ನವದೆಹಲಿ: ಹ್ಯೂಸ್ಟನ್ ನಗರದಲ್ಲಿ ಸೆ.22 ರಂದು ಭಾರತೀಯ ಸಮುದಾಯ ಆಯೋಜಿಸಿರುವ ‘ಹೌಡಿ ಮೋದಿ’ ಕಾರ್ಯಕ್ರಮ ಅಮೆರಿಕ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ.
ಹೌದು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಲಿದ್ದು, ಈ ಮೂಲಕ ಅಮೆರಿಕದ ಇತಿಹಾಸದಲ್ಲಿ ಎರಡು ದೇಶದ ನಾಯಕರು ಸಾರ್ವಜನಿಕವಾಗಿ ಮಾತನಾಡುವ ಅತಿ ದೊಡ್ಡ ಖಾಸಗಿ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
Advertisement
The special gesture of President @realDonaldTrump to join us in Houston highlights the strength of the relationship and recognition of the contribution of the Indian community to American society and economy. #HowdyModi
— Narendra Modi (@narendramodi) September 16, 2019
Advertisement
ಈ ಕಾರ್ಯಕ್ರಮಕ್ಕೆ ಟ್ರಂಪ್ ಆಗಮಿಸುತ್ತಾರೋ ಇಲ್ಲವೋ ಎನ್ನುವುದು ಖಚಿತವಾಗಿರಲಿಲ್ಲ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಟ್ರಂಪ್ ಆಗಮಿಸುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.
Advertisement
ವಿಶ್ವಸಂಸ್ಥೆಯ ಮಹಾಧಿವೇಶನ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಬಂಧ ಮೋದಿ ಅಮೆರಿಕಕ್ಕೆ ತೆರಳಲಿದ್ದು ಸೆ.27ರ ವರೆಗೆ ಪ್ರವಾಸದಲ್ಲಿ ಇರಲಿದ್ದಾರೆ. ‘ಹೌಡಿ ಮೋಡಿ’ ಕಾರ್ಯಕ್ರಮ ಆಯೋಜಕರು ಕೆಲ ದಿನಗಳಿಂದ ಈ ಕಾರ್ಯಕ್ರಮಕ್ಕೆ ಟ್ರಂಪ್ ಅತಿಥಿಯಾಗಿ ಆಗಮಿಸುತ್ತಾರೆ ಎಂದು ಹೇಳುತ್ತಾ ಬಂದಿದ್ದರೂ ಶ್ವೇತ ಭವನ ಖಚಿತ ಪಡಿಸಿರಲಿಲ್ಲ. ಭಾನುವಾರ ಶ್ವೇತ ಭವನ ಅಧಿಕೃತವಾಗಿ ಟ್ರಂಪ್ ಪಾಲ್ಗೊಳ್ಳುವ ಬಗ್ಗೆ ಖಚಿತಪಡಿಸಿದೆ.
Advertisement
A special gesture by @POTUS, signifying the special friendship between India and USA!
Delighted that President @realDonaldTrump will join the community programme in Houston on the 22nd.
Looking forward to joining the Indian origin community in welcoming him at the programme.
— Narendra Modi (@narendramodi) September 16, 2019
ಏನಿದು ಹೌಡಿ ಮೋಡಿ ಕಾರ್ಯಕ್ರಮ?
ನೈಋತ್ಯ ಅಮೆರಿಕದಲ್ಲಿ ‘ಹೌ ಡು ಯು ಡು'(ನೀವು ಹೇಗಿದ್ದೀರಿ) ಎಂದು ಕೇಳಲು ಸಂಕ್ಷಿಪ್ತವಾಗಿ ‘ಹೌಡಿ’ ಎಂದು ಕರೆಯುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಹ್ಯೂಸ್ಟನ್ ನಗರದಲ್ಲಿರುವ ಭಾರತೀಯರು ‘ಹೌಡಿ ಮೋದಿ’ ಹೆಸರನ್ನಿಟ್ಟಿದ್ದಾರೆ.
ಯಾವೆಲ್ಲ ದಾಖಲೆ ನಿರ್ಮಾಣವಾಗುತ್ತೆ?
