ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಅಜ್ಜಿ ನಿಧನರಾಗಿದ್ದಾರೆ. ಹೃತಿಕ್ ರೋಷನ್ ಅವರ ತಾಯಿಯ ತಾಯಿ ಆಗಿರುವ ಪದ್ಮ ರಾಣಿ ಓಂ ಪ್ರಕಾಶ್ ಅವರು ಮುಂಬೈನ ನಿವಾಸದಲ್ಲಿ ನಿಧನರಾಗಿದ್ದು, ಅವರಿಗೆ 91 ವರ್ಷ ವಯಸ್ಸಾಗಿತ್ತು. ಹೃತಿಕ್ ತಂದೆ ರಾಕೇಶ್ ರೋಷನ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಪದ್ಮ ರಾಣಿ ಓಂ ಪ್ರಕಾಶ್ ಅವರು ಸಿನಿಮಾ ನಿರ್ಮಾಪಕ ದಿವಂಗತ ಓಂ ಪ್ರಕಾಶ್ ಜಾ ಅವರ ಪತ್ನಿಯಾಗಿದ್ದರು.
ಹಿಂದಿ ಚಿತ್ರರಂಗದ ನಟ ಹೃತಿಕ್ ರೋಷನ್ ಅವರ ತಾಯಿಯ ತಾಯಿ ಆಗಿರುವ ಪದ್ಮಾ ರಾಣಿ ಓಂಪ್ರಕಾಶ ಗುರುವಾರ ಸಂಜೆ (ಜೂ. 16) ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಾಸಿಗೆ ಹಿಡಿದಿದ್ದರು. ಗುರುವಾರ ಸಂಜೆ ಪದ್ಮಾ ಅವರು ನಿಧರಾಗಿದ್ದು, ಈ ಬಗ್ಗೆ ಪದ್ಮಾ ರಾಣಿ ಓಂಪ್ರಕಾಶ್ ಅವರ ಅಳಿಯ ನಿರ್ಮಾಪಕ ರಾಕೇಶ್ ರೋಷನ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್
ಹೃತಿಕ್ ಅವರ ತಾಯಿ ಪಿಂಕಿ ರೋಷನ್ ಅವರ ತಂದೆಯಾಗಿದ್ದ ಚಲನಚಿತ್ರ ನಿರ್ಮಾಪಕ ಜೆ ಓಂ ಪ್ರಕಾಶ್ ಅವರ ಪತ್ನಿ. ಪದ್ಮಾ ಕಳೆದ ಎರಡು ವರ್ಷಗಳಿಂದ ರೋಷನ್ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆಕೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹಾಸಿಗೆ ಹಿಡಿದಿದ್ದ ಪದ್ಮಾ ಅವರೊಂದಿಗೆ ಪಿಂಕಿ ಅವರು ಸದಾಕಾಲ ಫೋಟೋಗಳನ್ನು ತೆಗೆಸಿಕೊಂಡು ಶೇರ್ ಮಾಡುತ್ತಿದ್ದರು. ಜೆ ಓಂಪ್ರಕಾಶ್ ಅವರು 1974 ರಲ್ಲಿ ರಾಜೇಶ್ ಖನ್ನಾ ಅವರ `ಆಪ್ ಕಿ ಕಸಮ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸಾಕಷ್ಟು ಹಿಟ್ ಚಲನಚಿತ್ರಗಳನ್ನು ನಿರ್ಮಿಸಿದರು. ಆಗಸ್ಟ್ 07, 2019 ರಂದು ನಿಧನರಾಗಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು.
Live Tv