ಪವಿತ್ರ ರಂಜಾನ್ ತಿಂಗಳು ನಡೆಯುತ್ತಿರುವುದರಿಂದ, ಭಕ್ತರು ಇಡೀ ದಿನ ಉಪವಾಸ ಮಾಡುತ್ತಾರೆ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಏನನ್ನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಇಫ್ತಾರ್ ಆಚರಣೆಯ ಭಾಗವಾಗಿ ಉಪವಾಸವನ್ನು ಆಚರಿಸುವವರು ಸೂರ್ಯಾಸ್ತದ ನಂತರ ಉಪವಾಸವನ್ನು ಕೊನೆ ಮಾಡುತ್ತಾರೆ.
ದೀರ್ಘ ಬಿಸಿಲಿನ ನಿರಂತರ 30 ದಿನಗಳ ಕಾಲ ಆಹಾರ ಅಥವಾ ನೀರನ್ನೂ ಸಹ ಸೇವಿಸದೆ ಉಪವಾಸ ಮಾಡುವುದು ನಿಜಕ್ಕೂ ಸವಾಲೇ ಸರಿ. ಆದ್ದರಿಂದ ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು ಮತ್ತು ಸರಿಯಾದ ಆಹಾರ ಕ್ರಮವನ್ನು ಅನುಸರಿಸಬೇಕು.
Advertisement
Advertisement
ಜ್ಯೋತಿದೇವ್ಸ್ ಮಧುಮೇಹ(ಡಯಾಬಿಟಿಸ್) ಸಂಶೋಧನಾ ಕೇಂದ್ರದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಜೋತಿದೇವ್ ಕೇಶವದೇವ್, ಉಪವಾಸದ ಸಮಯದಲ್ಲಿ ಮಧುಮೇಹವು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿರಬೇಕು. ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಸಾಮಾನ್ಯ ಶ್ರೇಣಿಯಲ್ಲಿರಬೇಕಾದರೆ ಸಮತೋಲಿತ ಆಹಾರವನ್ನು ಸೇವಿಸಬೇಕಾಗುತ್ತದೆ ಎಂದು ಹೇಳುತ್ತಾರೆ.
Advertisement
Advertisement
ಯಾವ ಆಹಾರ ಉತ್ತಮ?
* ಕಾರ್ಬೋಹೈಡ್ರೇಟ್‍ಗಳನ್ನು ಸಮೃದ್ಧವಾಗಿ ಹೊಂದಿದ 1-2 ಖರ್ಜೂರಗಳು ಅಥವಾ ಹಾಲಿನಂತಹ ಆಹಾರದೊಂದಿಗೆ ಪ್ರಾರಂಭಿಸಬೇಕು. ನಂತರ ಬ್ರೌನ್ ರೈಸ್ ಮತ್ತು ಚಪಾತಿಗಳಂತಹ ಸಂಕೀರ್ಣ ಕಾರ್ಬೋಹೈಡ್ರೇಟ್‍ಗಳನ್ನು ಸೇವಿಸಬೇಕು. ಸೆಹ್ರಿ ಸಮಯದಲ್ಲಿ, ಏಕದಳ ಧಾನ್ಯಗಳು, ತರಕಾರಿಗಳನ್ನು ಸೇವಿಸಬಹುದು ಮತ್ತು ಅವುಗಳನ್ನು ಸಾಧ್ಯವಾದಷ್ಟು ತಡವಾಗಿ ತೆಗೆದುಕೊಳ್ಳಿ. ಪರ್ಯಾಯವಾಗಿ, ಮೀನು, ಟೋಫು ಮತ್ತು ಬೀಜಗಳಂತಹ ನೇರ ಪ್ರೋಟಿನ್‌ಗಳನ್ನು ಆರಿಸಿಕೊಳ್ಳಬಹುದು ಏಕೆಂದರೆ ಅವು ಶಕ್ತಿಯನ್ನು ಒದಗಿಸುತ್ತವೆ. ಕಡೆಯದಾಗಿ, ಮಲಗುವ ಮೊದಲು ಸೇವಿಸುವ ಒಂದು ಲೋಟ ಹಾಲು ಅಥವಾ ಹಣ್ಣು, ಬೆಳಿಗ್ಗೆ ತನಕ ಸಕ್ಕರೆ ಮಟ್ಟವನ್ನು ಕಾಪಾಡುತ್ತವೆ.
* ವ್ಯಾಯಾಮ ದಿನಚರಿ: ನಿಮ್ಮ ವ್ಯಾಯಾಮದ ದಿನಚರಿಯನ್ನು ಮುಂದುವರಿಸುವ ಗುರಿಯನ್ನು ಇಟ್ಟುಕೊಳ್ಳಿ. ಆದರೆ ಉಪವಾಸದ ಸಮಯದಲ್ಲಿ ದೇಹಕ್ಕೆ ದಂಡನೆ ನೀಡುವ ವ್ಯಾಯಾಮ ಮಾಡುವುದನ್ನು ಕಡಿಮೆ ಮಾಡಿ. ನೀವು ನಡಿಗೆ ಅಥವಾ ಯೋಗದಂತಹ ಶಾಂತ ವ್ಯಾಯಾಮಗಳ ಮೇಲೆ ಗಮನವನ್ನು ಹರಿಸಬಹುದು.
* ನಿದ್ರೆಯ ಸ್ವರೂಪಗಳು: ಸಾಕಷ್ಟು ನಿದ್ದೆ ಮಾಡುವುದು ಬಹಳ ಮುಖ್ಯ. ನಿದ್ರಾಹೀನತೆಯು ಹಸಿವಿನ ಹಾರ್ಮೋನುಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸಮಯ-ನಿಬರ್ಂಧಿತ ಆಹಾರ ಸೇವನೆಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಆಹಾರಗಳನ್ನು ವಿರೋಧಿಸಲು ಕಷ್ಟವಾಗುತ್ತದೆ. ಚಯಾಪಚಯ ಪ್ರಕ್ರಿಯೆಗೆ ಕೂಡ ನಿದ್ರೆ ಮುಖ್ಯವಾಗಿದೆ. ಇದು ಮಧುಮೇಹ ನಿರ್ವಹಣೆಗೆ ಅಗತ್ಯವಾದ ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣವನ್ನು ಸುಗಮಗೊಳಿಸುತ್ತದೆ ಎಂದು ಕಂಡುಬಂದಿದೆ.