸಾಧ್ಯತೆ ಇದೆ. ಇದನ್ನೂ ಓದಿ: ಟೆಂಪೋದಲ್ಲೇ ಮಹಿಳೆಯ ಅತ್ಯಾಚಾರವೆಸಗಿದ ಕಾಮುಕ
Advertisement
Advertisement
ಅಲ್ಲದೇ ಮುಂದಿನ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದ ಸ್ಪರ್ಧಾಳು ಸಂತೋಷ್ ಲಾಡ್ ಅಂತಾ ಈಗಾಗಲೇ ಸಿದ್ದರಾಮಯ್ಯ ಘೋಷಣೆ ಮಾಡಿರುವುದಕ್ಕೂ ಸಹ ಇದೀಗ ಬೆಲೆ ಇಲ್ಲದಾಗಿದೆ. ಹೀಗಾಗಿ ಸಿದ್ದರಾಮಯ್ಯ ಶಿಷ್ಯ ಸಂತೋಷ್ ಲಾಡ್‍ರನ್ನ ಕಲಘಟಗಿಯಿಂದ ವಿಜಯನಗರಕ್ಕೆ ಕಳುಹಿಸಲು ಡಿಕೆಶಿ ಮಾಡಿರೋ ಪ್ಲ್ಯಾನ್, ಇದೀಗ ಸಂತೋಷ್ ಲಾಡ್ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮಂತ್ರಾಲಯದಿಂದ ವಾಪಸ್ಸಾಗ್ತಿದ್ದಾಗ ಕಾರು ಅಪಘಾತ- ಮದ್ವೆಯಾಗ್ಬೇಕಿದ್ದ ಜೋಡಿ ಸಾವು