ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಯನ್ನು ಮೊದಲ ಬಾರಿಗೆ ಪ್ರದಾನ ಮಾಡಿದ್ದು 1992ರಲ್ಲಿ. ದೇಶದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ವಾದರೆ, ಕರ್ನಾಟಕದಲ್ಲೂ ಅಂಥದ್ದೊಂದು ಗೌರವವನ್ನು ಸಲ್ಲಿಸಬೇಕು ಎನ್ನುವ ಕಾರಣಕ್ಕಾಗಿ ಹುಟ್ಟಿಕೊಂಡಿದ್ದು ‘ಕರ್ನಾಟಕ ರತ್ನ’. ಈ ಪ್ರಶಸ್ತಿಯನ್ನು ಶುರು ಮಾಡಿದ್ದು ಆಗಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ (S. Bangarappa). ಇಂಥದ್ದೊಂದು ಪ್ರಶಸ್ತಿಯನ್ನು ಶುರು ಮಾಡಿದಾಗ ಮೊದಲ ಬಾರಿಗೆ ಅದನ್ನು ಡಾ.ರಾಜ್ ಕುಮಾರ್ ಅವರಿಗೆ ನೀಡಬೇಕು ಎಂದು ನಿರ್ಧರಿಸಲಾಯಿತು.
Advertisement
ಸಿನಿಮಾ ರಂಗದ ಸಾಧನೆಗಾಗಿ ಡಾ.ರಾಜ್ ಕುಮಾರ್ (Raj Kumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಸರಕಾರ ನಿರ್ಧರಿಸಿದಾಗ ಡಾ.ರಾಜ್ ಅದನ್ನು ಮೊದಲು ನಿರಾಕರಿಸುತ್ತಾರೆ. ತಮಗಿಂತಲೂ ಅರ್ಹರಾಗಿರುವ ಶ್ರೇಷ್ಠರು ನಾಡಿನಲ್ಲಿ ಇದ್ದಾರೆ. ಅವರಿಗೆ ಆ ಗೌರವವನ್ನು ಕೊಡಿ ಎಂದು ನಯವಾಗಿಯೇ ನಿರಾಕರಿಸುತ್ತಾರೆ. ಆದರೆ, ಸಾಂಸ್ಕೃತಿಕ ವಲಯವು ಡಾ.ರಾಜ್ ಕುಮಾರ್ ಹೇಳುವುದು ಸರಿಯಿದೆ. ಆದರೂ, ಅವರೂ ಕೂಡ ಅರ್ಹ ವ್ಯಕ್ತಿ. ಹಾಗಾಗಿ ಡಾ.ರಾಜ್ ಗೆ ಪ್ರಶಸ್ತಿ ನೀಡಿದರೆ ಯಾವುದೇ ತಪ್ಪಿಲ್ಲ ಎಂದು ಚರ್ಚೆಯಾಗುತ್ತದೆ. ಇದನ್ನೂ ಓದಿ:ದಆಮೀರ್ ಖಾನ್ ತಾಯಿಗೆ ಹೃದಯಾಘಾತ
Advertisement
Advertisement
ಡಾ.ರಾಜ್ ಕುಮಾರ್ ಕೊನೆಗೆ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಕೊಳ್ಳುತ್ತಾರೆ. ಆದರೆ, ಒಂದು ಷರತ್ತನ್ನೂ ಅವರು ವಿಧಿಸುತ್ತಾರೆ. ರಾಷ್ಟ್ರಕವಿ ಕುವೆಂಪು ಅವರಿಗೆ ಈ ಪ್ರಶಸ್ತಿಯನ್ನು ಮೊದಲು ಕೊಡಿ, ಆನಂತರ ನಾನು ಸ್ವೀಕರಿಸುತ್ತೇನೆ ಎನ್ನುತ್ತಾರೆ. ಆಗ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ತಂಡವು ಡಾ.ರಾಜ್ ಮತ್ತು ಕುವೆಂಪು ಇಬ್ಬರಿಗೂ ಈ ಪ್ರಶಸ್ತಿಯನ್ನು ಘೋಷಣೆ ಮಾಡುತ್ತದೆ.
Advertisement
ಇಂದು ಡಾ.ರಾಜ್ ಪುತ್ರ ಪುನೀತ್ ರಾಜ್ ಕುಮಾರ್ ಅವರಿಗೆ ಯಾವ ಜಾಗದಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೋ, ಅದೇ ಜಾಗದಲ್ಲೇ ಡಾ.ರಾಜ್ ಕುಮಾರ್ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಗಿನ ರಾಜ್ಯಪಾಲರಾದ ಖುರ್ಷಿದ್ ಅಲಂ ಖಾನ್ (Khurshid Alam Khan) ಅವರು ಈ ಪ್ರಶಸ್ತಿಯನ್ನು ಡಾ.ರಾಜ್ ಗೆ ಪ್ರದಾನ ಮಾಡುತ್ತಾರೆ. ಮುಖ್ಯಮಂತ್ರಿಯಾಗಿದ ಎಸ್.ಬಂಗಾರಪ್ಪ, ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ (S.M Krishna) ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಇದೇ ವೇದಿಕೆಯ ಮೇಲೆಯೇ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪನವರು, ಡಾ.ರಾಜ್ ಕುಮಾರ್ ಅಭಿನಯದ ಅದ್ಭುತ ಗೀತೆ ‘ಯಾರೇ ಕೂಗಾಡಲಿ, ಊರೇ ಹೋರಾಡಲಿ.. ಎಮ್ಮೆ ನಿನಗೆ ಸಾಟಿಯಿಲ್ಲ’ ಎನ್ನುವ ಗೀತೆಯನ್ನು ಹಾಡಿ ರಂಜಿಸುತ್ತಾರೆ. ಈ ಹಾಡು ಅಂದು ನಾನಾ ರೀತಿಯ ಅರ್ಥಗಳನ್ನು ನೀಡಿತ್ತು ಎಂದು ಈಗಲೂ ವಿಶ್ಲೇಷಿಸಲಾಗುತ್ತಿದೆ.