Connect with us

ರೋಗ್ ನಾಯಕಿ ಆಂಜೆಲಾ ಸುಳ್ಳು ಹೇಳ್ತಿದ್ದಾರೆ ಎಂದ ಹೃತಿಕ್

ರೋಗ್ ನಾಯಕಿ ಆಂಜೆಲಾ ಸುಳ್ಳು ಹೇಳ್ತಿದ್ದಾರೆ ಎಂದ ಹೃತಿಕ್

ಮುಂಬೈ: ರೋಗ್ ಚಿತ್ರದ ನಾಯಕಿ ಆಂಜೆಲಾ ಕ್ರಿಸ್ಲಿಂಕಿ ಸುಳ್ಳು ಹೇಳ್ತಿದ್ದಾರೆಂದು ಬಾಲಿವುಡ್ ನಟ ಹೃತಿಕ್ ರೋಷನ್ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೆ ಬಿಡುಗಡೆಯಾದ ರೋಗ್ ಚಿತ್ರದಲ್ಲಿ ಅಭಿನಯಿಸಿದ್ದ ಆಂಜೆಲಾ ಕ್ರಿಸ್ಲಿಂಕಿ ಈ ಹಿಂದೆ ಹೃತಿಕ್ ರೋಷನ್ ಜೊತೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ರು. ಇತ್ತೀಚೆಗೆ ಪತ್ರಿಕೆಯೊಂದರ ಸಂದರ್ಶನದಲ್ಲಿ ಆಂಜೆಲಾ, ಹೃತಿಕ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ರು.

ಆಂಜೆಲಾ ಹೇಳಿದ ಮಾತುಗಳನ್ನ ಕೇಳಿದ್ರೆ ಆಕೆ ಹಾಗೂ ಹೃತಿಕ್ ನಡುವೆ ವಿಶೇಷ ಬಾಂಧವ್ಯವಿದೆ ಎಂಬಂತಿದ್ದು, ಆಕೆಯನ್ನು ಕೈಟ್ಸ್ ಚಿತ್ರದ ನಾಯಕಿ ಬಾರ್ಬಾರಾ ಮೋರಿಯೊಂದಿಗೆ ಹೋಲಿಸಿ ಲೇಖನ ಪ್ರಕಟವಾಗಿತ್ತು. ಈ ಹಿಂದೆ ಬಾರ್ಬಾರಾ ಹಾಗೂ ಹೃತಿಕ್ ಮಧ್ಯೆ ಕುಚ್‍ಕುಚ್ ಇದೆ ಎಂಬ ವಂದಂತಿಗಳು ಹರಿದಾಡಿತ್ತು.

ಇಂದು ಬೆಳಿಗ್ಗೆ ಪತ್ರಿಕೆ ಓದಿದ ಹೃತಿಕ್, ಅದರ ಸ್ಕ್ರೀನ್‍ಶಾಟ್ ತೆಗೆದು ಮೈ ಡಿಯರ್ ಲೇಡಿ, ಯಾರಮ್ಮಾ ನೀನು? ಯಾಕೆ ಸುಳ್ಳು ಹೇಳ್ತಿದ್ಯಾ ಅಂತ ಟ್ವೀಟ್ ಮಾಡಿದ್ದಾರೆ.

ಸಂದರ್ಶನದಲ್ಲಿ ಆಂಜೆಲಾ ಹೇಳಿದ್ದೇನು?: ಹೃತಿಕ್ ರೋಷನ್ ಜೊತೆ ಮೊದಲ ಬಾರಿಗೆ ಜಾಹಿರಾತೊಂದಕ್ಕಾಗಿ ಕೆಲಸ ಮಾಡುವಾಗ ನನಗೆ ಅವರ ಮೇಲೆ ಕ್ರಶ್ ಆಗಿತ್ತು. ಅವರು ಕೆಲಸದಲ್ಲಿ ನನಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ನಟನೆಯ ಬಗ್ಗೆ ಟಿಪ್ಸ್ ನೀಡುತ್ತಿದ್ದರು. ನಾನು ಹೃತಿಕ್ ಅವರಲ್ಲಿ ಒಬ್ಬ ಗುರು ಹಾಗೂ ಗೆಳೆಯನನ್ನು ಕಂಡುಕೊಂಡಿದ್ದೇನೆ ಅಂತ ಹೇಳಿದ್ದಾರೆ.

ಅವರು ನನ್ನನ್ನು ಮರೆತುಬಿಟ್ಟಿರ್ತಾರೆ ಅಂತ ಅಂದುಕೊಂಡಿದ್ದೆ. ಅವರೊಬ್ಬ ಸ್ಟಾರ್, ಸಾಕಷ್ಟು ಮಾಡೆಲ್‍ಗಳ ಜೊತೆ ಜಾಹಿರಾತು ಚಿತ್ರೀಕರಣ ಮಾಡಿರ್ತಾರೆ. ಆದ್ರೆ ಅವರು ನನಗೆ ಕರೆ ಮಾಡಿ ನಮ್ಮ ಎಲ್ಲಾ ಸಂಭಾಷಣೆಯನ್ನೂ ನೆನಪಿಸಿಕೊಂಡ್ರು. ನಮ್ಮ ತಂದೆ ಸ್ಪೇನ್‍ನ ವೆಲೆಂಸಿಯಾದವರು ಎಂಬುದನ್ನೂ ನೆನಪಿಟ್ಟಿದ್ದರು. ಅಲ್ಲದೆ ನನ್ನ ಕಣ್ಣಿನ ಬಣ್ಣ ಒರಿಜಿನಲ್ಲಾ? ಅಂತ ತಮಾಷೆ ಮಾಡಿದ್ರು. ನಾನು ದಕ್ಷಿಣದಲ್ಲಿ ಚಿತ್ರವೊಂದನ್ನು ಒಪ್ಪಿಕೊಂಡಾಗ ಅದರ ನಿರ್ದೇಶಕರ ಬಗ್ಗೆ ವಿಚಾರಿಸಿ ನಾನು ಈ ಸಿನಿಮಾದಿಂದ ದೊಡ್ಡ ಮಟ್ಟಕ್ಕೆ ಹೋಗ್ತೀನಿ ಎಂದಿದ್ದರು. ನಾನು ಅವರನ್ನು ಗುರುವಿನಂತೆ ನೋಡ್ತೀನಿ. ನನ್ನ ರೋಗ್ ಸಿನಿಮಾದ ಟ್ರೇಲರ್ ಮತ್ತು ಫಸ್ಟ್ ಲುಕ್ ಅವರಿಗೆ ತೋರಿಸಿದ್ದೆ. ಅವರು ಅದನ್ನು ತುಂಬಾ ಇಷ್ಟಪಟ್ಟಿದ್ದರು ಎಂದೆಲ್ಲಾ ಆಂಜೆಲಾ ಸಂದರ್ಶನದಲ್ಲಿ ಹೇಳಿದ್ದಾರೆ.

ಆಂಜೆಲಾ ಈವರೆಗೆ ದಕ್ಷಿಣದಲ್ಲಿ ಜ್ಯೋತಿ ಲಕ್ಷ್ಮೀ, ಸೈಜ್ ಝೀರೋ ಮತ್ತು ಕನ್ನಡದ ರೋಗ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Advertisement
Advertisement