-ಹೊಸ ಭಾರತಕ್ಕಾಗಿ ಹಳೆಯ ಕೆಲವೊಂದಕ್ಕೆ ಬೀಳ್ಕೊಡುಗೆ
ಹ್ಯೂಸ್ಟನ್: ಅಮೆರಿಕಾದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನೀವು ದೇಶದಿಂದ ದೂರ ಇರಬಹುದು, ನಿಮ್ಮೊಂದಿಗೆ ದೇಶವಿದೆ ಎಂದು ಹೇಳುವ ಮೂಲಕ ನಿಮ್ಮೊಂದಿಗೆ ಭಾರತ ಸರ್ಕಾರವಿದೆ ಎಂದು ಭರವಸೆ ನೀಡಿದರು.
ಕೇವಲ ಐದು ವರ್ಷಗಳಲ್ಲಿ 2 ಲಕ್ಷ ಕಿ.ಮೀ. ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇಂದು ಭಾರತದ ಪ್ರತಿ ಕುಟುಂಬವೂ ಬ್ಯಾಂಕ್ ವ್ಯವಹಾರ ನಡೆಸುತ್ತಿದ್ದಾರೆ. ಇಂದು ಶೇ .95 ರಷ್ಟು ಮನೆಗಳಲ್ಲಿ ಅಡುಗೆ ಅನಿಲ ಇದೆ. ಏನು ಬದಲಾಗಲ್ಲ ಅನ್ನೋದನ್ನು ಮೊದಲ ಕಿತ್ತು ಹಾಕಬೇಕಿದೆ. ಸಾಮಾನ್ಯ ವ್ಯಕ್ತಿ ಉದ್ಯೋಗಿಯಾದಾಗ ಆತನ ಜೀವನಮಟ್ಟ ಸುಧಾರಣೆ ಆಗುತ್ತದೆ. ದೇಶದ ಪ್ರತಿಯೊಬ್ಬರ ಸಬಲೀಕರಣವಾದ್ರೆ ಆರ್ಥಿಕತೆ ವೃದ್ಧಿಸುತ್ತದೆ. ಭಾರತ ನೆಟ್‍ವರ್ಕ್ ಡೇಟಾ ಬಳಕೆಯಲ್ಲಿ ಮುಂದಿದೆ. ಇಂದು ಡಿಜಿಟಲ್ ಇಂಡಿಯಾದತ್ತ ಸಾಗುತ್ತಿದ್ದು ಕಡಿಮೆ ಬೆಲೆಯಲ್ಲಿ ಡೇಟಾ ನೀಡಲಾಗುತ್ತಿದೆ. ಇಂದು ಪಾಸ್‍ಪೋರ್ಟ್ ಒಂದು ವಾರದೊಳಗೆ ನಿಮ್ಮ ಮನೆಗೆ ಬರುತ್ತದೆ. ಮೊದಲಿಗೆ ವೀಸಾಗಾಗಿ ಕಷ್ಟಪಡುತ್ತಿದ್ದರು. ಇಂದು ಎಲ್ಲವನ್ನು ಸರಳೀಕರಣಗೊಳಿಸಲಾಗಿದೆ.
