ಬೆಂಗಳೂರು: ಓಲಾ (Ola) , ಉಬರ್ (Uber), ರ‍್ಯಾಪಿಡೋ ಆಪ್ ಆಧಾರಿತ ಆಟೋಗಳ ಸುಲಿಗೆಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯಿಂದ ಎರಡು ವಾಟ್ಸ್‌ಪ್ ನಂಬರ್‌ಗಳು ಈಗಾಗಲೇ ಬಿಡುಗಡೆಯಾಗಿದೆ. ಇಲಾಖೆ ಸಾರ್ವಜನಿಕರಿಗೆ ಸಹಾಯವಾಣಿ ನಂಬರ್ ನೀಡಿದ್ದು, ಆ ಮೂಲಕ ದೂರು ಸ್ವೀಕರಿಸಲಿದೆ. ಜೊತೆಗೆ ನಿಯಮ ಮೀರಿ ಓಲಾ, ಉಬರ್ ಕಾರ್ಯನಿರ್ವಹಿಸಿದರೆ, ಇಲಾಖೆ ದಂಡ ಪ್ರಯೋಗ ಮಾಡಲಿದೆ. ಅದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಓಲಾ, ಉಬರ್, ರ‍್ಯಾಪಿಡೋ ಆಟೋಗಳು ಒಂದೊಮ್ಮೆ ನಿಯಮ ಮೀರಿ ಚಾಲಕರು ಆಪ್ ಆನ್ ಮಾಡಿ ಸೇವೆ ನೀಡಿದರೆ, 5 ಸಾವಿರ ದಂಡವನ್ನು (Fine) ಕಂಪನಿ ಕಟ್ಟಬೇಕಾಗಲಿದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಇನ್ನೂ ಸಾರಿಗೆ ಇಲಾಖೆ ಕೂಡ ಫೀಲ್ಡ್‌ಗೆ ಇಳಿಯಲಿದೆ. ಅಗ್ರಿಗೇಟರ್ ಲೈಸೆನ್ಸ್ ಪಡೆಯುವವರೆಗೂ ಓಲಾ, ಉಬರ್ ಅಡಿ ತ್ರಿಚಕ್ರ ವಾಹನಗಳು ಓಡಾಡುವಂತಿಲ್ಲ. ನಿಯಮ ಉಲ್ಲಂಘನೆ ಮಾಡಿದರೆ ಅಂತಹ ಆಟೋಗಳನ್ನ (Auto) ಪತ್ತೆ ಹಚ್ಚಿ 5 ಸಾವಿರ ದಂಡ ವಿಧಿಸಲಿದೆ.
Advertisement
Advertisement
ಓಲಾ, ಉಬರ್ ಆಟೋ ಓಡಿಸಿದರೆ ಸಾರ್ವಜನಿಕರು ಕೂಡ ನೇರವಾಗಿ ದೂರು ನೀಡಬಹುದಾಗಿದೆ. ಅಥವಾ ಸಾರಿಗೆ ಇಲಾಖೆಯಿಂದ ನೀಡಿರುವ ಸಹಾಯವಾಣಿ 9449863426 ನಂಬರ್‍ಗೆ ಪ್ರಯಾಣಿಕರೂ ಕೂಡ ದೂರು ನೀಡಬಹುದು. ಇದಕ್ಕಾಗಿ ಈಗಾಗಲೇ ಸಾರಿಗೆ ಇಲಾಖೆ ಸಹ ಹೆಲ್ಪ್‍ಲೈನ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಕೂಡ ದೂರು ಸಲ್ಲಿಸಲು ಅವಕಾಶ ನೀಡಿದೆ. ಇನ್ನೂ ಸಾರಿಗೆ ಇಲಾಖೆಯ ನಿರ್ಧಾರವನ್ನು ಆಟೋ ಚಾಲಕರು ಸ್ವಾಗತಿಸಿದ್ದಾರೆ. ನಮ್ಮ ಆಟೋಗಳನ್ನ ಬೇಕಾದ್ರೆ ಪರಿಶೀಲನೆ ಮಾಡಲಿ, ಸರ್ಕಾರದ ಆದೇಶದಂತೆ ಆಪ್ ಬಳಸಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ವಾರಾಂತ್ಯದಲ್ಲಿ ದೆಹಲಿಗೆ ಸಿಎಂ ಭೇಟಿ
Advertisement
Advertisement
ಸಾರಿಗೆ ಇಲಾಖೆಯ ನಿರ್ಧಾರವನ್ನು ಆಟೋ ಚಾಲಕರು ಸ್ವಾಗತಿಸಿದ್ದಾರೆ. ನಮ್ಮ ಆಟೋಗಳನ್ನು ಬೇಕಾದರೆ ಪರಿಶೀಲನೆ ಮಾಡಲಿ, ಸರ್ಕಾರದ ಆದೇಶದಂತೆ ಆಪ್ ಬಳಸಲ್ಲ ಎಂದಿದ್ದಾರೆ. ಆದರೂ ಇನ್ನೂ ಲೈಸನ್ಸ್ ಇಲ್ಲದಿದ್ರೂ ಓಲಾ, ಉಬರ್ ಸೇವೆ ನಗರದಲ್ಲಿ ಮುಂದುವರಿದಿದೆ. ಗ್ರಾಹಕರಿಗೆ ಆಪ್‍ಗಳಲ್ಲಿ ತಪ್ಪು ಮಾಹಿತಿ ನೀಡಿ, ಸುಲಿಗೆ ಮಾಡ್ತಿದೆ. ದೂರದ ಪ್ರಯಾಣವನ್ನ ಕಡಿಮೆ ಕಿಲೋ ಮೀಟರ್ ಅಂತರ ತೋರಿಸಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿರುವುದು ದುರಂತವಾಗಿದೆ. ಇದನ್ನೂ ಓದಿ: ಬೆಂಗ್ಳೂರಿನ ಹಾಟ್‌ಸ್ಪಾಟ್‌ನಲ್ಲಿ ಪ್ರಿಪೇಯ್ಡ್ ಕೌಂಟರ್ – ಆಟೋ ಚಾಲಕರ ಮಾಸ್ಟರ್ ಪ್ಲ್ಯಾನ್