ಅಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಇರುವ ಪದಾರ್ಥವೆಂದರೆ ಅವಲಕ್ಕಿಯಾಗಿದೆ. ಗಡಿಬಿಡಿಯ ಸಮಯದಲ್ಲಿ ಸಹಾಯಕ್ಕೆ ಬರುವುದು. ಸ್ವಲ್ಪ ಹೊತ್ತು ನೆನೆ ಹಾಕಿ ಅವಲಕ್ಕಿ ಒಗ್ಗರಣೆಯಿಂದ ಹಿಡಿದು, ಕೇಸರಿಭಾತ್, ಉಪ್ಪಿಟ್ಟು, ಬಿಸಿ ಬೇಳೆ ಬಾತ್, ದೋಸೆ ಮೊದಲಾದ ತಿಂಡಿಗಳನ್ನು ಸಿದ್ಧಪಡಿಸಬಹುದಾಗಿದೆ. ಹೀಗಿರುವಾಗ ನೀವು ಒಮ್ಮೆಯಾದರೂ ಅವಲಕ್ಕಿ ಲಾಡು ತಿಂದಿಲ್ಲವೆಂದರೆ ಒಮ್ಮೆ ಮಾಡಿ ನೋಡಲು ಇಲ್ಲಿದೆ ವಿಧಾನ.
Advertisement
ಬೇಕಾಗುವ ಸಾಮಗ್ರಿಗಳು:
* ಅವಲಕ್ಕಿ – 1 ಕಪ್
* ತೆಂಗಿನ ಹುಡಿ – ಅರ್ಧ ಕಪ್
* ಸಕ್ಕರೆ – 2 ಕಪ್
* ಏಲಕ್ಕಿ ಪುಡಿ – ಅರ್ಧ ಚಮಚ
* ಗೋಡಂಬಿ – 3-4
* ಬಾದಾಮಿ – 3-4
* ಪಿಸ್ತಾ – 3-4
* ದ್ರಾಕ್ಷಿ – 8 9.
* ತುಪ್ಪ – 4-5 ಚಮಚ
* ಹಾಲು- 1 ಕಪ್
Advertisement
ಮಾಡುವ ವಿಧಾನ:
* ಅವಲಕ್ಕಿಯನ್ನು ಬಿಸಿಯಾದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.
* ತೆಂಗಿನ ತುರಿ ಪೌಡರ್ ಅನ್ನು ಸೇರಿಸಿಕೊಂಡು ಹುರಿದ ಅವಲಕ್ಕಿಯೊಂದಿಗೆ ಮಿಶ್ರ ಮಾಡಿ. ಇದನ್ನೂ ಓದಿ: ಸುಲಭವಾಗಿ ಮಾಡಿ ಬಿಸಿ ಬಿಸಿಯಾದ ತೆಂಗಿನ ಕಾಯಿ ದೋಸೆ
Advertisement
* ಈಗ ಸಕ್ಕರೆ, ಅವಲಕ್ಕಿ, ತೆಂಗಿನ ತುರಿ ಪೌಡರ್ ಗ್ರೈಂಡರ್‍ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು.
* ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಮಂದ ಉರಿಯಲ್ಲಿ ಹುರಿದುಕೊಳ್ಳಿ.
Advertisement
* ಅವಲಕ್ಕಿ ಮಿಶ್ರಣಕ್ಕೆ ಈಗ ಎಲ್ಲಾ ಡ್ರೈ ಪ್ರುಟ್ಸ್ ಅನ್ನು ಸೇರಿಸಿಕೊಳ್ಳಿ. ಹಾಲನ್ನು ತುಸು ಬೆಚ್ಚಗೆ ಮಾಡಿಕೊಂಡು ಅದಕ್ಕೆ ಸೇರಿಸಿ.
* ಇನ್ನು ಲಾಡು ಕಟ್ಟುವುದಕ್ಕಾಗಿ ತುಪ್ಪವನ್ನು ಸೇರಿಸಿಕೊಂಡು ಉಂಡೆಯನ್ನು ಸಿದ್ಧಪಡಿಸಿಕೊಳ್ಳಿ. ಈಗ ರುಚಿಯಾದ ಅವಲಕ್ಕಿ ಲಾಡು ಸವಿಯಲು ಸಿದ್ಧವಾಗುತ್ತದೆ.