ಬೆಂಗಳೂರು: ಅಮ್ಮ ಅಕ್ಷರ ಆರ್ಟ್ಸ್ ಲಾಂಛನದಲ್ಲಿ ಸುಶೀಲ – ಡಾ. ರಮೇಶ್ ಚೌಧರಿ ನಿರ್ಮಿಸಿರುವ ‘ಹೌಲಾ ಹೌಲಾ’ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ.
ಈ ಚಿತ್ರದ ಕಥೆ – ಚಿತ್ರಕಥೆ-ಸಂಭಾಷಣೆ -ನಿರ್ದೇಶನ – ಎಸ್.ಪಿ. ಪಾಟೀಲ್. (ಕಲಬುರ್ಗಿ), ಛಾಯಾಗ್ರಹಣ – ಸುರೇಶ್ ವರ್ಮ, ಸಂಗೀತ – ಶ್ಯಾಂ ಡಿ, ಸಂಕಲನ – ಜ್ಞಾನೇಶ್ವರ್, ಸಾಹಿತ್ಯ – ಕವಿರಾಜ್, ಕಲೆ- ಇಸ್ಮಾಯಿಲ್, ನೃತ್ಯ – ಮನು, ಸಹ ನಿರ್ದೇಶಕ – ಕುಮಾರ್, ನಿರ್ವಹಣೆ – ಸತೀಶ್ ಕುಮಾರ್, ರಾಯಚೂರು, ಕಲಬುರ್ಗಿ, ಬೆಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ನಟ ಡಾ.ವಿಷ್ಣುವರ್ಧನ್ ಅಭಿಮಾನಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಕಥೆ ಇದು. ಡಾ. ವಿಷ್ಣುವಧನ್ ಅವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಚಿತ್ರವೊಂದರಲ್ಲಿ ತಿಳಿಸಿ, ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ದರು. ಈ ಚಿತ್ರದ ಸಂಬಂಧ ಕೂಡ ವಿದ್ಯಾರ್ಥಿಗಳಿಗೆ ಹಾಗೂ ತಂದೆ ತಾಯಿಗಳಿಗೆ ಅನ್ವಯವಾಗುತ್ತದೆ.
Advertisement
Advertisement
ತಾರಾಗಣದಲ್ಲಿ – ಆರತಿ ಕುಲಕರ್ಣಿ, ಶೋಭರಾಜ್, ಹನುಮಂತರಾಯ ಗೌಡ, ಅಮಿತ್, ವಿಜಯ್ ಚಂಡೂರ್, ಶಾಲಿನಿ, ಪೃಥ್ವಿ, ಮೇಘನ, ಮಂಜು, ಲಯೇಂದ್ರ, ದಿವ್ಯ, ರಿಷಿ, ಮುಂತಾದವರಿದ್ದಾರೆ. ಈ ಚಿತ್ರವು ಕನ್ನಡ ಚಿತ್ರ ಬಿಡುಗಡೆಯಾದ ನಂತರ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಇದೇ ಸಂಸ್ಥೆಯಿಂದ ತಯಾರಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.