Advertisement
भारत अपने यहां जो कर रहा है, उससे कुछ ऐसे लोगों को भी दिक्कत हो रही है, जिनसे खुद अपना देश नहीं संभल रहा: पीएम @narendramodi #HowdyMody pic.twitter.com/245stHMzTz
— डीडी न्यूज़ (@DDNewsHindi) September 22, 2019
Advertisement
ಹೊಸ ಕಂಪನಿಗಳ ನೋಂದಣಿ ಇಂದು 24 ಗಂಟೆಯಲ್ಲಿ ಆಗುತ್ತಿದೆ. ಮೊದಲು ಟ್ಯಾಕ್ ರಿಫಂಡ್ ಗಾಗಿ ಎರಡ್ಮೂರು ತಿಂಗಳು ಬೇಕಾಗುತ್ತಿತ್ತು. ಒಂದು ದಿನದಲ್ಲಿಯೇ 50 ಲಕ್ಷ ಜನರು ಇನ್‍ಕಮ್ ಟ್ಯಾಕ್ಸ್ ರಿಟರ್ನ್ ತುಂಬಿದ್ದಾರೆ. ಇದೀಗ ಒಂದು ವಾರದಲ್ಲಿ ನೇರವಾಗಿ ಅವರವರ ಖಾತೆ ನೇರವಾಗಿ ಟಿಡಿಎಸ್ ಜಮೆ ಆಗುತ್ತಿದೆ. ಹೊಸ ಭಾರತದ ನಿರ್ಮಾಣಕ್ಕಾಗಿ ಕೆಲವು ವಿಷಯಗಳಿಗೆ ಬೀಳ್ಕೊಡುಗೆ ನೀಡಲಾಗಿದೆ. ಗಾಂಧಿ ಜಯಂತಿಯಂದು ಪ್ಲಾಸ್ಟಿಕ್ ನಿಷೇಧಿಸಲಾಗುತ್ತಿದೆ. ಹೊಸ ಭಾರತಕ್ಕಾಗಿ ಕೆಲವೊಂದಕ್ಕೆ ನಾವು ಬೀಳ್ಕೊಡಗೆ ನೀಡುತ್ತಿದ್ದೇವೆ. ಬಹು ಟ್ಯಾಕ್ಸ್ ಪದ್ಧತಿಗೆ ಅಂತ್ಯ ಹಾಡಿ ಜಿಎಸ್‍ಟಿ ಯನ್ನು ಜಾರಿಗೆ ತರಲಾಗಿದೆ. ಕೇವಲ ಕಾಗದ ಪತ್ರಗಳಲ್ಲಿದ್ದ ಹೆಸರುಗಳನ್ನು ತೆಗೆದು ಹಾಕುವ ಮೂಲಕ ಭಾರತದ ಅರ್ಥವ್ಯವಸ್ಥೆಯನ್ನು ಬಲಿಷ್ಠಗೊಳಿಸಲಾಗುತ್ತಿದೆ. ಈಗಾಗಲೇ ಭಾರತದಲ್ಲಿ 15 ಕಾನೂನಗಳನ್ನು ತೆಗೆದು ಹಾಕಲಾಗಿದೆ.
Advertisement
That’s a Texas-sized crowd!
Electric atmosphere at the NRG arena in Houston as 50,000 strong Indian Americans wait for the historic occasion when PM @narendramodi comes on stage together with US President @realDonaldTrump at #HowdyModi. pic.twitter.com/upJj4pHphr
— Arindam Bagchi (@MEAIndia) September 22, 2019
Advertisement
ಇಂದು ಅನುಚ್ಛೇಧ 370 ತೆಗೆದು ಹಾಕುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಜನತೆಗೆ ದೇಶದಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆರ್ಟಿಕಲ್ 370 ರದ್ದತಿಗೆ ಬಹುಮತ ಸಿಕ್ಕಿದೆ. ಭಾರತದ ಎಲ್ಲ ಸಂಸದರಿಗೆ ನೀವು ಎದ್ದು ನಿಂತು ಚಪ್ಪಾಳೆ ತಟ್ಟಬೇಕಿದೆ. ಭಾರತದ ಕಠಿಣ ನಿರ್ಧಾರಗಳಿಂದ ಕೆಲವರಿಗೆ ತೊಂದರೆಯಾಗುತ್ತಿದೆ. ತಮ್ಮ ದೇಶವನ್ನು ಹಿಡಿತದಲ್ಲಿಟ್ಟುಕೊಳ್ಳದೇ ಇರುವವರಿಗೆ ಕಷ್ಟವಾಗಿದೆ ಎಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು.
ಕೆಲವರು ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ದೇಶದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದು ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ. ಅಮೆರಿಕದಲ್ಲಿ 9/11 ಮತ್ತು ಭಾರತದಲ್ಲಿ 26/11 ದಾಳಿಗಳಿಗೆ ಇಂದು ಉತ್ತರ ನೀಡುವ ಸಮಯ ಬಂದಿದೆ. ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವವರ ವಿರುದ್ಧ ನಾವು ನಿಂತಿದ್ದೇವೆ. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಡೊನಾಲ್ಡ್ ಟ್ರಂಪ್ ಸಹ ಮುಂದಾಗಿದ್ದು, ಹಾಗಾಗಿ ನೀವೆಲ್ಲರೂ ಭಾರತದ ಪರವಾಗಿ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ತಿಳಿಸಬೇಕು.
