ಲಾಕ್‍ಡೌನ್ ಆಗಿದ್ದರಿಂದ ಊರಿಗೆ ತೆರಳದೇ ರೂಮಿನಲ್ಲಿ ಉಳಿದುಕೊಂಡಿರುವ ಬಹುತೇಕ ಯುವಕರಿಗೆ ಊಟದ್ದೇ ದೊಡ್ಡ ಚಿಂತೆ. ಇನ್ನು ಹೋಟೆಲ್ ಗಳ ಮೇಲೆ ಅವಲಂಬಿತರಾದವರು ಪ್ರತಿದಿನ ಏನು ಮಾಡಿಕೊಳ್ಳೋದು ಅನ್ನೋ ಚಿಂತೆಯಲ್ಲಿಯೇ ಅರ್ಧ ದಿನ ಕಳೆದು ಬಿಡ್ತಾರೆ. ಕೆಲವೇ ತರಕಾರಿ ಬಳಸಿ, ಕಡಿಮೆ ಸಮಯದಲ್ಲಿ ರಸಂ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು
ಟೊಮೆಟೋ- 2
ಹುಣಸೆ ಹಣ್ಣು- ಸ್ವಲ್ಪ
ಹಸಿ ಮೆಣಸಿನಕಾಯಿ- 5 ರಿಂದ 6
ಬೆಳ್ಳುಳ್ಳಿ- 5 ರಿಂದ 6 ಎಸಳು
ಕೋತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ-ಒಗ್ಗರಣೆಗೆ
Advertisement
Advertisement
ಮಾಡುವ ವಿಧಾನ
* ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನಷ್ಟು ನೀರು ಹಾಕಿಕೊಂಡು ಅದರಲ್ಲಿ ಹುಣಸೆ ಹಣ್ಣನ್ನು ನೆನಸಿಟ್ಟುಕೊಳ್ಳಿ.
* ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಸೇರಿಸಿ ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.
* ಈಗ ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟುಕೊಂಡು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ಮಿಕ್ಸಿ ಹಾಕಿಕೊಂಡಿದ್ದ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ಈಗ ಹುಣಸೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
* ರುಚಿಗೆ ತಕ್ಕಷ್ಟು ಮತ್ತು ಕತ್ತರಿಸಿದ ಟೊಮೆಟೋ ಪೀಸ್ ಗಳನ್ನು ಮಿಕ್ಸ್ ಮಾಡಿ 5 ರಿಂದ 6 ನಿಮಿಷ ಕುದಿಸಿಕೊಳ್ಳಿ. ಕೊನೆಗೆ ಸಣ್ಣದಾಗಿ ಕೋತಂಬರಿ ಸೇರಿಸಿದ್ರೆ ರಸಂ ಸವಿಯಲು ಸಿದ್ಧ.