ನವದೆಹಲಿ: ಏಕಾಏಕಿ ಗ್ಯಾಸ್ ಸಿಲಿಂಡರಿಗೆ ಬೆಂಕಿ ಹೊತ್ತಿಕೊಂಡ್ರೆ ಮನೆ ಮಂದಿ ಗಾಬರಿಯಾಗಿ ದಿಕ್ಕುಪಾಲಾಗುವುದು ಸಹಜ. ಆದ್ರೆ ದೆಹಲಿಯ ಪೊಲೀಸರೊಬ್ಬರು ಬೆಂಕಿ ನಂದಿಸಲು ಸುಲಭವಾದ ಉಪಾಯವನ್ನು ಹೇಳಿಕೊಟ್ಟಿದ್ದಾರೆ. ಅವರು ಹೇಳಿಕೊಟ್ಟ ಐಡಿಯಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ಏನಿದು ಹೊಸ ಐಡಿಯಾ: ದೆಹಲಿಯ ಕಾಲೊನಿಯೊಂದರಲ್ಲಿ ನೆರೆದ ಜನರ ಗುಂಪಿನ ಮಧ್ಯೆ ಸಿಲಿಂಡರ್‍ನ ಇಟ್ಟು ಅದರಿಂದ ಗ್ಯಾಸ್ ಲೀಕ್ ಆಗುವಂತೆ ಮಾಡಿದ್ರು. ಈ ವೇಳೆ ಮತ್ತೊಬ್ಬ ಪೊಲೀಸ್ ಅದಕ್ಕೆ ಬೆಂಕಿ ಕೊಟ್ಟಿದ್ದಾರೆ. ಕೂಡಲೇ ಗ್ಯಾಸ್ ಸಿಲಿಂಡರ್ ಉರಿಯಲು ಪ್ರಾರಂಭವಾಯಿತು. ತಕ್ಷಣವೇ ಪೊಲೀಸ್ ಅದರ ಮೇಲೆ ಒದ್ದೆ ಬಟ್ಟೆ ಹಾಕಿ ಗಟ್ಟಿಯಾಗಿ ಮುಚ್ಚಿದ್ದಾರೆ. ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿ ನಂದಿ ಹೋಗಿದೆ. ನಂತ್ರ ಬಟ್ಟೆಯನ್ನು ತೆಗೆದು ಗ್ಯಾಸ್ ಆಫ್ ಮಾಡಿದ್ದಾರೆ.
Advertisement
ಈ ವೀಡಿಯೋವನ್ನು ಪೊಲೀಸ್ ಸುಶೀಲ್ ಕುಮಾರ್ ತಮ್ಮ ಫೇಸ್ಬುಕ್ ವಾಲ್‍ನಲ್ಲಿ ಮಾರ್ಚ್ 19ರಂದು ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋವನ್ನು 60 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲದೇ 2 ಲಕ್ಷಕ್ಕೂ ಅಧಿಕ ಶೇರ್ ಆಗಿದೆ.
Advertisement
ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಪೊಲೀಸ್‍ನ ಈ ಕಾರ್ಯಕ್ಕೆ ಹಲವು ಮಂದಿ ಭೇಷ್ ಅಂದಿದ್ದಾರೆ. `ನಿಮ್ಮ ಈ ಹೊಸ ಪ್ರಯೋಗ ಚಿಂತನಾತ್ಮಕವಾದುದು. ಇದೊಂದು ಸಾವು-ಬದುಕಿನ ವಿಚಾರವಾಗಿದ್ದು, ಎಲ್ಲರೂ ತಿಳಿದುಕೊಳ್ಳಲೇ ಬೇಕು ಅಂತಾ ಕಮೆಂಟ್ ಮೂಲಕ ಪೊಲೀಸ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.