इस लड़ाई में प्रेसिडेंट ट्रंप पूरी मजबूती के साथ आतंक के खिलाफ खड़े हुए हैं, हम सब मिलकर राष्ट्रपति @realDonaldTrump को स्टैंडिंग ओवेशन देंगे: पीएम @narendramodi #HowdyMody pic.twitter.com/OKSQFqXmTX
— डीडी न्यूज़ (@DDNewsHindi) September 22, 2019
ಹೊಸ ಭಾರತಕ್ಕಾಗಿ ನಾವು ಇಂದು ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಶೇ.100 ರಷ್ಟು ಎಫ್‍ಡಿಐ ಸಾಧ್ಯತೆಗಳಿವೆ. ಇದೇ ವೇಳೆ ಕವಿತೆ ಓದುವ ಮೂಲಕ ಮೋದಿಯವರು ತಮ್ಮ ಗುರಿಯನ್ನು ತಿಳಿಸಿದರು. ಯಾವ ಕಷ್ಟವು ಆಕಾಶಲ್ಲಿದೆಯೋ, ಅದನ್ನೇ ಪಡೆದುಕೊಳ್ಳುವ ಆಸೆ ನನ್ನಲಿದೆ. ಭಾರತ ಕಷ್ಟಗಳನ್ನು ಸೈಡಿನಲ್ಲಿಡುತ್ತಿಲ್ಲ. ಬದಲಾಗಿ ಕಷ್ಟಗಳನ್ನು ಎದುರಿಸಿ ಜಯಶಾಲಿ ಆಗುವತ್ತ ಸಾಗುತ್ತಿದ್ದೇವೆ. ಭಾರತ ತನ್ನ ಸಮಸ್ಯೆಗಳಿಗೆ ಪೂರ್ಣ ಪರಿಹಾರ ಕಂಡುಕೊಳ್ಳುವತ್ತ ನಿರತವಾಗಿದೆ ಎಂದರು.
ಮುಂದಿನ ಎರಡ್ಮೂರು ದಿನಗಳಲ್ಲಿ ಟ್ರಂಪ್ ಜೊತೆ ಮಾತುಕತೆ ನಡೆಯಲಿದ್ದು, ಫಲಿತಾಂಶ ಸಕರಾತ್ಮಕವಾಗಿರಲಿದೆ. ಇಂದು ನೀವೆಲ್ಲರು ದೇಶದಿಂದ ದೂರ ಇರಬಹದು, ಆದರೆ ದೇಶ ನಿಮ್ಮಿಂದ ದೂರವಿಲ್ಲ. ಟ್ರಂಪ್ ನನ್ನನ್ನು ಕಠಿಣ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ ಎಂದು ಹೇಳುತ್ತಾರೆ. ಆದ್ರೆ ಟ್ರಂಪ್ ವ್ಯವಹಾರ ಕಲೆಯನ್ನು ಬಲ್ಲವರಾಗಿದ್ದಾರೆ ಎಂದು ತಮ್ಮ ಮಾತನ್ನು ಮುಗಿಸಿದರು.
अमेरिका के ह्यूस्टन में आयोजित #HowdyMody कार्यक्रम में भारतीय समुदाय को संबोधित करने के बाद लोगों का अभिवादन करते पीएम @narendramodi और अमेरिकी राष्ट्रपति @realDonaldTrump pic.twitter.com/qWU7M2tX5R
— डीडी न्यूज़ (@DDNewsHindi) September 22, 2019
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತು ಮುಗಿಸುತ್ತಿದ್ದಂತೆ ಟ್ರಂಪ್ ಸೇರಿದಂತೆ ಎಲ್ಲ ಅಧಿಕಾರಿಗಳು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು. ವೇದಿಕೆಯಿಂದ ಕೆಳಗೆ ಮೋದಿಯರು ಟ್ರಂಪ್ ಕೈ ಹಿಡಿದುಕೊಂದೇ ಕಾರ್ಯಕ್ರಮದಿಂದ ನಿರ್ಗಮಿಸಿದರು.