ಹೋಮ್ ಕ್ವಾರೆಂಟೈನ್ ಮಧ್ಯೆ ಹುಟ್ಟುಹಬ್ಬ ಹೇಗೆ ಆಚರಿಸಬೇಕೆಂದು ತಿಳಿಸಿದ ಹೃತಿಕ್

Public TV
3 Min Read
hritik roshan

ಮುಂಬೈ: ವಿಚ್ಛೇದಿತ ದಂಪತಿಯನ್ನು ಕೊರೊನಾ ವೈರಸ್ ಒಂದು ಮಾಡಿದ್ದು, ಇತ್ತೀಚೆಗಷ್ಟೇ ಮಾಜಿ ಪತ್ನಿ ಸುಸ್ಸೇನ್ ಖಾನ್ ಖಾನ್ ಅವರು ನಟ ಹೃತಿಕ್ ರೋಷನ್ ಅವರ ಮನೆಗೆ ಆಗಮಿಸಿದ್ದಾರೆ. ಇಬ್ಬರೂ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಈ ಕ್ಷಣವನ್ನು ಹೃತಿಕ್ ರೋಷನ್ ಅವರು ಭಾವುಕರಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೊಂದು ಸಂತಸ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಹೋಮ್ ಕ್ವಾರೈಂಟೇನ್ ಹಿನ್ನೆಲೆ ಹೃತಿಕ್ ದಂಪತಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದು, ಕುಟುಂಬದೊಂದಿಗಿನ ಕ್ಷಣವನ್ನು ಆನಂದಿಸುತ್ತಿದ್ದಾರೆ. ಇದೀಗ ಮಗನ ಹುಟ್ಟುಹಬ್ಬದ ಸಂಭ್ರದ ಕ್ಷಣವನ್ನು ಸಹ ಹಂಚಿಕೊಂಡಿದ್ದು, ಕೊರೊನಾ ವೈರಸ್ ಗೊಂದಲದ ಮಧ್ಯೆ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

1602d334 bac5 11e5 8a67 7b6ff47c171b

ಈ ಕುರಿತ ವಿಡಿಯೋವನ್ನು ಹೃತಿಕ್ ರೋಷನ್ ಅವರು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಮಾರ್ಚ್ 28ರಂದು ಹ್ರಿಹಾನ್‍ನ ಹುಟ್ಟುಹಬ್ಬ, ಸಣ್ಣ ಹೊಂದಾಣಿಕೆ, ಸಲಿಗೆ ಹಾಗೂ ತಂತ್ರಜ್ಞಾನಕ್ಕೆ ಧನ್ಯವಾದ. ಗಾಡ್ ಬ್ಲೆಸ್ ಅವರ್ ಚಿಲ್ಡ್ರನ್. ಉತ್ತಮ ದಿನಗಳು ಕಾದಿವೆ. ಲವ್ ಟು ಆಲ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹ್ಯಾಪಿ ಬರ್ತ್ ಡೇ, ಹ್ರಿಹಾನ್‍ರಿಟನ್ರ್ಸ್‍ಫೋರ್ಟೀನ್, ಗಿವ್‍ಟೈಮ್‍ಟುಥೀಲ್ಡರ್ಸ್ ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

