ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ತಾಯಿ ಪಿಂಕಿ ಅವರ ವರ್ಕೌಟ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೃತಿಕ್ ರೋಷನ್ ಅವರು ತಮ್ಮ 68 ವರ್ಷದ ತಾಯಿ ಫಾರ್ಮ್ಹೌಸ್ನಲ್ಲಿ ಕಷ್ಟಕರವಾದ ವ್ಯಾಯಾಮಾಗಳನ್ನು ಮಾಡಲು ಪ್ರಯತ್ನಿಸುತ್ತಿರುವ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 68ನೇ ವಯಸ್ಸಿನಲ್ಲಿಯೂ ಅವರು ಫಿಟ್ನೆಸ್ ಹಾಗೂ ಆರೋಗ್ಯಕ್ಕಾಗಿ ಎಲ್ಲವನ್ನು ಮಾಡುತ್ತಿರುವುದನ್ನು ನೋಡಿದರೆ, ನಾವು ಕೂಡ ಇದನ್ನು ಮುಂದುವರೆಸಿದರೆ ಆರೋಗ್ಯವಾಗಿರುವುದರಲ್ಲಿ ಅನುಮಾನವೇ ಇಲ್ಲ. ಅವರು ಜಿಮ್ಗೆ ಹೋಗಿ ವ್ಯಾಯಾಮ ಮಾಡಲು ಎಷ್ಟು ಕಷ್ಟಪಡುತ್ತಾರೆ ಎಂದು ನನಗೆ ತಿಳಿದಿದೆ. ಆದರೂ ಎಚ್ಚರಿಕೆಯಿಂದ ವ್ಯಾಯಾಮ ಮಾಡುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೋವನ್ನು ಶೇರ್ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು. ನಮಗೆ ಬೆಂಬಲ ಹಾಗೂ ಪ್ರೀತಿ ನೀಡುತ್ತಿರುವ, ನಮಗಾಗಿ ಪ್ರಾರ್ಥಿಸುತ್ತಿರುವ ಸ್ನೇಹಿತರು ಮತ್ತು ಕುಟುಂಬದವರಿಗೆ ನನ್ನ ಪ್ರೀತಿಯ ಧನ್ಯವಾದಗಳು. ಇದನ್ನೂ ಓದಿ: ಮಗನ ಬಂಧನದ ಬಳಿಕ ಜೊತೆಯಾಗಿ ಕಾಣಿಸಿಕೊಂಡ ಶಾರೂಖ್ ದಂಪತಿ
View this post on Instagram
ನನ್ನ ತಾಯಿ 58ನೇ ವಯಸ್ಸಿನಲ್ಲಿ ವರ್ಕೌಟ್ ಆರಂಭಿಸಿದರು. ಬೇರೆ ಪೋಷಕರು ವ್ಯಾಯಾಮ ಮಾಡುವ ವಯಸ್ಸು ಮೀರಿದೆ ಎಂದು ಭಾವಿಸುತ್ತಾರೆ. ಅಂತವರಿಗೆ ವ್ಯಾಯಾಮ ಮಾಡಲು ಎಂದಿಗೂ ತಡವಾಗಿಲ್ಲ ಎಂದು ಹೇಳುತ್ತೇನೆ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಸದ್ಯ ಹೃತಿಕ್ ರೋಷನ್ ಅವರು ವಿಕ್ರಮ್ ವೇದ ಹಿಂದಿ ರಿಮೇಕ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ವಿಕ್ರಂ ವೇದ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಪುಷ್ಕರ್ ಮತ್ತು ಗಾಯತ್ರಿ ಅವರೇ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