ಆರೋಗ್ಯವಾದ ‘ಮೊಸರು ರಾಯಿತ’ ಮಾಡಿವುದರಿಂದ ಈ ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ಬೇಕಾದ ಪೋಷಕಾಂಶ ಹೆಚ್ಚು ಸೀಗುತ್ತೆ. ಇದನ್ನು ಮಾಡುವುದು ಸುಲಭವಾಗಿದ್ದು, ಮನೆಯಲ್ಲಿರುವ ಸಾಮಾಗ್ರಿಗಳನ್ನೆ ಬಳಸಿಕೊಂಡು ಮೊಸರು ರಾಯಿತ ರೆಡಿ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
* ಮೊಸರು- 1 ಕಪ್
* ಈರುಳ್ಳಿ – 1
* ರುಚಿಗೆ ತಕ್ಕಷ್ಟು ಉಪ್ಪು
* ಜೀರಿಗೆ ಪುಡಿ- 1 ಚಮಚ
* ಖಾರದಪುಡಿ- ಅರ್ಧ ಚಮಚ
* ತುಪ್ಪ- 1 ಚಮಚ
* ಸಾಸಿವೆ – ಅರ್ಧ ಚಮಚ
* ಜೀರಿಗೆ – ಅರ್ಧ ಚಮಚ
* ಉದ್ದಿನ ಬೇಳೆ- 1 ಚಮಚ
* ಒಣ ಮೆಣಸಿನಕಾಯಿ- 2
* ಕರಿಬೇವು- 8 ರಿಂದ 10 ಎಲೆ
Advertisement
Advertisement
ಮಾಡುವ ವಿಧಾನ:
Advertisement
* ಒಂದು ಬಟ್ಟಲಿನಲ್ಲಿ ಮೊಸರು ಹಾಕಿ ಅದಕ್ಕೆ ಕತ್ತರಿಸಿದ ಈರುಳ್ಳಿ, ತುಪ್ಪ ಹಾಕಿ ಬಿಸಿಯಾದ ಬಳಿಕ ಅರ್ಧ ಚಮಚ ಸಾಸಿವೆ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
Advertisement
* ನಂತರ ಸಾಸಿವೆ ಸಿಡಿದ ನಂತರ 1 ಚಮಚ ಉದ್ದಿನ ಬೇಳೆ, 1 ಒಣ ಮೆಣಸಿನಕಾಯಿ, ಕರಿಬೇವು ಹಾಕಿ ಹುರಿಯಿರಿ ಬಳಿಕ ಒಗ್ಗರಣೆಯನ್ನು ಮೊಸರಿಗೆ ಸೇರಿಸಿದ್ರೆ ರಾಯಿತ ಸವಿಯಲು ಸಿದ್ಧವಾಗುತ್ತದೆ.