ತಮಿಳು ಸಿನಿಮಾ ರಂಗದ ಅನೇಕ ಹೆಸರಾಂತ ನಟ ನಟಿಯರ ನಿದ್ದೆಗೆಡಿಸಿದ್ದ ಗಾಯಕಿ ಸುಚಿತ್ರಾ ಇದೀಗ ಮತ್ತೆ ಗರಂ ಆಗಿದ್ದಾರೆ. ಖ್ಯಾತ ನಟ ಧನುಷ್ ಸೇರಿದಂತೆ ಹಲವರ ವಿರುದ್ಧ ಚೆನ್ನೈನ ಪೊಲೀಸ್ ಆಯುಕ್ತರಿಗೆ ಅವರು ದೂರು ಸಲ್ಲಿಸಿದ್ದಾರೆ. ತನ್ನನ್ನು ಅವಹೇಳನಕಾರಿ ರೀತಿಯಲ್ಲಿ ರಂಗನಾಥನ್ ಎನ್ನುವ ನಟ ಮತ್ತು ಪತ್ರಕರ್ತ ತೋರಿಸುತ್ತಿದ್ದು, ಈ ನಟನ ಹಿಂದೆ ಧನುಷ್ ಮತ್ತು ಇತರ ಕಲಾವಿದರು ಇದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement
2017ರಲ್ಲಿ ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಪೇಜಿನಲ್ಲಿ ಕಾಲಿವುಡ್ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋಗಳನ್ನು ಅವರು ಪೋಸ್ಟ್ ಮಾಡಿದ್ದರು. ಹೆಸರಾಂತ ನಟರು ಮಾತ್ರವಲ್ಲ, ನಟಿಯರ ಅಶ್ಲೀಲ ವಿಡಿಯೋಗಳನ್ನು ಅವರು ಪೋಸ್ಟ್ ಮಾಡುತ್ತಿದ್ದರು. ಇದಕ್ಕೆ ಸುಚಿ ಲೀಕ್ಸ್ ಎಂದು ಹೆಸರಿಟ್ಟಿದ್ದರು. ಆ ವೇಳೆಯಲ್ಲಿ ಕಾಲಿವುಡ್ ನಲ್ಲಿ ಅದು ಸಂಚಲನವನ್ನೇ ಮೂಡಿಸಿತ್ತು. ಅನೇಕ ನಟ ನಟಿಯರು ತಲೆತಗ್ಗಿಸುವಂತೆ ಮಾಡಿತ್ತು. ತಮ್ಮ ಖಾತೆಗಳನ್ನು ಹ್ಯಾಕ್ ಮಾಡಿ, ಯಾರೋ ಈ ವಿಡಿಯೋಗಳನ್ನು ಹಂಚುತ್ತಿದ್ದಾರೆ ಎಂದು ಸುಚಿತ್ರಾ ಹೇಳಿದ್ದರು. ಅಲ್ಲಿಂದ ಸುಚಿತ್ರಾ ಅವರ ಮೇಲೆ ನಿರಂತರ ಕಿರುಕುಳ ನೀಡಲಾಗುತ್ತಿದೆಯಂತೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ
Advertisement
Advertisement
ತಾನು ಮಾಡದೇ ಇರುವ ತಪ್ಪಿಗೆ 2017ರಿಂದ ಕಿರುಕುಳವನ್ನು ಅನುಭವಿಸುತ್ತಾ ಬಂದಿದ್ದೇನೆ. ಯೂಟ್ಯೂನಲ್ಲಿ ಪತ್ರಕರ್ತ ಮತ್ತು ನಟನಾಗಿರುವ ಬೈಲ್ವಾನ್ ರಂಗನಾಥ್ ಅನ್ನುವವರು ನಾನು ಲೈಂಗಿಕ ವ್ಯಸನಿ, ಮದ್ಯ ವ್ಯಸನಿ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಅನೇಕ ವಿಡಿಯೋಗಳನ್ನು ನನ್ನ ವಿರುದ್ಧ ಮಾಡಿದ್ದಾರೆ. ಇವರ ಹಿಂದೆ ನಟ ಧನುಷ್, ನಿರ್ದೇಶಕ ವೆಂಕಟ್ ಪ್ರಭು ಮತ್ತು ಕಾರ್ತಿಕ್ ಕುಮಾರ್ ಎನ್ನುವವರು ಇದ್ದಾರೆ. ಇದರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಸುಚಿತ್ರಾ ದೂರು ನೀಡಿದ್ದಾರೆ.