ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಸಿಎಂ ಆದ 24 ಗಂಟೆಗಳಲ್ಲಿ ನಾಡಿನ ರೈತರ ಸಾಲಮನ್ನಾ ಮಾಡ್ತೀನಿ ಅಂತಾ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದು, ಇದೀಗ ಬಿಜೆಪಿ ಸಾಲಮನ್ನಾ ಮಾಡುವಂತೆ ಸಿಎಂ ಕುಮಾರಸ್ವಾಮಿ ಮೇಲೆ ಒತ್ತಡ ಹಾಕುತ್ತಿದೆ.
ನಾನು ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ. ಆದ್ರೆ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದ್ದರಿಂದ ಎಲ್ಲರ ವಿಶ್ವಾಸ ಪಡೆದುಕೊಂಡು ಸಾಲಮನ್ನಾ ಮಾಡಲು ಅವಕಾಶ ಬೇಕೆಂದು ನಾಡಿನ ರೈತರಲ್ಲಿ ಮುಖ್ಯಮಂತ್ರಿ ಹೇಳಿಕೊಂಡಿದ್ರು. ಆದ್ರೆ ಇಂದು ಸಿಎಂ ಇದೇ ವಿಷಯವಾಗಿ ಸಭೆ ಕರೆದಿದ್ದು, ಯಾವ ನಿರ್ಧಾರ ಕೈಗೊಳ್ಳತ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಹುಟ್ಟುಹಾಕಿದೆ. ಇದನ್ನೂ ಓದಿ: ರೈತರ ಸಂಪೂರ್ಣ ಸಾಲಮನ್ನಾ: 150 ರೈತರು, ರಾಜಕೀಯ ನಾಯಕರೊಂದಿಗೆ ಸಿಎಂ ಸಭೆ -ಸಾಲಮನ್ನಾ ವಿಚಾರದಲ್ಲಿ ಉಳಿದ ರಾಜ್ಯಗಳು ಏನು ಮಾಡಿವೆ..?-ಕರ್ನಾಟಕದ ಸ್ಥಿತಿ ಏನು?
Advertisement
ರೈತರ ಸಾಲಮನ್ನಾಕ್ಕೆ ಸಿಎಂ ಸೂತ್ರ ಏನು..?
ರಾಷ್ಟ್ರೀಕೃತ ಬ್ಯಾಂಕ್ಗಳ ಜೊತೆ ಸಮಾಲೋಚನೆ ನಡೆಸಿ ರೈತರ ಸಾಲಗಳನ್ನ ಸರ್ಕಾರ ವಹಿಸಿಕೊಳ್ಳುವ ಬಗ್ಗೆ ಪ್ರಸ್ತಾಪ ಮಾಡೋದು. ಬ್ಯಾಂಕ್ಗಳನ್ನು ಒಪ್ಪಿಸಿ ರೈತರ ಸಾಲಗಳನ್ನ ಸರ್ಕಾರವೇ ವಹಿಸಿಕೊಳ್ಳೊದು. ಒಂದು ವೇಳೆ ಬ್ಯಾಂಕ್ಗಳು ಒಪ್ಪಿದ್ರೆ 4 ಕಂತುಗಳಲ್ಲಿ ಸರ್ಕಾರವೇ ಸಾಲ ಭರಿಸೋದು. ಈ ಮೂಲಕ ಕೃಷಿ ಸಾಲದಿಂದ ಎಲ್ಲಾ ರೈತರನ್ನ ಮುಕ್ತಿಗೊಳಿಸೋದು.
Advertisement
ಸಹಕಾರಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ಗಳ ಸಾಲಗಳ ಬಗ್ಗೆ ಪ್ರತ್ಯೇಕ ನಿರ್ಧಾರ ತೆಗೆದುಕೊಂಡು ಸಂಪನ್ಮೂಲ ಹೊಂದಿಸಿಕೊಳ್ಳುವ ಹಾಗೂ ಕಾರ್ಯಸೂಚಿ ರೂಪಿಸುವ ಬಗ್ಗೆ ಚಿಂತನೆ ನಡೆಸುವುದು. ಜಿಎಸ್ಟಿಯಿಂದ ಬರುವ ಹೆಚ್ಚುವರಿ ಆದಾಯವನ್ನ ತೋರಿಸಿ ಕೇಂದ್ರದಿಂದ ಸಾಲ ತರುವ ಪ್ಲಾನ್ ಮಾಡೋದು. ರಾಜ್ಯ ಸರ್ಕಾರ ಕೆಲ ಯೋಜನೆಗಳಿಗೆ ಅನುದಾನ ಕಡಿತಗೊಳಿಸುವ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಬ್ಯಾಲೆನ್ಸ್ ಮಾಡುವುದು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಪರಿಸ್ಥಿತಿ ಅನುಗುಣವಾಗಿ ರೈತರ ಕೃಷಿ ಸಾಲಮನ್ನಾ ನಿರ್ವಹಣೆಗೆ ಮಾರ್ಗಸೂಚಿ ರೂಪಿಸುವುದು.