ಮಸ್ಸೊಪ್ಪು ಎಂಬುದು ಜನಪ್ರಿಯ ಸೊಪ್ಪು ಸಾರಿನಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಸಾರಿನ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತೆ. ಅದರಲ್ಲಿಯೂ ಮುದ್ದೆ ಜೊತೆ ಇದರ ಕಾಂಬಿನೇಷನ್ ಸೂಪರ್ ಆಗಿ ಇರುತ್ತೆ. ಈ ಸಾರು ಮಾಡುವುದು ತುಂಬಾ ಸುಲಭ. ಅದರಲ್ಲಿಯೂ ಇದರಲ್ಲಿ ಎಲ್ಲ ರೀತಿಯ ಸೊಪ್ಪು ಮಿಶ್ರಣವಾಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಟ್ರೈ ಮಾಡಿ.
Advertisement
ಬೇಕಾಗಿರುವ ಪದಾರ್ಥಗಳು:
* ಕಟ್ ಮಾಡಿದ ಪಾಲಕ್ ಸೊಪ್ಪು – 2 ಕಪ್
* ಸಬ್ಬಸಿಗೆ ಸೊಪ್ಪು – 1 ಕಪ್
* ಮೆಂತ್ಯ ಸೊಪ್ಪು – 1 ಕಪ್
* ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ಬೆಳೆ – 1 ಕಪ್
* ಕಟ್ ಮಾಡಿದ ಈರುಳ್ಳಿ – ಒಂದುವರೆ ಕಪ್
* ಕಟ್ ಮಾಡಿದ ಟೊಮೆಟೊ – 2 ಕಪ್
* ಹಸಿ ಮೆಣಸಿನಕಾಯಿ – 3
* ತುರಿದ ತೆಂಗಿನಕಾಯಿ – ಅರ್ಧ ಕಪ್
Advertisement
* ಹುಣಸೆಹಣ್ಣು – 1 ಟೀಚಮಚ
* ಸಾಂಬಾರ್ ಪುಡಿ – 2 ಚಮಚ
* ಅಡುಗೆ ಎಣ್ಣೆ – 2-3 ಟೀಸ್ಪೂನ್
* ಸಾಸಿವೆ – ಅರ್ಧ ಚಮಚ
* ಕರಿಬೇವಿನ ಎಲೆಗಳು – 5 ಎಲೆಗಳು
* ಒಣ ಕೆಂಪು ಮೆಣಸಿನಕಾಯಿ – 2
* ಬೆಳ್ಳುಳ್ಳಿ – 4
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಎಲ್ಲ ಸೊಪ್ಪುಗಳನ್ನು ನೀರಿನಲ್ಲಿ ತೊಳೆಯಿರಿ. ಬೆಳೆ, ಟೊಮೆಟೊ, ಹಸಿರು ಮೆಣಸಿನಕಾಯಿ ಮತ್ತು 1 ಕಪ್ ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಸ್ಪಲ್ಪ ಸಮಯ ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣವನ್ನು ಮಸಿಯಿರಿ. ಆದರೆ ಹೆಚ್ಚು ನುಣ್ಣಗೆ ಮಸಿಯ ಬಾರದು.
* ಪ್ಯಾನ್‍ನಲ್ಲಿ ಎಣ್ಣೆ ಸಾಸಿವೆ, ಕರಿಬೇವು, ಒಣ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ, ಹುಣಸೆಹಣ್ಣು ರಸ ಮತ್ತು ಸಾಂಬಾರ್ ಪುಡಿಯನ್ನು ಹಾಕಿ ಫ್ರೈ ಮಾಡಿ.
* ಇದಕ್ಕೆ ನೀರು 2 ರಿಂದ 3 ಕಪ್ ನೀರು ಸೇರಿಸಿ ಮಸಿದ ಸೊಪ್ಪಿನ ಮಿಶ್ರಣವನ್ನು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಸೇರಿಸಿ ಕುದಿಸಿ.
* ಕುದಿಯಲು ಪ್ರಾರಂಭಿಸಿದ ನಂತರ, ಗ್ಯಾಸ್ ಆಫ್ ಮಾಡಿ.
– ಈ ಸಾರನ್ನು ತುಪ್ಪದ ಜೊತೆ ರಾಗಿ ಮುದ್ದೆ / ಅನ್ನದೊಂದಿಗೆ ಬಡಿಸಿ. ಟೆಸ್ಟ್ ಮಾಡಿ.