ಬಳ್ಳಾರಿ: ಕಳೆದ ಹತ್ತು ದಿನಗಳ ಅಂತರದಲ್ಲಿ ಹುಬ್ಬಳ್ಳಿಯಲ್ಲಿ (Hubballi) ಇಬ್ಬರು ಯುವತಿಯ ಹತ್ಯೆ ಸೇರಿದಂತೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ವಿಫಲವಾಗಿದೆ ಎಂದು ಆರೋಪಿಸಿ ಬಳ್ಳಾರಿ ಬಿಜೆಪಿ (BJP) ಮಹಿಳಾ ಘಟಕದಿಂದ ಪ್ರತಿಭಟನೆ (Protest) ಮಾಡಲಾಯಿತು.
ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಶೂನ್ಯ ಸುರಕ್ಷತೆ ಗ್ಯಾರಂಟಿ ಎಂಬ ಹೊಸ ಯೋಜನೆ ಜಾರಿಗೊಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರ ನೆಮ್ಮದಿ ಯಿಂದ ಬದಕಲು ದುಸ್ತರವಾಗಿದೆ ಎಂದು ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ (Neha Hiremath) ಮತ್ತು ಅಂಜಲಿ (Anjali) ಕೊಲೆ ಹಾಡಹಗಲೇ ನಡೆದಿವೆ. ಕೊಲೆಗಡುಕರಿಗೆ ಪೊಲೀಸರ ಭಯವಿಲ್ಲದೇ ಇರುವುದರಿಂದ ಪ್ರತಿ ನಿತ್ಯ ರಾಜ್ಯದ ಒಂದಲ್ಲೊಂದು ಕಡೆ ಕೊಲೆ, ಸುಲಿಗೆ ಮತ್ತು ಅತ್ಯಾಚಾರ ಮುಂತಾದವು ನಡೆಯುತ್ತಿವೆ ಎಂದು ದೂರಿದರು. ಇದನ್ನೂ ಓದಿ: 18 ರನ್, 18.1 ಓವರ್, ಕೊಹ್ಲಿ ಜೆರ್ಸಿ ನಂ.18 – ಮೇ 18ರಂದು ಸೋಲೇ ಕಾಣದ ಆರ್‌ಸಿಬಿಗೆ ಅಗ್ನಿಪರೀಕ್ಷೆ!
ಕೆಲಸಕ್ಕೆ, ಕಾಲೇಜಿಗೆ ಹೋದಂತಹ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಬರುತ್ತಾರೆಂಬ ನಂಬಿಕೆ ಇಲ್ಲವಾಗಿದೆ. ರಾಜ್ಯದಲ್ಲಿ ಕ್ರೈಂ ತಡೆಯುವಲ್ಲಿ ವಿಫಲವಾದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.