ಸುಸ್ಸೇನ್ ಸಹ ಈ ಕುರಿತು ಪೋಸ್ಟ್ ಮಾಡಿದ್ದು, ಟು ಮೈ ಸನ್… ನಾವು ಎಲ್ಲಿಗೆ ಹೋಗುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ನಾನು ಹೇಳಲು ಬಯಸುತ್ತೇನೆ, ನೀನು ನಿನ್ನ ದಾರಿಯಲ್ಲಿದ್ದೀಯಾ. ಅತ್ಯುತ್ತಮವಾದುದು ಅಲ್ಲಿದೆ. ಸನ್ ಶೈನ್‍ನ ನನ್ನ ಕಿರಣಕ್ಕೆ 14ನೇ ಹುಟ್ಟುಹಬ್ಬದ ಶುಭಾಶಯ. ಇಂದು, ನಾಳೆ ಎಂದೆಂದಿಗೂ ನೀನು ನನ್ನ ಅಂತರಂಗದ ಆಳದಲ್ಲಿ ಇರುತ್ತೀಯಾ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಪತ್ನಿ ಸುಸ್ಸೇನ್ ಖಾನ್ ದಂಪತಿ ಈಗಾಗಲೇ ವಿಚ್ಛೇದನ ಪಡೆದು ವರ್ಷಗಳೇ ಕಳೆದಿದೆ. ಆದರೆ ಈಗ ಕೊರೊನಾ ವೈರಸ್ ಭೀತಿಯಿಂದ ಮತ್ತೆ ದಂಪತಿ ಒಂದಾಗಿದ್ದಾರೆ. ವಿಚ್ಛೇದನ ಪಡೆದಿದ್ದರೂ ಹೃತಿಕ್, ಸುಸ್ಸೇನ್ ತಮ್ಮ ಮಕ್ಕಳು ರೇಹಾನ್ ಮತ್ತು ರಿದಾನ್ ಪಾಲಿಗೆ ಈಗಲೂ ತಂದೆ-ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೋಸ್ಕರ ಈ ದಂಪತಿ ಒಂದಾಗಿದ್ದಾರೆ. ಸದ್ಯ ಕ್ವಾರೆಂಟೈನ್ ಸಮಯವನ್ನು ಕಳೆಯಲು ಹೃತಿಕ್ ತಮ್ಮ ಜುಹು ಮನೆಗೆ ಮಕ್ಕಳ ಜೊತೆ ಶಿಫ್ಟ್ ಆಗಿದ್ದು, ಅವರಿಗೆ ಸುಸ್ಸೇನ್ ಕೂಡ ಸಾಥ್ ನೀಡುತ್ತಿದ್ದಾರೆ.

24hrithik airport1

ದೇಶವು ಲಾಕ್‍ಡೌನ್‍ನಲ್ಲಿ ಇರೋದನ್ನ ರೂಢಿ ಮಾಡಿಕೊಳ್ಳುತ್ತಿರುವ ಸಮಯದಲ್ಲಿ ಮಕ್ಕಳು ನಮ್ಮಿಂದ ದೂರವಿದ್ದರೆ ಹೆತ್ತವರಿಗೆ ಸಹಿಸೋದಿಕ್ಕೆ ಆಗೋದಿಲ್ಲ. ಇಂದು ದೇಶ ಎದುರಿಸುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸಲು ಇಡೀ ವಿಶ್ವ ಸಾಮಾಜಿಕ ಅಂತರ ಹಾಗೂ ಲಾಕ್‍ಡೌನ್ ವಿಚಾರದಲ್ಲಿ ಒಗ್ಗಟ್ಟು ತೋರುತ್ತಿರುವುದನ್ನು ನೋಡಿದರೆ ಹೃದಯತುಂಬಿ ಬರುತ್ತದೆ. ನನ್ನ ಮಾಜಿ ಪತ್ನಿ ಸುಸ್ಸೇನ್ ಮಕ್ಕಳಿಗೋಸ್ಕರ ತಾತ್ಕಾಲಿಕವಾಗಿ ನನ್ನ ಮನೆಗೆ ಬಂದಿದ್ದಾಳೆ. ಇದರಿಂದ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿ ಎರಡೂ ಸಿಗುತ್ತಿದೆ. ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ, ಪ್ರೋತ್ಸಾಹ ನೀಡಿದ್ದಕ್ಕೆ ಸುಸ್ಸೇನ್‍ಗೆ ಧನ್ಯವಾದ ಎಂದು ಈ ಹಿಂದಿನ ಪೋಸ್ಟ್ ನಲ್ಲಿ ಹೃತಿಕ್ ಬರೆದುಕೊಂಡು ಫೋಟೋ ಹಂಚಿಕೊಂಡಿದ್ದರು.

261240 hritik

17 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಹೃತಿಕ್, ಸುಸ್ಸೇನ್ 2014ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. ವಿಚ್ಛೇದನ ಪಡೆದು ಆರು ವರ್ಷಗಳು ಕಳೆಯುತ್ತಿದೆ. ಆದರೂ ಸಹ ಹೃತಿಕ್, ಸುಸ್ಸೇನ್ ಒಳ್ಳೆಯ ಸ್ನೇಹಿತರಾಗಿ, ಮಕ್ಕಳಿಗಾಗಿ ಪೋಷಕರ ಕರ್ತವ್ಯವನ್ನು ಒಟ್ಟಾಗಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ದಂಪತಿ ಹೋಗುತ್ತಾರೆ, ಜೊತೆಗೆ ಡಿನ್ನರ್, ಶಾಪಿಂಗ್ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *