ಕೆಜಿಎಫ್ 2, ಕಾಂತಾರ (Kantara) ಸಿನಿಮಾಗಳ ಸಕ್ಸಸ್‌ಗೆ ಮಂಕಾದ ಬಾಲಿವುಡ್‌ಗೆ ಈಗ ಪಠಾಣ್(Pathaan), ಗದರ್ 2, ಜವಾನ್ (Jawan) ಚಿತ್ರದ ಯಶಸ್ಸಿನಿಂದ ಮರುಜೀವ ಸಿಕ್ಕಿದೆ. ಸಾಲು ಸಾಲು ಸಿನಿಮಾಗಳ ಸಕ್ಸಸ್ ಮೂಲಕ ಹಿಂದಿ ಚಿತ್ರರಂಗ ಸೌಂಡ್ ಮಾಡ್ತಿದೆ. ಈ ಬೆನ್ನಲ್ಲೇ ಬಿಟೌನ್‌ನಲ್ಲಿ ಹೊಸ ಸುದ್ದಿಯೊಂದು ಸದ್ದು ಮಾಡುತ್ತಿದೆ. ಒಂದೇ ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳು ನಟಿಸುವ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದಲ್ಲಿ ‘ವಾರ್ 2’ (War 2) ಸಿನಿಮಾ ಮೂಡಿ ಬರಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಸಖತ್ ತಯಾರಿ ಕೂಡ ನಡೆಯುತ್ತಿದೆ. ವಾರ್ ಪಾರ್ಟ್ 2ಗೆ ಅಯಾನ್ ಮುಖರ್ಜಿ ನಿರ್ದೇಶನ ಮಾಡಲಿದ್ದಾರೆ. ಈ ಪ್ರಾಜೆಕ್ಟ್‌ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ (Salman Khan), ಹೃತಿಕ್ ರೋಷನ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವರ ಜೊತೆ ಸೌತ್ ಸ್ಟಾರ್ ಜ್ಯೂ.ಎನ್‌ಟಿಆರ್ ಕೂಡ ಕಾಣಿಸಿಕೊಳ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು
ಈ ಸ್ಟಾರ್ಸ್‌ಗೆ ಈಗಾಗಲೇ ಚಿತ್ರತಂಡ ಕಥೆ ಹೇಳಿದ್ದು, ಶೂಟಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ. ಸದ್ಯ ಹೃತಿಕ್(Hrithik Roshan), ಶಾರುಖ್ (Sharukh Khan), ಸಲ್ಮಾನ್, ಜ್ಯೂ.ಎನ್‌ಟಿಆರ್ (Jr.Ntr) ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸೂಪರ್ ಸ್ಟಾರ್‌ಗಳು ಒಂದೇ ಸಿನಿಮಾದಲ್ಲಿ ನಟಿಸೋದು ಖಚಿತವೇ ಆಗಿದ್ದಲ್ಲಿ ಪ್ರೇಕ್ಷಕರಿಗೆ ಮನರಂಜನೆ ಸಿಗೋದು ಗ್ಯಾರಂಟಿ. ಇದು ನಿಜ ಆಗಲಿ ಎಂಬುದೇ ಅಭಿಮಾನಿಗಳ ಆಶಯ.