ಡಿಸ್ಪುರ್: ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಬ್ ಅಲ್ಲ. ಹಿಜಬ್ ಧರಿಸಿದರೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಯೇ, ಇಲ್ಲವೇ ಎಂದು ಶಿಕ್ಷಕರಿಗೆ ಹೇಗೆ ತಿಳಿಯುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಉತ್ತರಾಖಂಡದ ಕಿಚ್ಚಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಘಟನೆಯೊಂದಿಗೆ ದೇಶವು ಹೋರಾಡುತ್ತಿದೆ. ಹಿಜಬ್ ಧರಿಸಿದ್ದರೆ, ವಿದ್ಯಾರ್ಥಿ ಕಲಿಯುತ್ತಿದ್ದಾನೋ ಇಲ್ಲವೋ ಎಂದು ಶಿಕ್ಷಕರಿಗೆ ಹೇಗೆ ತಿಳಿಯುತ್ತದೆ?. ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಬ್ ಅಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?
Advertisement
Congress has entered politics of polarisation. Sometimes I feel that Jinnah’s soul has entered into Congress.They say it’s right to open madrasas, opening Muslim universities is right, they also say it’s right to wear hijab: Assam CM HB Sarma in Kichha #UttarakhandElections2022 pic.twitter.com/P3kWfU8U94
— ANI UP/Uttarakhand (@ANINewsUP) February 11, 2022
Advertisement
ಕಾಂಗ್ರೆಸ್ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ರೀತಿ ಕಳವಳಕಾರಿಯಾಗಿದೆ. ಇದು ತುಕ್ಡೆ ತುಕ್ಡೆ ಗ್ಯಾಂಗ್‍ನ್ನು ಪ್ರತಿನಿಧಿಸುತ್ತದೆ. 1947ರ ಹಿಂದಿನ ಪರಿಸ್ಥಿತಿಯನ್ನು ಪುನರಾವರ್ತಿಸುವುದು ಅವರಿಗೆ ಒಂದೇ ಗುರಿಯಾಗಿದೆ. ಕೆಲವೊಮ್ಮೆ ಅವರು ಭಾರತವು ಒಂದು ರಾಷ್ಟ್ರವಲ್ಲ ಆದರೆ ರಾಜ್ಯಗಳ ಒಕ್ಕೂಟ ಎಂದು ಹೇಳುತ್ತಾರೆ. ಇದನ್ನೆಲ್ಲಾ ಕೇಳಿದಾಗ ಜಿನ್ನಾ ಆತ್ಮ ಕಾಂಗ್ರೆಸ್ಸಿಗೆ ಪ್ರವೇಶಿಸಿದೆಯೇ ಎಂಬ ಭಾವನೆ ಮೂಡುತ್ತದೆ. ಅವರ ರಾಜಕಾರಣ ಕೊನೆಗೊಳ್ಳುವುದೇ ಸರಿ. ಐದು ರಾಜ್ಯಗಳ ಚುನಾವಣೆಯ ನಂತರ ಇದು ದೊಡ್ಡ ಪ್ರಮಾಣದಲ್ಲಿ ಕೊನೆಗೊಳ್ಳುತ್ತದೆ ಎಂದು ಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ನಿಷೇಧಕ್ಕೆ ತಡೆ ಕೋರಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್