ಮೈಸೂರು: ಹನುಮ ಜಯಂತಿ (Hanuman Jayanti) ಮೆರವಣಿಗೆ ವೇಳೆ 2 ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಯುವಬ್ರಿಗೇಡ್ ಕಾರ್ಯಕರ್ತನನ್ನು (Yuva Brigade Activist) ಗಾಜಿನ ಬಾಟಲಿಯಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ಮೈಸೂರಿನ (Mysuru) ಟಿ. ನರಸೀಪುರದಲ್ಲಿ (T. Narseepur) ನಡೆದಿದೆ. ಮೆರವಣಿಗೆಯಲ್ಲಿ ಪುನೀತ್ ರಾಜ್ಕುಮಾರ್ ಫೋಟೋ ಹಾಕಿದ್ದನ್ನು ತೆಗೆಸಿದ್ದೇ ಹತ್ಯೆಗೆ ಕಾಣವಾಯಿತಾ ಎಂಬ ಪ್ರಶ್ನೆ ಇದೀಗ ಮೂಡಿದೆ.
Advertisement
ಕೊಲೆಯಾದ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಘಟನೆಯ ವಿವರವನ್ನು ತಿಳಿಸಿದ್ದಾರೆ. ಶನಿವಾರ ಟಿ. ನರಸೀಪುರದಲ್ಲಿ ಹನುಮ ಜಯಂತಿ ಮೆರವಣಿಗೆ ನಡೆದಿತ್ತು. ಈ ವೇಳೆ ವ್ಯಾನ್ನಲ್ಲಿ ಭಾರತ ಮಾತೆಯ ಫೋಟೋವನ್ನು ಹಾಕಲಾಗಿತ್ತು. ಅದರ ಮುಂದೆ ಪುನೀತ್ ರಾಜ್ಕುಮಾರ್ ಫೋಟೋ ಇದ್ದಿದ್ದರಿಂದ ಕೆಲವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.
Advertisement
Advertisement
ಈ ವಿಚಾರಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ್ ಇಲ್ಲಿ ಯಾವ ವ್ಯಕ್ತಿಯ ಫೋಟೋ ಕೂಡಾ ಹಾಕೋದು ಬೇಡ ಎಂದು ಹೇಳಿ ತಡೆದಿದ್ದರು. ಆ ವೇಳೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ನಂತರ ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಅವರ ಗುಂಪಿನಲ್ಲೇ ಗಲಾಟೆ ಆಯಿತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹನುಮ ಜಯಂತಿ ವೇಳೆ ಗಲಾಟೆ – ಬಾಟಲಿಯಿಂದ ಇರಿದು ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆ
Advertisement
ಘಟನೆಗೆ ಸಂಬಂಧಿಸಿದಂತೆ ಭಾನುವಾರ ಮಧ್ಯಾಹ್ನ ಕೂಡಾ ಜಗಳವಾಗಿತ್ತು. ಬಳಿಕ ರಾತ್ರಿ ರಾಜಿ ಪಂಚಾಯಿತಿ ಎಂಬ ನೆಪ ಹೇಳಿ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಮೃತ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ನಡುವೆ 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕಳ್ಳರು
Web Stories