ಇತ್ತೀಚಿಗೆ ನಾನ್‍ವೆಜ್ ಆಹಾರ ಪ್ರಿಯರು ದಿನಕ್ಕೊಂದು ಬಗೆಯ ಖಾದ್ಯಗಳನ್ನು ಹುಡುಕುವುದು ಸಹಜ. ಕೆಲವರಂತೂ ನೆಚ್ಚಿನ ಖಾದ್ಯಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ಅರಸಿ ಹೋಗುತ್ತಾರೆ. ವಾರಾಂತ್ಯ ಬಂತೆಂದರೆ ಸಾಕು ವಿಭಿನ್ನ ಖಾದ್ಯಗಳನ್ನೂ ಸಿದ್ಧಪಡಿಸಿ ಗ್ರಾಹಕರನ್ನು ಸೆಳೆಯಲು ಹೋಟೆಲ್ ಮಂದಿ ಕಾಯುತ್ತಿರುತ್ತಾರೆ. ಇದರಲ್ಲಿ ಮಟನ್ ಬ್ರೈನ್ ಫ್ರೈ (ಮೆದುಳು ಫ್ರೈ)ಸಹ ಒಂದು. ಆದರೀಗ ನೀವು ಯಾವುದೇ ಹೋಟೆಲ್‍ಗಳಿಗೆ ಅಲೆದಾಡಬೇಕಿಲ್ಲ. 15 ರಿಂದ 20 ನಿಮಿಷ ಸಮಯವಿದ್ದರೆ ಸಾಕು ಮನೆಯಲ್ಲೇ ಬ್ರೈನ್ ಫ್ರೈ ಮಾಡಿ ಸವಿಯಬಹುದು. ಅದರ ಚುಕುಟು ಮಾಹಿತಿ ಇಲ್ಲಿದೆ.
Advertisement
ಬೇಕಾಗಿರುವ ಪದಾರ್ಥಗಳು:
* ಮಟನ್ ಬ್ರೈನ್ – 1
* ಕಟ್ ಮಾಡಿದ ಈರುಳ್ಳಿ – 1 ಕಪ್
* ಹಸಿರು ಮೆಣಸಿನಕಾಯಿ – 1
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1/2 ಟೀಸ್ಪೂನ್
* ಕರಿಬೇವಿನ ಎಲೆಗಳು – ಅರ್ಧ ಕಪ್
* ಜೀರಿಗೆ – 1/4 ಟೀಸ್ಪೂನ್
* ಲವಂಗ – 3
* ಏಲಕ್ಕಿ – 1
Advertisement
Advertisement
* ದಾಲ್ಚಿನ್ನಿ – 1/2
* ಮೆಣಸು – 1/2 ಟೀಸ್ಪೂನ್
* ಕೆಂಪು ಮೆಣಸಿನ ಪುಡಿ – 1/4 ಟೀಸ್ಪೂನ್
* ಕೊತ್ತಂಬರಿ ಪುಡಿ – 1/4 ಟೀಸ್ಪೂನ್
* ಗರಂ ಮಸಾಲಾ – 1 ಟೀಸ್ಪೂನ್
* ಅರಿಶಿನ ಪುಡಿ – 1/4 ಟೀಸ್ಪೂನ್
* ಅಗತ್ಯಕ್ಕೆ ತಕ್ಕಂತೆ ಅಡಿಗೆ ಎಣ್ಣೆ
* ಅಗತ್ಯವಿರುವಷ್ಟು ಉಪ್ಪು
Advertisement
ಮಾಡುವ ವಿಧಾನ:
* ಮೊದಲು ಚೆನ್ನಾಗಿ ಮೆದುಳನ್ನು ತೊಳೆಯಿರಿ. ನಂತರ ಬೇರೆ ಪಾತ್ರೆಯಲ್ಲಿ ನೀರು, ಸ್ವಲ್ಪ ಉಪ್ಪು ಮತ್ತು ಮೆದುಳು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ. ಪಕ್ಕದಲ್ಲಿ ಇಡಿ.
* ಬೇರೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಜೀರಿಗೆ, ದಾಲ್ಚಿನ್ನಿ, ಲವಂಗ ಮತ್ತು ಏಲಕ್ಕಿ ಮತ್ತು ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಅದಕ್ಕೆ ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಫ್ರೈ ಮಾಡಿ.
* ಅದಕ್ಕೆ ಅರಿಶಿನ, ಉಪ್ಪು, ಮೆಣಸು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಮೆದುಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಮಸಾಲಾದಲ್ಲಿ ಮೆದುಳನ್ನು ಸೇರಿಸಿ. ನಂತರ ಮಸಾಲೆ ಜೊತೆ ಮೆದುಳಿನೊಂದಿಗೆ ಚೆನ್ನಾಗಿ ಮಿಶ್ರಣವಾಗುವವರೆಗೆ ಮಿಕ್ಸ್ ಮಾಡಿ.
* ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಲು ಬಿಡಿ.
– ಈಗ ಮಟನ್ ಬ್ರೈನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧವಾಗಿದೆ.