ಬಿಸಿ ಬಿಸಿ ಅನ್ನಕ್ಕೆ ಟೊಮೆಟೊ ತಿಳಿಸಾರು ಸಖತ್ ಟೆಸ್ಟ್. ಈ ಸಾರು ಮಾಡುವುದು ತುಂಬಾ ಸುಲಭ. ಕೇಳಗಿನ ಸೂಚನೆಗಳನ್ನು ಫೋಲೋ ಮಾಡಿ ಮನೆಯಲ್ಲಿ ಸುಲಭವಾಗಿ ತಿಳಿಸಾರು ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಟೊಮೆಟೊ – 4
* ಈರುಳ್ಳಿ – 1 ಕಪ್
* ಬೆಳ್ಳುಳ್ಳಿ – 15 ಎಸಳು
* ಕೊತ್ತಂಬರಿ ಸೊಪ್ಪು – 1/2 ಕಪ್
* ಹಸಿಮೆಣಸಿನಕಾಯಿ – 3
* ಅರಿಶಿನ ಸ್ವಲ್ಪ
* ಉಪ್ಪು
* ಜೀರಿಗೆ ಪುಡಿ – 1 ಚಮಚ
* ಕಾಳು ಮೆಣಸಿನ ಪುಡಿ – 1 ಚಮಚ
Advertisement
Advertisement
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು:
* ಎಣ್ಣೆ – 1 ಚಮಚ
* ಸಾಸಿವೆ – 1/4 ಚಮಚ
* ಒಣಮೆಣಸಿನ ಕಾಯಿ – 3
* ಕರಿಬೇವು
* ಜಜ್ಜಿದ ಬೆಳ್ಳುಳ್ಳಿ – 5 ಎಸಳು
Advertisement
ಮಾಡುವ ವಿಧಾನ:
* ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ನಂತರ ಅಗತ್ಯವಿದ್ದಷ್ಟು ನೀರು, ಉಪ್ಪು, ಅರಿಶಿನ ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ.
* ಅದಕ್ಕೆ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ.
* ಒಗ್ಗರಣೆಯನ್ನು ಮಾಡಿ ಅದನ್ನು ಸಾರಿಗೆ ಸೇರಿಸಿ.
– ಬಿಸಿ ಟೊಮೆಟೊ ತಿಳಿ ಸಾರು ಅನ್ನದ ಜೊತೆ ಸವಿಯಲು ಸಿದ್ಧ.