ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಸಿನಿಮಾದ ಶೂಟಿಂಗ್ ಬೆಳಗಾವಿ ಸುತ್ತ ಮುತ್ತ ನಡೆಯುತ್ತಿದೆ. ಧನಂಜಯ್, ರಾಘು ಶಿವಮೊಗ್ಗ, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬೆಳಗಾವಿ ಪೊಲೀಸರಿಗೆ ಫಜೀತಿ ತಂದಿಡುವಂತಹ ಕೆಲಸ ನಡೆದಿದೆ. ಈ ಕುರಿತು ಸ್ವತಃ ಪೊಲೀಸ್ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Advertisement
ಈ ಕುರಿತು ಸಿಓಪಿ ಬೆಳಗಾವಿ ಹೆಸರಿನ ಟ್ವಿಟರ್ ಖಾತೆಯಲ್ಲಿ ಪೋಸ್ ವೊಂದನ್ನು ಮಾಡಲಾಗಿದ್ದು, ‘ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಹೊಯ್ಸಳ ಸಿನಿಮಾ ಚಿತ್ರೀಕರಣದ ವಿಡಿಯೋ ಕ್ಲಿಪ್ (ಪೊಲೀಸ್ ಅಧಿಕಾರಿ ಒಬ್ಬ ವ್ಯಕ್ತಿಯನ್ನು ಕೆಳಗೆ ತಳ್ಳಿ ಬೂಟುಗಾಲಿನಿಂದ ಒದೆಯುತ್ತಿರುವ ದೃಶ್ಯ) ವೈರಲ್ ಮಾಡಿ, ನೈಜ ಘಟನೆ ಎಂಬಂತೆ ಬಿಂಬಿಸಿ ಪೊಲೀಸ್ ಇಲಾಖೆಯ ಬಗ್ಗೆ ತಪ್ಪು ಸಂದೇಶ ರವಾನಿಸುತ್ತಿದ್ದು, ಕಾರಣ ಈ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳದಂತೆ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಸಾಮಾಜಿಕ ಜಾಳತಾಣದಲ್ಲಿ ಪೋಸ್ಟ್, ಕಾಮೆಂಟ್ಸ್ ಮಾಡದಂತೆ ಸಾರ್ವಜನಿಕರಿಗೆ ಈ ಮೂಲಕ ಕೋರಲಾಗಿದೆ’ ಎಂದು ಪತ್ರ ಕೂಡ ಹಾಕಲಾಗಿದೆ.
Advertisement
Advertisement
ಹೊಯ್ಸಳ ಸಿನಿಮಾ ಚಿತ್ರೀಕರಣ ಚೆನ್ನಮ್ಮನ ವೃತ್ತದಲ್ಲಿ ನಡೆದಾಗ, ಪೊಲೀಸ್ ಅಧಿಕಾರಿಯ ಪಾತ್ರಧಾರಿ, ಮತ್ತೋರ್ವ ಪಾತ್ರಧಾರಿಯನ್ನು ತಳ್ಳಿ ಬೂಟುಗಾಲಿನಿಂದ ಒದೆಯುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಚಿತ್ರೀಕರಣ ಸಂದರ್ಭದಲ್ಲಿ ಯಾರೋ ಈ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು, ಇದು ಬೆಳಗಾವಿ ಪೊಲೀಸರ ಕೃತ್ಯವೆಂದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆ ವಿಡಿಯೋ ವೈರಲ್ ಕೂಡ ಆಗಿದೆ. ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿಗೆ IFFI ವ್ಯಕ್ತಿತ್ವ ಪ್ರಶಸ್ತಿ ಗೌರವ
Advertisement
ವಿಡಿಯೋ ನೋಡಿದ ಪ್ರತಿಯೊಬ್ಬರೂ ಬೆಳಗಾವಿ ನಗರ ಪೊಲೀಸ್ ವಿರುದ್ಧ ಸಲ್ಲದ ಕಾಮೆಂಟ್ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ ತರುವಂತಹ ಚರ್ಚೆಗಳು ಕೂಡ ನಡೆಯುತ್ತಿತ್ತು. ಇದನ್ನು ಗಮನಿಸಿದ ಪೊಲೀಸ್ ಇಲಾಖೆ, ಕೂಡಲೇ ಸಾರ್ವಜನಿಕರ ಗಮನಕ್ಕೆ ಎಂದು ಪತ್ರವೊಂದನ್ನು ಪೋಸ್ಟ್ ಮಾಡಿ, ಸತ್ಯಾಂಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.