ಹಾಲಿನ ಉತ್ಪನ್ನವಾದ ಪನ್ನೀರ್ ಉತ್ತರ ಭಾರತದ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದು. ಪನ್ನೀರ್‍ನಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಪಂಜಾಬಿ ಡಾಬಾಗಳಲ್ಲಿ ಸಿಗುವ ರುಚಿಯಾದ ಮಟರ್ ಪನ್ನೀರ್ ಎಲ್ಲರಿಗೂ ಇಷ್ಟವಾಗುತ್ತದೆ. ಅದನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡು, ಮನೆಯಲ್ಲಿ ನೀವೇ ಮಟರ್ ಪನ್ನೀರ್ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1. ಪನ್ನೀರ್ – 250 ಗ್ರಾಂ
2. ಹಸಿ ಬಟಾಣಿ- 2 ಕಪ್
3. ತುಪ್ಪ- 4 ಚಮಚ
4. ಶುಂಠಿ ಬೆಳ್ಳುಳ್ಳಿ ಪೇಸ್ಟ್- 3 ಚಮಚ
5. ಈರುಳ್ಳಿ-1 ಕಪ್
6. ಟಮೋಟೊ- 2 ಕಪ್
7 ಅರಿಶಿಣ- 1 ಚಮಚ
8. ಗರಂ ಮಸಾಲಾ- 1/2 ಚಮಚ
9. ಖಾರದಪುಡಿ- 2 ಚಮಚ
10. ಕೊತ್ತಂಬರಿ ಸೊಪ್ಪು- ಸ್ವಲ್ಪ
11. ಉಪ್ಪು- ರುಚಿಗೆ ತಕ್ಕಷ್ಟು
12. ಹಾಲಿನ ಕೆನೆ- 3 ಚಮಚ
Advertisement
ಮಾಡುವ ವಿಧಾನ :
* ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಚೌಕಾಕಾರದಲ್ಲಿ ಕತ್ತರಿಸಿದ ಪನ್ನೀರನ್ನು ಅದರಲ್ಲಿ ಹಾಕಿ ಹೊಂಬಣ್ಣ ಬರುವ ತನಕ ಫ್ರೈ ಮಾಡಿ ತೆಗೆದಿಡಿ.
* ಅದೇ ಬಾಣಲೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ.
* ನಂತರ ಅದಕ್ಕೆ ಅರಿಶಿಣ, ಖಾರದಪುಡಿ, ಗರಂಮಸಾಲಾ, ಟಮೋಟೊ ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ.
* ಅನಂತರ ಬಟಾಣಿಯನ್ನು ಹಾಕಿ 3 ನಿಮಿಷದವರೆಗೆ ಬೇಯಿಸಿ, ಕರಿದ ಪನೀರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳವನ್ನು ಮುಚ್ಚಿ.
* 10 ನಿಮಿಷದ ನಂತರ ಬಾಣಲೆಯನ್ನು ಕೆಳಗಿಳಿಸಿ ಹಾಲಿನ ಕೆನೆಯನ್ನು ಸೇರಿಸಿ ಚಪಾತಿ ಅಥವಾ ರೋಟಿಯೊಂದಿಗೆ ಸವಿಯಲು ಕೊಡಿ