ಇತ್ತೀಚಿನ ದಿನಗಳಲ್ಲಿ ವೆರೈಟಿ ತಿಂಡಿಗಳನ್ನು ಇಷ್ಟಪಡುವ ನಾವು ಆರೋಗ್ಯದ ಬಗ್ಗೆ ಮರೆತುಬಿಟ್ಟಿದ್ದೇವೆ. ಇದರ ಮಧ್ಯೆ ಆರೋಗ್ಯಕರ ಆಹಾರವನ್ನು ಮಾಡಿಕೊಂಡು ತಿನ್ನುವುದು ಕಷ್ಟಕರ ಎನಿಸುತ್ತದೆ. ಹೀಗಾಗಿ ಆರೋಗ್ಯಕ್ಕೂ ಒಳ್ಳೆಯದಾಗುವ ಸೋಯಾದಿಂದ ಆಹಾರವನ್ನು ತಯಾರಿಸಿಕೊಳ್ಳುವುದು ಉತ್ತಮ. ಅದಕ್ಕೆ ಇಂದು ಸುಲಭವಾಗಿ ಮಾಡುವ ಸೋಯಾ ಕಟ್ಲೆಟ್ ತಯಾರಿಸಿ
ಬೇಕಾಗುವ ಸಾಮಗ್ರಿಗಳು:
ಸೋಯಾ
ಆಲೂಗಡ್ಡೆ
ಈರುಳ್ಳಿ
ಬ್ರೆಡ್
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಬೆಳ್ಳುಳ್ಳಿ
ಗೆಜ್ಜರಿ
ಬೀನ್ಸ್
ಅರಿಶಿಣ ಸೇರಿದಂತೆ ಮಸಾಲಾಗಳು
ಮಾಡುವ ವಿಧಾನ:
ಮೊದಲಿಗೆ ಒಂದು ಬಾಣಲಿಗೆ ಸೋಯಾಬೀನ್ ಹಾಕಿ, ಅದಕ್ಕೆ ಕುದಿಯುವ ನೀರನ್ನು ಹಾಕಿ. 15 ನಿಮಿಷಗಳ ಬಳಿಕ ಸೋಯಾವನ್ನು ಬೇರೆ ಪಾತ್ರೆಗೆ ಹಾಕಿ, ಅವುಗಳನ್ನ ಹಿಂಡುವ ಮೂಲಕ ನೀರನ್ನು ಬೇರ್ಪಡಿಸಿ. ನಂತರ ಮಿಕ್ಚರ್ ಗೆ ಹಾಕಿಕೊಂಡು ಅವಲಕ್ಕಿಯಂತೆ ರುಬ್ಬಿಕೊಳ್ಳಿ.
ಇನ್ನೊಂದು ಬಾಣಲಿಗೆ ಎಣ್ಣೆ, ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿಕೊಂಡು ಬಾಡಿಸಿಕೊಳ್ಳಿ. ಬಳಿಕ ಅದಕ್ಕೆ ಗಜರಿ, ಬೀನ್ಸ್ ಹಾಕಿಕೊಳ್ಳಿ. ಅದಕ್ಕೆ ಉಪ್ಪು, ಅರಿಶಿಣ ಪುಡಿ, ಗರಂ ಮಸಾಲ, ರುಬ್ಬಿದ ಸೋಯಾ, ಮೆಣಸಿನ ಪುಡಿ, ಚಾಟ್ ಮಸಾಲ, ಖಾರದಪುಡಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಅದಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಚಿಕ್ಕದಾಗಿ ಹೆಚ್ಚಿ ಹಾಕಿಕೊಳ್ಳಿ. ನಂತರ ಚೆನ್ನಾಗಿ ಸ್ಮ್ಯಾಶ್ ಮಾಡಿ ಕಲಸಿ. ಕೊನೆಗೆ ಒಲೆಯನ್ನು ಆರಿಸಿ ಮಿಶ್ರಣವನ್ನು ಆರಲು ಬಿಡಿ.
ಮಿಶ್ರಣ ಆರಿದ ನಂತರ ಕಟ್ಲೆಟ್ ಆಕಾರಕ್ಕೆ ಮಾಡಿಕೊಂಡು, ಒಂದೊಂದಾಗಿ ಎಣ್ಣೆಯಲ್ಲಿ ಕರೆದುಕೊಳ್ಳಿ. ಆಗ ರುಚಿಕರವಾದ ಸೋಯಾ ಕಟ್ಲೆಟ್ ತಯಾರಾಗುತ್ತದೆ.
ಸೋಯಾಬೀನ್ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ತೂಕ ನಿಯಂತ್ರಣ, ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.