ಎನ್ಆರ್ಜಿ ಫುಟ್ ಬಾಲ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಭಾರತೀಯ ಮೂಲದ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವುದರ ಜೊತೆ ಅಮೆರಿಕದ 60 ಸಂಸದರು ಭಾಗವಹಿಸುತ್ತಿದ್ದಾರೆ. ಈಗಾಗಲೇ ಎಲ್ಲ ಟಿಕೆಟ್ ಗಳು ಮಾರಾಟಗೊಂಡಿದೆ. ಅಮೆರಿಕದಲ್ಲಿ ಪೋಪ್ ಹೊರತು ಪಡಿಸಿ ಯಾವೊಬ್ಬ ವಿದೇಶಿ ಅತಿಥಿಯ ಕಾರ್ಯಕ್ರಮಕ್ಕೆ 50 ಸಾವಿರ ಮಂದಿ ಭಾಗವಹಿಸಿದ್ದ ಇತಿಹಾಸವಿಲ್ಲ. ಅಷ್ಟೇ ಅಲ್ಲದೇ ಒಂದು ದೇಶದ ನಾಯಕನೊಬ್ಬ ಅಮೆರಿಕದಲ್ಲಿ 50 ಸಾವಿರ ಮಂದಿಯನ್ನು ಉದ್ದೇಶಿಸಿ ಮಾತನಾಡಿಲ್ಲ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಮೆರಿಕ ನೆಲದಲ್ಲಿ ಮೋದಿ ದಾಖಲೆ ಬರೆಯಲಿದ್ದಾರೆ. ಪತಂಜಲಿ ಯೋಗಪೀಠ, ಅಕ್ಷಯ ಪಾತ್ರಾ ಫೌಂಡೇಶನ್, ಐಐಟಿ ಹಳೆ ವಿದ್ಯಾರ್ಥಿ ಸಂಘಟನೆ ಸೇರಿದಂತೆ ಸುಮಾರು 650 ಸಂಘ, ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.
ಭಾರತಕ್ಕೆ ಏನು ಲಾಭ?
ಜಮ್ಮು ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ನಮಗೆ ಸಹಾಯ ಮಾಡಿ ಪಾಕಿಸ್ತಾನ ಹಲವು ದೇಶಗಳಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಮೋದಿ ಕಾರ್ಯಕ್ರಮದಲ್ಲೇ ಟ್ರಂಪ್ ಭಾಗವಹಿಸುವ ಮೂಲಕ ಭಾರತದ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂಬ ಸಂದೇಶದ ರವಾನಿಸಿದಂತೆ ಆಗುತ್ತದೆ. ಇದರ ಜೊತೆಯಲ್ಲೇ ಅಮೆರಿಕ ಮತ್ತು ಚೀನಾದ ನಡುವೆ ವ್ಯಾಪಾರ ಸಮರ ಈಗ ತೀವ್ರಗೊಂಡಿದೆ. ಹೀಗಾಗಿ ಮೋದಿ ಟ್ರಂಪ್ ದ್ವಿಪಕ್ಷೀಯ ಮಾತುಕತೆಯ ವೇಳೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದರೆ ಭಾರತಕ್ಕೆ ನೆರವಾಗಲಿದೆ.
ಟ್ರಂಪ್ಗೆ ಏನು ಲಾಭ?
2020ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣಕ್ಕೆ ಇಳಿಯಲಿದ್ದಾರೆ. ಅಮೆರಿಕದ ಚುನಾವಣೆಯಲ್ಲಿ ಭಾರತೀಯರು ಪ್ರಧಾನ ಪಾತ್ರ ವಹಿಸಲಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾರತದ ಜೊತೆಗಿನ ನಮ್ಮ ಸಂಬಂಧ ನನ್ನ ಅವಧಿಯಲ್ಲಿ ಉತ್ತಮವಾಗಿದೆ ಎಂದು ಹೇಳಿ ಮತದಾರರನ್ನು ಸೆಳೆಯುವ ಸಾಧ್ಯತೆಯಿದೆ.
ಭಾಷಣ ಮೊದಲಲ್ಲ:
ಪ್ರಧಾನಿ ಮೋದಿ ಅವರು ಅಮೆರಿಕದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಇದು ಮೊದಲಲ್ಲ. 2014ರಲ್ಲಿ ಅಮೆರಿಕ ಭೇಟಿ ವೇಳೆ ನ್ಯೂಯಾರ್ಕಿನ ಮ್ಯಾಡಿಸನ್ ಸ್ಕ್ವಾರ್ ನಲ್ಲಿ 20 ಸಾವಿರ ಮಂದಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದರೆ 2015ರಲ್ಲಿ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ಕಾರ್ಯಕ್ರಮದಲ್ಲೂ ಸುಮಾರು 20 ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.